ಫೇಸ್‌ಬುಕ್‌ ಬಂಧು-ಮಿತ್ರರ ಗಮನಕ್ಕೆ, ವಂಚನೆ ಮಾದರಿ ಬದಲಾಗಿದೆ, ಗಮನಿಸಿ!.... | FACEBOOK FRAUD


ಕೆಲ ದಿನಗಳಿಂದ Facebook ನಕಲಿ ಖಾತೆ ವಂಚನೆ ವಿಧಾನ ತುಸು ಬದಲಾಗಿದೆ.
ಮೊದಲಿಗೆ ನಮ್ಮ ಸ್ನೇಹಿತರ ನಕಲಿ ಖಾತೆ (ಗಮನಿಸಿ: ಅದು ಹ್ಯಾಕ್ ಆಗುವುದಲ್ಲ. ಹ್ಯಾಕ್ ಆದರೆ ನಮ್ಮ‌ ಖಾತೆ ನಿರ್ವಹಣೆ ಬೇರೆಯವರ ನಿಯಂತ್ರಣದಲ್ಲಿ ಇರುತ್ತದೆ) ಸೃಷ್ಟಿಸಿ friend request ಕಳಿಸ್ತಾರೆ. ನಾವು ಯೋಚಿಸದೆ accept ಮಾಡಿದರೆ ತಕ್ಷಣ ಮೆಸೆಂಜರಿನಲ್ಲಿ ಮೆಸೇಜ್ ಬರುತ್ತದೆ "please send your WhatsApp number" ಅಂತ. ಸ್ವಲ್ಪ ತಲೆ ಖರ್ಚು ಮಾಡಿ "ಯಾಕೆ" ಅಂತ ಕೇಳಿದ್ರೆ "I have changed my number ಅಥವಾ I lost your number" ಅಂತ ಬರುತ್ತದೆ.
ನನಗೆ ಕಳೆದ ವಾರ ಇಂತಹ ಸಂದೇಶ ಬಂದಾಗ "please send your number first, I will send mine later" ಅಂತ ಹಾಕಿದೆ. ಅಲ್ಲಿಗೆ ಚಾಟ್ ನಿಂತಿತು!!!!

ನಂತರ ಪರಿಶೀಲಿಸಿದಾಗ ಅದು ನಕಲಿ ಖಾತೆ ಅಂತ ತಿಳಿಯಿತು. ಅಪ್ಪಿತಪ್ಪಿ ನಿಮ್ಮ ವಾಟ್ಸಪ್ ನಂಬರ್ ಅವರಿಗೆ ಕೊಟ್ರೆ ನಂತರ ಅವರು ಯಾವ್ಯಾವ ರೀತಿ ವಂಚಿಸ್ತಾರೆ ಹೇಳಲು ಕಷ್ಟ. ಈ ತನಕ gpayಯಲ್ಲಿ ದುಡ್ಡು ಹಾಕಲು ಮೆಸೇಜ್ ಬರ್ತಾ ಇತ್ತು. ಈಗ ಹೊಸದಾಗಿ ವಾಟ್ಸಪ್ ನಂಬರ್ ಕೇಳ್ತಿದ್ದಾರೆ.

ಜಾಗ್ರತೆ ವಹಿಸಿ:
1) ನಿಮಗೆ ಈಗಾಗಲೇ ಸ್ನೇಹಿತರಾಗಿರುವವರಿಂದ ಮತ್ತೆ friend request ಬಂತೆಂದು ಸಂಶಯ ಬಂದರೆ ದಯವಿಟ್ಟು friend listನಲ್ಲಿ ಅವರು ಇದ್ದಾರ ಅಂತ ಚೆಕ್ ಮಾಡಿ..
2) ನಕಲಿ ಖಾತೆಗಳಿಗೆ ಜಾಸ್ತಿ mutual friends ಇರುವುದಿಲ್ಲ. ಯಾಮಾರಿದವರು ಮಾತ್ರ friends ಆಗಿರ್ತಾರೆ. ಗಮನದಲ್ಲಿರಲಿ.
3) ತಪ್ಪಿ friend request accept ಮಾಡಿದರೂ ಮೆಸೆಂಜರಿನಲ್ಲಿ ನಿಮ್ಮ ಯಾವುದೇ ಖಾಸಗಿ ಮಾಹಿತಿ ನೀಡಲೇ ಬೇಡಿ. ಉತ್ಸಾಹ ಇದ್ದರೆ ಅವುಗಳಿಗೆ ಮರುಪ್ರಶ್ನೆ ಹಾಕಿ... ತಾರ್ಕಿಕ ಉತ್ತರ ಬರ್ತದ ನೋಡಿ
4) ಯಾವುದೋ ಲಿಂಕ್ ಒತ್ತಬೇಡಿ, ಒಟಿಪಿ ಬಳಸಬೇಡಿ, ಅಂಥವರು ಕಳಿಸುವ ಯಾವುದೇ ಆಮಿಷಗಳಿಗೆ ಮರುಳಾಗಬೇಡಿ
5) ನಕಲಿ ಖಾತೆ ಅಂತ ಗೊತ್ತಾದ ತಕ್ಷಣ ನೈಜ ಖಾತೆಯ ಸ್ನೇಹಿತರಿಗೆ ಅವರ ಖಾತೆ ನಕಲಿ ಆಗಿರುವುದನ್ನು ಆದಷ್ಟು ಬೇಗ ಗಮನಕ್ಕೆ ತನ್ನಿ... ಹಾಗೂ ನಕಲಿ ಖಾತೆಯನ್ನು "report" ಮಾಡಿ....
ಜಾಲತಾಣದ ಬದುಕು ಸಂಕೀರ್ಣ... ಭಯಂಕರ ಜಾಗ್ರತೆ ಅಗತ್ಯ
-ಕೃಷ್ಣಮೋಹನ ತಲೆಂಗಳ (09.12.24)

#facebookfraud
#facebook

No comments: