ಜಿಜ್ನಾಸೆ1 ಖುಷಿ ಎಲ್ಲಿದೆ?
ಖುಷಿಗೊಂದು ವ್ಯಾಖ್ಯಾನ ಹೇಗೆ ಕೊಡ್ತೀರಿ?
ಬೇಸರ ಇಲ್ಲದ ಸ್ಥಿತಿಯೇ? ಕಡಿಮೆ ಬೇಸರ ಇರುವ ಸ್ಥಿತಿಯೇ? ಕ್ಷಣಕಾಲ ಆವರಿಸುವ ನಿರಾಳತೆಯ ಗುಂಗಿನ ನಶೆಯೇ? ಅಥವಾ ಸಂಭವಿಸಬೇಕಾಗಿದ್ದ ದುರಂತವೊಂದು ಸ್ವಲ್ಪದರಲ್ಲೇ ತೀವ್ರತೆ ಕಳೆದುಕೊಂಡು ಸತ್ತುದರ ವಿಜಯೋತ್ಸವವೇ? ಇದಮಿತ್ಥಂ ನಿರೂಪಣೆಗೆ ಇದೇನು ಗಣಿತ ಸೂತ್ರವಲ್ಲ ತಾನೆ.
ಒಂದು ಕಾಲಘಟ್ಟಕ್ಕೆ ಹೊಂದುವಂತೆ ಅಥವಾ ಒಂದು ಪರಿಸ್ಥಿತಿಗೆ ಹೊಂದುವಂತೆ ಅಥವಾ ಒಂದು ವಯೋಮಾನಕ್ಕೆ ಅನ್ವಯವಾಗುವಂತೆ ಖುಷಿಯ ಕಲ್ಪನೆ, ಖುಷಿಯ ಅನುಭವಿಸುವಿಕೆಯ ತೀವ್ರತೆ ಬದಲಾಗ್ತಾ ಇರುತ್ತದೆ ಅನಿಸೋದಿಲ್ವ? ಖುಷಿಯನ್ನು ಅನುಭವಿಸುವ ಕಾಲಮಿತಿ, ಅದರ ಸಂಭ್ರಮ ಬೀರುವ ಪರಿಣಾಮ ಕೂಡಾ ಪರಿಸ್ಥಿತಿಗಳನ್ನು ಅವಲಂಬಿಸಿರುತ್ತದೆ ತಾನೆ? ತಿನ್ನುವುದಕ್ಕೆ ಬಹಳ ಹೊತ್ತಿನಿಂದ ಏನೂ ಸಿಗದೆ ಹಸಿದು ಬಳಲಿದವನಿಗೆ ರಸ್ತೆ ಬದಿಯ ಮರದಲ್ಲಿ ಸಿಕ್ಕ ಗೇರು ಹಣ್ಣನ್ನೇ ಹೊಟ್ಟೆ ತುಂಬಾ ತಿಂದಾಗ ಆ ಕ್ಷಣಕ್ಕೆ ಖುಷಿಯಾಗಬಹುದು. ಸ್ವಲ್ಪ ಮುಂದೆ ಹೋದಗ ಸಾರ್ವಜನಿಕ ಅನ್ನಸಂತರ್ಪಣೆ ಕಾಣಲು ಸಿಕ್ಕರೆ, ಅಯ್ಯೋ ಇಷ್ಟೊಳ್ಳೆ ಊಟವನ್ನು ಕಳೆದುಕೊಂಡೆನಲ್ಲ? ಅನ್ನುವ ಪರಿತಾಪದ ಜೊತೆಗೆ ಹೊಟ್ಟೆ ತುಂಬಾ ಗೇರುಹಣ್ಣು ತಿಂದು, ಮುಂದೆ ಮೃಷ್ಟಾನ್ನ ಭೋಜನ ಸವಿಯುವ ಸದಾವಕಾಶ ತಪ್ಪಿತಲ್ಲಾ ಅನ್ನುವ ಬೇಸರವೂ ಕಾಡಬಹುದು.
---------
ಪುಟ್ಟ ಪುಟ್ಟ ಕ್ಷಣಗಳೂ ಖುಷಿಯನ್ನು ಕಾಣಿಸಿಕೊಡಬಹುದು. ಆದರೆ, ಅದಕ್ಕೊಂದೂ ಆಯುಷ್ಯ ಅಂತ ಇರ್ತದಲ್ಲ? ಖುಷಿಯನ್ನು ಉಳಿಸಿಕೊಳ್ಳುವುದು, ಮೆಲುಕು ಹಾಕುವುದು, ಅದರ ಆಹ್ಲಾದಕತೆಯಲ್ಲಿ ಕ್ಷಣಕಾಲ ಜಂಜಡಗಳನ್ನು ಮರೆತು ನಿರಾಳರಾಗುವುದಕ್ಕೂ ಸಾಧ್ಯ. ಆದರೆ ಎಷ್ಟು ಹೊತ್ತು, ಎಷ್ಟು ಗಂಟೆ, ಎಷ್ಟು ದಿನ ಅಂತಿರೋದು? ಖುಷಿಯನ್ನು ಕಟ್ಟಿ ಹಾಕಿ ಜೇಬಿನಲ್ಲಿಟ್ಟು ತಿರುಗಾಡಲಾಗದು. ಬೊಗಸೆಗೆ ಸಿಕ್ಕಿದ ಖುಷಿಯನ್ನು ಬಾಚಿ ಕುಡಿದು ಅದೇ ಗುಂಗಿನಲ್ಲಿ ತುಂಬ ದಿನ ಮೈಮರೆಯಲಾಗದು. ಹಾಗೆ ನೋಡುವುದಕ್ಕೆ ಹೋದರೆ ಕಥೆಗಳಲ್ಲಿ, ಸಿನಿಮಾಗಳಲ್ಲಿ ಬರುವ ಹಾಗೆ ಮತ್ತೆ ಅವರು ಸುಖವಾಗಿ ಬಾಳಿ ಬದುಕಿದರು ಅನ್ನುವ ಥರ ಬದುಕಿನ ಉಳಿದ ಭಾಗವೆಲ್ಲಾ ಖುಷಿಯೋ ಖುಷಿ ಅನ್ನುವ ಇತ್ಯರ್ಥಕ್ಕೆ ಬರಲು ಸಾಧ್ಯವೇ ಇಲ್ಲ.
ಕುಡುಕನಿಗೆ ಕುಡಿಯೋದು ಖುಷಿ ಕೊಟ್ರೆ, ಧೂಮಪಾನಿಗೆ ಸಿಗರೆಟ್ ಹೊಗೆಯೇ ನಿರಾಳತೆ ತರುತ್ತದಂತೆ. ಚಾರಣನಿಗನಿಗೆ ಬೆವರು ಸುರಿಸಿ ಗುಡ್ಡ ಹತ್ತಿದಾಗಲೇ ಸಂಭ್ರಮ, ಸಡಗರ. ಪ್ರಕೃತಿ ದೇವರ ಮುಂದೆ ಇನ್ಯಾವ ಸಂತೋಷವೂ ಕ್ಷಣಿಕ ಅನ್ನುವ ಥರ. ಯಕ್ಷಗಾನ ನೋಡುವವನಿಗೆ ನಿದ್ದೆಗೆಟ್ಟು ಪ್ರಸಂಗಗಳನ್ನು ನೋಡುತ್ತಾ ಕೂರುವುದೇ ಒಂದು ಸಂಭ್ರಮ. ಅದರಲ್ಲೇನೋ ಹೊಸ ಉತ್ಸಾಹ ದಕ್ಕಿಸುವ ಪ್ರಯತ್ನ. ಅದರ ಮೆಲುಕಿನಲ್ಲಿ ಮತ್ತಷ್ಟು ಜೀವನೋತ್ಸಾಹ ಪಡೆಯುವ ತವಕ. ಖುಷಿಯನ್ನು ಕಂಡುಕೊಳ್ಳುವುದು, ಅದನ್ನು ಅನುಭವಿಸುವುದು, ಮತ್ತೆ ಖುಷಿಯನ್ನು ಹೇಳಿಕೊಳ್ಳುವುದೋ, ತೋರಿಸಿಕೊಳ್ಳುವುದೋ ಅದು ಮುಖದಲ್ಲಿ, ಬರಹದಲ್ಲಿ ತೋರ್ಪಡಿಕೆಯಾಗುವುದೋ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನ. ಖುಷಿಯನ್ನು ಬೇಸರವನ್ನು ಶಬ್ದಗಳ ಹಾಗೆ, ಮಳೆ ಸುರಿದ ಹಾಗೆ, ಚಳಿಯ ಹಾಗೆ ಡೆಸಿಬಲ್, ಸೆಂಟಿಗ್ರೇಡ್‌ಗಳ ಹಾಗೆ ಅಳೆಯುವುದಕ್ಕೆ ಆಗುತ್ತದೆಯೇ ಅಥವಾ ಇದುವೇ ಖುಷಿ, ಇದುವೇ ಬೇಸರ ಅಂತ ಬೇರ್ಪಡಿಸುವುದಕ್ಕಾಗುತ್ತದೆಯೇ?
ಚಿಕ್ಕವರಿದ್ದಾಗ ಬೇಗ ದೋಡ್ಡೋರಾಗೋದಿಲ್ಲ ಎಂಬ ಕೊರಗು, ದೊಡ್ಡೋರಾದ ಮೇಲೆ ಯಾಕೆ ಬಾಲ್ಯ ಕಳೆದುಹೋಯ್ದು ಅಂತ ನೋಯುವ ಬೇಸರವಿದೆಯಲ್ಲ? ಇದು ಬದುಕಿನ ವೈರುಧ್ಯ. ಅಂದರೇನು? ಕಳೆದುಕೊಂಡ ಬಳಿಕ ಕಂಡುಕೊಳ್ಳುವ ಖುಷಿಯ ನೆನಪುಗಳವು. ನಾವು ಖುಷಿ ಪಟ್ಟಿದ್ವಿ ಅನ್ನೋದು ಅಥವಾ ಇದುವೇ ಬದುಕಿನ ಖುಷಿಯ ಕಾಲಘಟ್ಟ ಅಂತ ಆ ಕ್ಷಣಕ್ಕೆ ತೋರದೆ ಹೋಗಬಹುದು. ಕಂಡುಕೊಳ್ಳಲಾಗದಿರಬಹುದು. ಆದರೆ, ಮತ್ತೊಮ್ಮೆ ಆ ಖುಷಿಗಿಂತ ಕಠಿಣವಾಗ ಪರಿಸ್ಥಿತಿಯನ್ನು ಎದುರಿಸಬೇಕಾಗಿ ಬಂದಾಗಲೆಲ್ಲಾ ಗೊತ್ತಾಗುತ್ತದೆ... ಹೌದು ಖುಷಿಯನ್ನು ಕಳಕೊಂಡಿದ್ದೇನೆ ಅಂತ.
ಜೊತೆಗಿರುವಾಗ ಎಷ್ಟೋ ವಿಚಾರಗಳ ಬೆಲೆ ಗೊತ್ತಾಗೊದೇ ಇಲ್ಲ. ಅಥವಾ ನಾನೀಗ ಬದುಕಿನ ಅತ್ಯಂತ ಖುಷಿಯ ಕ್ಷಣದಲ್ಲಿದ್ದೇನೆ ಅಥವಾ ಇದು ನನ್ನ ಬದುಕಿನ ಘೋರ ನೋವು ಅಂತ ಯಾರೂ ಹೇಳುವ ಹಾಗಿಲ್ಲ. ಈ ವರೆಗಿನ ಬದುಕಿನಲ್ಲಿ ಕಂಡ ಅತ್ಯಂತ ಖುಷಿ ಅಂತ ಹೇಳ್ಬಹುದೇನೋ...ಭವಿಷ್ಯ ಕಂಡವರಿಲ್ಲ. ಈಗಿರೋದಕ್ಕಿಂತ ಹೆಚ್ಚಿನ ಆನಂದವೋ, ದುಃಖವೋ ಮುಂದೆ ಕಾದಿರಲಿಕ್ಕೂ ಸಾಕು. ಯಾರಿಗೊತ್ತು. ನೋಡಿದವರಿಲ್ಲ, ನಿಖರವಾಗಿ ಊಹಿಸಬಲ್ಲವರಿಲ್ಲ.
ಕೆಲವೊಮ್ಮೆ ಖುಷಿ ಅಂದುಕೊಂಡಿದ್ದು ಸಂತಸವಾಗಿರೋದಿಲ್ಲ. ಅಥವಾ ಬೇಸರ ಅಂತ ಭ್ರಮಿಸಿದ್ದು ವಾಸ್ತವದಲ್ಲಿ
ದುಃಖಕಾರಕವಾಗಿರೋದೂ ಇಲ್ಲ. ಆ ಕ್ಷಣಕ್ಕೆ, ಆ ಸಂದರ್ಭಕ್ಕೆ ಹಾಗನಿಸಿರುತ್ತದೆ ಅಷ್ಟೇ. ಹುಸಿ ನೋವು ಹುಟ್ಟಿದ ಹಾಗೆ. ಅದು ಕಂಡುಕೊಳ್ಳಲಾಗುವುದು ತಡವಾಗಿ ತಾನೆ. ನೋವನ್ನು ಅರಗಿಸಲು, ಅರ್ಥಮಾಡಿಕೊಳ್ಳಲು, ಮಾನಸಿಕವಾಗಿ ಸಿದ್ಧರಾಗಲು ಒಂದಷ್ಟು ಹೊತ್ತು ಬೇಕು. ಖುಷಿಯನ್ನೂ ಅಷ್ಟೇ. ಅರಗಿಸಿಕೊಳ್ಳಲು, ಅದರೊಳಗೆ ತಲ್ಲೀನರಾಗಲು, ಅನುಭವಿಸಲು, ಸಾವರಿಸಿಕೊಳ್ಳಲು ವ್ಯವಧಾನ ಬೇಕಲ್ವ. ಹಾಗಾಗಿ ಯಾರಿಗೊತ್ತು... ಈಗಿರುವ ಪರಿಸ್ಥಿತಿ,ಈಗಿರುವ ಅವಕಾಶ ಅಥವಾ ಈಗ ಕಾಡುತ್ತಿರುವ ಸನ್ನಿವೇಶ ಬದುಕಿನ ಅತ್ಯಂತ ಖುಷಿಯದ್ದೋ, ದುಃಖದ್ದೋ ಘಳಿಗೆ ಆಗಿರಬಹುದು. ಅದನ್ನು ನಿರ್ಧರಿಸೋದು ಬರಲಿರುವ ನಾಳೆಗಳಲ್ವ?
(ಮುಂದುವರಿಯಲಿದೆ)

No comments:
Post a Comment