Group adminಗೂ ತಿಳಿಯದ ಹಾಗೆ ವಾಟ್ಸಪ್ ಗ್ರೂಪ್ ತ್ಯಜಿಸಲು ಆಗ್ತದ?!!!!!

ವಾಟ್ಸಪ್ ಗ್ರೂಪುಗಳಿಂದ adminಗೂ ಕೂಡಾ ತಿಳಿಯದ ಹಾಗೆ exit ಆಗಲು ನನಗೆ ತಿಳಿದ ಮಟ್ಟಿಗೆ ಆಗುವುದಿಲ್ಲ....ಅಂತಹ ತಂತ್ರಜ್ಞಾನ ಇನ್ನೂ ಬಂದಿಲ್ಲ.

ಆಗ್ತದ ಅಂತ ನಾನು ಕೇಳಿದ್ದು‌ 
ಆಗ್ತದೆ ಎಂದು ಹೇಳಿಲ್ಲ...

ತುಂಬ ಸಲ ಜೀವನ್ಮುಖಿಯಾದ ಯಾವ ವಿಚಾರವನ್ನೂ ಓದದ, ಪ್ರೋತ್ಸಾಹಿಸದವರೂ ಸಹ ಮೂರ್ಖ ಶೀರ್ಷಿಕೆಗಳ website link ತೆರೆದು ಓದುತ್ತಾರೆ!!! ಆಮೇಲೆ ಇಡೀ ಮಾಧ್ಯಮಗಳಿಗೆ ನಿಂದಿಸ್ತಾರೆ.

Website views ಜಾಸ್ತಿ ಆಗಲು ಅಂತಹ ಶೀರ್ಷಿಕೆ ನೀಡುವುದು ಇಂತಹ ಓದುಗರಿಗೆ ಅರ್ಥವೇ ಆಗುವುದಿಲ್ಲ!

ಆದರೆ,
ಬಹಳಷ್ಟು ಸಲ ನಮಗೊಂದು ಭ್ರಮೆ ಇರುತ್ತದೆ. ನಮ್ಕ ಸ್ಟೇಟಸ್ ಗೆ ಕಂಡ viewsನ ಅಷ್ಟೂ ಮಂದಿ ಸ್ಟೇಟಸ್ ನ್ನು ಗಮನಿಸಿದ್ದಾರೆ, ಓದಿದ್ದಾರೆ, ಲಿಂಕ್ ಒತ್ತಿದ್ದಾರೆ, ಒತ್ತಿದ ಮೇಲೆ ವ್ಯತ್ಯಾಸ ಆದರೆ ನಮ್ಮ ಗಮನಕ್ಕೆ ತರ್ತಾರೆ ಅಂತ.
ಆದರೆ ತುಂಬ ಸಲ ಹಾಗಾಗುವುದಿಲ್ಲ.

ಎಲ್ರೂ ಗಮನಿಸುವುದಿಲ್ಲ
ಗಮನಿಸಿದವರು ಎಲ್ಲರೂ ಓದುವುದಿಲ್ಲ
ಓದಿದವರೆಲ್ರೂ ಪ್ರತಿಕ್ರಿಯೆ ನೀಡುವುದೂ ಇಲ್ಲ.
ಎಲ್ರೂ ಬಿಝಿ ಇರ್ತಾರೆ ಅವರವರ ಕೆಲಸದಲ್ಲಿ.

ನನಗೆ ಪರೀಕ್ಷೆ ಮಾಡಬೇಕಿತ್ತು ನಿಜವಾಗಿ ಎಷ್ಟು ಜನ ಸ್ಟೇಟಸ್ ಗಮನಿಸಿ ವಾಪಾಸ್ ತಿಳಿಸ್ತಾರೆ ಅಂತ.

ಯಾಕೆಂದರೆ ತುಂಬ ಶ್ರಮ ವಹಿಸಿ ಹಂಚಿಕೊಂಡ ಸ್ಟೇಟಸ್ ಗಳಿಂದ ಪ್ರಯೋಜನ ಪಡೆದವರಿಗೂ ಕನಿಷ್ಠ ಒಂದು ಪ್ರತಿಕ್ರಿಯೆ ನೀಡುವಷ್ಟೂ ವ್ಯವಧಾನ ಇರುವುದಿಲ್ಲ!

ಈ ಪರೀಕ್ಷೆಯಿಂದ ನಿಮಗೆ ತೊಂದರೆ ಆದರೆ ಕ್ಷಮೆ ಇರಲಿ.

ಈ ಪರೀಕ್ಷೆ ಅತಿಯಾಯಿತು ಅನಿಸಿದರೆ ನೀವು ನಿರ್ದಾಕ್ಷಿಣ್ಯವಾಗಿ ನನ್ನ ಸ್ಟೇಟಸ್ ಕಾಣದ ಹಾಗೆ mute ಮಾಡಬಹುದು.

No comments: