ಸಮಾನತೆ ಕೊಡುವ ನಾಟಕ ಬೇಡ... ಇರುವುದನ್ನು ಗೌರವಿಸಿ ಸಾಕು! "ಜಯ ಜಯ ಜಯ ಜಯ ಹೇ" ಇದೇ ಹೇಳ್ತದೆ.......


ಸೃಷ್ಟಿಯಲ್ಲಿ ಸ್ತ್ರೀ-ಪುರುಷರು ಸಮಾನರು.
ದೈಹಿಕ ಮತ್ತು ಭಾವನಾತ್ಮಕ ವ್ಯತ್ಯಾಸಗಳು ಪ್ರಕೃತಿ ಸಹಜ. ಬಾಕಿ ತಾರತಮ್ಯಗಳು ನಾವೇ ಮಾಡಿಕೊಂಡದ್ದು...

ಮಹಿಳೆಗೆ ಸಮಾನತೆ, ಅವಕಾಶ, ಗೌರವ, ವೇದಿಕೆಗಳನ್ನು "ಕೊಡಿ" ಅನ್ನುವ ಕಲ್ಪನೆಯೇ ತಪ್ಪು. ಸ್ವಾಭಿಮಾನ, ಸ್ವಾತಂತ್ರ್ಯ ಅವಳಲ್ಲೇ ಇದೆ. ಅದನ್ನು "ಕಿತ್ತುಕೊಳ್ಳಬೇಡಿ" ಅಷ್ಟೆ.

ಸ್ತ್ರೀಗೆ ಸಮಾನತೆ ಯಾರೋ "ಕೊಡಬೇಕಾದ" ಅವಕಾಶ ಅಲ್ಲ. ಅದನ್ನು ಇತರರು ಗೌರವಿಸಿದರೆ ಧಾರಾಳ ಆಯ್ತು. ಸೀಮಿತ ಮೀಸಲಾತಿ, ಸ್ತ್ರೀಸ್ವಾತಂತ್ರ್ಯ, ಮಹಿಳೆಯರ ಹಾಡಿ ಹೊಗಳುವ ಹಾಡುಗಳು ಇವೆಲ್ಲವನ್ನೂ ಮೀರಿ ನಿಂತ ಮಲಯಾಳಂ ಸಿನಿಮಾ jaya jaya jaya jaya hey

ಸ್ತ್ರೀಭ್ರೂಣ ಹತ್ಯೆ
ಸ್ತ್ರೀ ಶಿಕ್ಷಣ
ಸ್ತ್ರೀ ಸ್ವಾತಂತ್ರ್ಯ
ಸ್ತ್ರೀ ಸಮಾನತೆ
ಸ್ತ್ರೀ ಮೀಸಲಾತಿ...

ಇವೆಲ್ಲದನ್ನೂ ಮೀರಿ ನಿಂತು ಮಹಿಳೆಯನ್ನು ಸಹಜವಾಗಿ, ಪರಿಣಾಮಕಾರಿಯಾಗಿ ಮತ್ತು "ಗೌರವಯುತವಾಗಿ" ತೋರಿಸಿದ ಚಂದದ ಹಾಗೂ ಸಹಜ ಸಿನಿಮಾ.....

ಪುರುಷ ಅಹಂ ಮತ್ತು ಮಹಿಳೆಯ ಸಹಜ ಶಕ್ತಿಯನ್ನು as usual ಪಕ್ಕಾ ಮಲಯಾಳಂ ಶೈಲಿಯಲ್ಲಿ ಚಂದಕೆ ತೋರಿಸಲಾಗಿದೆ.

ಸಂಭಾಷಣೆ, ಬಿಡಂಬನೆ, ಕಲಾವಿದರ ಆಯ್ಕೆ ಎಲ್ಲವೂ ಅತ್ಯಂತ ಸೂಕ್ತವಾಗಿದೆ...

ಆಕೆಯನ್ನು ಆಕೆಯಷ್ಟಕ್ಕೇ ಇರಲು ಬಿಡಿ ಸಾಕು
ಆಕೆಯ ಭಾವನೆಗಳನ್ನು ಗೌರವಿಸಿ...
ಮತ್ತೆ ನೀವು ಉದಾರವಾಗಿ ಏನೂ ಕೊಡುವ ದೊಡ್ಡಸ್ತಿಕೆ ತೋರಿಸಬೇಕಾಗಿಲ್ಲ ಎಂಬುದು ಕ್ಲೈಮಾಕ್ಸಿನಲ್ಲೂ ಹೇಳಲ್ಪಡುತ್ತದೆ....

ಅಚ್ಚುಕಟ್ಟಾದ ನಿರ್ಮಾಣ ಮತ್ತು ಲಘು ಧಾಟಿಯ  ನಿರೂಪಣೆ ಇಷ್ಟ ಆಯ್ತು...

ಈ ಸಿನಿಮಾ‌ Disney hot star OTTಯಲ್ಲಿ ಲಭ್ಯ.

#jayajayajayajayahey 
#disneyhotstar 
#malayalammovie 

-ಕೃಷ್ಣಮೋಹನ ತಲೆಂಗಳ (26.12.2022)

No comments: