ಮಾತಿಗೂ ಮೀರಿದ್ದು...
ಮಾತು ಸೊರಗಿದಲ್ಲಿ
ನಿಶ್ಯಬ್ಧವೇ ಸಾಮ್ರಾಜ್ಯ
ಭಾವ ಮಾತಾಗಲು ತಡಕಾಡಿದಲ್ಲಿ
ಸದ್ದು ಕರ್ಕಶವಾಗಿ, ಭಾರವಾಗಿ
ಪದಗಳ ಪುಂಜ ಕೈಗೆ ಸಿಗದೆ
ನಾಲಗೆಯೂ, ಗಂಟಲೂ ಬಡವಾದಲ್ಲಿ
ಮೌನವೂ ಮಾತಾಡುತ್ತದೆ
ಸಂವಹನಕ್ಕೆ ಮಾತೂ ಒಂದು ದಾರಿ
ಹೊರತು ಮಾತೇ ಸಂಭಾಷಣೆಯಲ್ಲ
ಸಂದೇಶ, ಕರೆ, ಬರಹದ್ದೂ ಒಂದು ಭಾಷೆ
ಹೇಳಲಾಗದ್ದು, ಹೇಳಹೊರಟು ಬಡವಾಗಿದ್ದು
ಕೇಳದೇ ಬಾಕಿಯಾಗಿದ್ದು
ಹೇಳಲೂ ಕೇಳಲೂ ಸಂದರ್ಭ ಒದಗದ್ದು
ಮೂಕವಾಗಿಯೂ ತಿಳಿಯಬಹುದಾಗಿದ್ದು
ಅಕ್ಕಪಕ್ಕವಿದ್ದರೂ ಮಾತನಾಡದೇ ಎಲ್ಲ
ತಿಳಿಯಬಲ್ಲವರು ಉತ್ತಮ ಸ್ನೇಹಿತರಂತೆ
ಕೇಳದೆಯೇ ಕಾಣಬಲ್ಲವರು
ಹೇಳದೆಯೇ ಭಾವವ ದಾಟಿಸಬಲ್ಲವರು
ಗಾಢ ನೆನಪೊಂದನ್ನು ನಿಗೂಢ ವರ್ತಮಾನವೊಂದನ್ನು
ಕಾಡದೇ, ಬೇಡದೇ ಹಾಗ್ಹಾಗೆ
ಗ್ರಹಿಸಬಲ್ಲವನೇ ನಿಜ ಗೆಳೆಯ
ಸಿಟ್ಟು ಅಸಹನೆ, ಬೇಜಾರಿಗೆ
ಮಾತಿನ ರೂಪ ಕೊಡದೆ, ಕೊಡಲಾಗದೆ
ಗೊಣಗಿ, ನೊಂದು ತಣ್ಣನೆ ಕೂತು
ಕರ್ಕಶದ, ಅತಿರೇಕದ ವರ್ತನೆಯ ಸಹಿಸಿ
ಸದ್ದಿನಿಂದ ಬೇಜಾರಾಗಿ ಖುದ್ದಾಗಿ ಖಂಡಿಸದೆ
ಮತ್ತದೇ ನಿಶ್ಯಬ್ಧವೆಂಬೋ ಪರದೆಯ ಸರಿಸಿ
ಮೌನಕ್ಕೆ ಶರಣಾಗಿಸುವ ಪರಿಸ್ಥಿತಿ
ದೊಡ್ಡದೊಂದು ಮೌನದ ಬಳಿಕವೂ
ಬಹಳಷ್ಟು ಮಾತಾಡಿದ ಭಾವ
ಹಕ್ಕಿಯಂತೆ ಪುರ್ರನೆ ಹಾರುವ ಪುಟ್ಟ ಪುಟ್ಟ ಖುಷಿಗಳ
ಹಿಡಿದಿಡಲಾಗದ ಆಹ್ಲಾದಕರ ಕ್ಷಣಗಳ
ಮುಷ್ಟಿಯಲ್ಲಿ ಕಟ್ಟಿಡಲಾಗದೆ, ಪದಗಳಲ್ಲಿ ವಿವರಿಸಲಾಗದೆ
ಸರಿದು ಹೋಗುವ ಕ್ಷಣಗಳಿಗೆ ನಿಸ್ಸಾಯಕ ಸಾಕ್ಷಿಗಳಾಗಬೇಕಾದಾಗ
ಕಾಡುವುದು ಮತ್ತದೇ ಮೌನ!
-KMನಿಶ್ಯಬ್ಧವೇ ಸಾಮ್ರಾಜ್ಯ
ಭಾವ ಮಾತಾಗಲು ತಡಕಾಡಿದಲ್ಲಿ
ಸದ್ದು ಕರ್ಕಶವಾಗಿ, ಭಾರವಾಗಿ
ಪದಗಳ ಪುಂಜ ಕೈಗೆ ಸಿಗದೆ
ನಾಲಗೆಯೂ, ಗಂಟಲೂ ಬಡವಾದಲ್ಲಿ
ಮೌನವೂ ಮಾತಾಡುತ್ತದೆ
ಸಂವಹನಕ್ಕೆ ಮಾತೂ ಒಂದು ದಾರಿ
ಹೊರತು ಮಾತೇ ಸಂಭಾಷಣೆಯಲ್ಲ
ಸಂದೇಶ, ಕರೆ, ಬರಹದ್ದೂ ಒಂದು ಭಾಷೆ
ಹೇಳಲಾಗದ್ದು, ಹೇಳಹೊರಟು ಬಡವಾಗಿದ್ದು
ಕೇಳದೇ ಬಾಕಿಯಾಗಿದ್ದು
ಹೇಳಲೂ ಕೇಳಲೂ ಸಂದರ್ಭ ಒದಗದ್ದು
ಮೂಕವಾಗಿಯೂ ತಿಳಿಯಬಹುದಾಗಿದ್ದು
ಅಕ್ಕಪಕ್ಕವಿದ್ದರೂ ಮಾತನಾಡದೇ ಎಲ್ಲ
ತಿಳಿಯಬಲ್ಲವರು ಉತ್ತಮ ಸ್ನೇಹಿತರಂತೆ
ಕೇಳದೆಯೇ ಕಾಣಬಲ್ಲವರು
ಹೇಳದೆಯೇ ಭಾವವ ದಾಟಿಸಬಲ್ಲವರು
ಗಾಢ ನೆನಪೊಂದನ್ನು ನಿಗೂಢ ವರ್ತಮಾನವೊಂದನ್ನು
ಕಾಡದೇ, ಬೇಡದೇ ಹಾಗ್ಹಾಗೆ
ಗ್ರಹಿಸಬಲ್ಲವನೇ ನಿಜ ಗೆಳೆಯ
ಸಿಟ್ಟು ಅಸಹನೆ, ಬೇಜಾರಿಗೆ
ಮಾತಿನ ರೂಪ ಕೊಡದೆ, ಕೊಡಲಾಗದೆ
ಗೊಣಗಿ, ನೊಂದು ತಣ್ಣನೆ ಕೂತು
ಕರ್ಕಶದ, ಅತಿರೇಕದ ವರ್ತನೆಯ ಸಹಿಸಿ
ಸದ್ದಿನಿಂದ ಬೇಜಾರಾಗಿ ಖುದ್ದಾಗಿ ಖಂಡಿಸದೆ
ಮತ್ತದೇ ನಿಶ್ಯಬ್ಧವೆಂಬೋ ಪರದೆಯ ಸರಿಸಿ
ಮೌನಕ್ಕೆ ಶರಣಾಗಿಸುವ ಪರಿಸ್ಥಿತಿ
ದೊಡ್ಡದೊಂದು ಮೌನದ ಬಳಿಕವೂ
ಬಹಳಷ್ಟು ಮಾತಾಡಿದ ಭಾವ
ಹಕ್ಕಿಯಂತೆ ಪುರ್ರನೆ ಹಾರುವ ಪುಟ್ಟ ಪುಟ್ಟ ಖುಷಿಗಳ
ಹಿಡಿದಿಡಲಾಗದ ಆಹ್ಲಾದಕರ ಕ್ಷಣಗಳ
ಮುಷ್ಟಿಯಲ್ಲಿ ಕಟ್ಟಿಡಲಾಗದೆ, ಪದಗಳಲ್ಲಿ ವಿವರಿಸಲಾಗದೆ
ಸರಿದು ಹೋಗುವ ಕ್ಷಣಗಳಿಗೆ ನಿಸ್ಸಾಯಕ ಸಾಕ್ಷಿಗಳಾಗಬೇಕಾದಾಗ
ಕಾಡುವುದು ಮತ್ತದೇ ಮೌನ!
No comments:
Post a Comment