ಭಾವಾವೇಶ ನಿಯಂತ್ರಿಸಬೇಕು ಯಾಕೆ?

ತುಂಬ ಸೂಕ್ಷ್ಮ ಸ್ವಭಾವ ಹೊಂದಿದವರು (ಬೈ ಡಿಫಾಲ್ಟ್ ಅಥವಾ ಬೆಳೆದ ರೀತಿಯಿಂದ) ತಕ್ಷಣ ಎಲ್ಲವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ತನ್ನ ಸುತ್ತಮುತ್ತಲಿನ ಬೆಳವಣಿಗೆಗಳನ್ನು ನೋಡಿ ಸುಮ್ಮನೆ ಕೂರಲು ಅವರಿಗೆ ಆಗುವುದಿಲ್ಲ. ವಿಚಾರಗಳ ಜೊತೆ ಕಾಂಪ್ರಮೈಸ್ ಆಗುವುದಿಲ್ಲ.
ಸೂಕ್ಷ್ಮಗ್ರಾಹಿಗಳು ಅಂದುಕೊಳ್ಳುತ್ತಾರೆ, ನಾನು ನೇರವಾಗಿ ಹೇಳುತ್ತಿದ್ದೇನೆ, ಪ್ರಾಮಾಣಿಕವಾಗಿದ್ದೇನೆ ಅಂತ. ಆದರೆ, ಅದರಿಂದಾಗುವ ಪರಿಣಾಮಗಳು ನಂತರ ತಲೆಗೆ ಹೋಗುತ್ತದೆ. ಅಷ್ಟೊತ್ತಿಗೆ ಹೇಳುವುದನ್ನು ಹೇಳಿ ಆಗಿರುತ್ತದೆ. ನಂತರ ಪುನಹ ಮನಸಿಗೆ ಇರಿಟೇಶನ್ ಆಗುತ್ತದೆ. ಯಾವ ಸಮಸ್ಯೆಯೂ ಪರಿಹಾರ ಆಗುವುದಿಲ್ಲ.

ಸಾಧಾರಣವಾಗಿ ಎಂತಹ ಮುಜುಗರ,ತೊಂದರೆ, ಶೋಷಣೆಗಳು ಸುತ್ತಮುತ್ತ ನಡೆಯುತ್ತಿದ್ದರೂ ಬಹುತೇಕ ಎಲ್ಲರೂ ಕಾಂಪ್ರಮೈಸ್ ಮಾಡಿ ಬದುಕುತ್ತಿರುತ್ತಾರೆ, ಕಂಡಾಬಟ್ಟೆ ಸ್ವಾಭಿಮಾನಿಗಳು ತನ್ನ ಒಲವಿನಂತೆ ಬದುಕಲು ಹೊರುಡುವುದೇ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಇದಕ್ಕಿರುವ ಪರಿಹಾರ ಭಾವನೆಗಳನ್ನು ನಿಯಂತ್ರಿಸಲು ಕಲಿಯುವುದು ಅಥವಾ ಹುಟ್ಟಿದ ಭಾವನೆಯನ್ನು ಆ ಕ್ಷಣಕ್ಕೆ ಹೊರಗೆಡಹದೆ ಕ್ರಮೇಣ ಅಲ್ಲಿಗೇ ಸುಟ್ಟು ಹಾಕಲು ಕಲಿಯುವುದು. ಇದರಿಂದ ಬೇರೆ ಯಾರಿಗೂ ತೊಂದರೆ ಇಲ್ಲ ತಾನೆ. ಅವರೊಳಗೆ ಒತ್ತಡ ಬೆಳೆಯುವುದು ಬಿಟ್ಟು. ಒಂದೆರಡು ಸಲ ಆದರೆ ಓಕೆ, ಪದೇ ಪದೇ ಹಾಗೆಯೇ ಆದಾಗ ತನ್ನನ್ನು ತಾನೇ ಪ್ರಸ್ನಿಸಬೇಕಾಗುತ್ತದೆ.

ತಾನು ಯಾಕೆ ಪ್ರತಿಯೊಂದಕ್ಕೆ ಪ್ರತ್ಯೇಕವಾಗಿ ಗುರುತಿಸಿಕೊಳ್ಳಬೇಕು, ಎಲ್ಲರಿಗಿಂತ ಮೊದಲು ರಿಯಾಕ್ಟ್ ಮಾಡಬೇಕು, ತುಂಬಾ ಆತುರ ತೋರಿಸಬೇಕು, ಟೆನ್ಶನ್ ಯಾಕೆ ಮಾಡಿಕೊಳ್ಳಬೇಕು ಎಂದೆಲ್ಲಾ ಪ್ರಶ್ನೆ ಬರುತ್ತದೆ. ಉತ್ತರಿಸುವುದು ಅರವರವ ಕೈಯಲ್ಲಿ ಇರುತ್ತದೆ.

ಸೂಕ್ಷ್ಮವಾಗಿ ಜಗತ್ತನ್ನು ಗಮನಿಸಬಲ್ಲವರು ಎಲ್ಲರಿಗಿಂತ ಬೇಗ ಹರ್ಟ್ ಆಗುತ್ತಾರೆ. ತನಗೋಸ್ಕರ ಸಮಯ ಇರಿಸಿಕೊಳ್ಳಲು ಅವರಿಗೆ ಬರುವುದಿಲ್ಲ. ಹೋಗ್ತಾ ಹೋಗ್ತಾ ನಿರ್ಲಿಪ್ತತೆ, ತ್ಯಾಗಗಳಿಗೆ ಹೊಂದಿಕೊಳ್ಳುತ್ತಾರೆ. ಅಂತಿಮವಾಗಿ ತಾವೇ ಹರ್ಟ್ ಆಗುತ್ತಾರೆ.
-----
ಮೌನವಾಗಿದ್ದರೆ ಏನು ಪ್ರಯೋಜನ?


-ಉತ್ತಮ ಕೇಳುಗರಾಗಬಹುದು
-ದುಡುಕಿ ಮಾತನಾಡುವುದನ್ನು ತಪ್ಪಿಸಬಹುದು
-ಆ ಕ್ಷಣದ ಅಪ್ರಬುದ್ಧ ಅನಿಸಿಕೆಗಳನ್ನು ಜಾಹೀರು ಪಡಿಸಿ ಸಣ್ಣವರಾಗುವ ಮುಜುಗರದಿಂದ ಪಾರಾಗಬಹುದು.
-ಒಂದು ವಿಚಾರದ ಕುರಿತು ಇನ್ನಷ್ಟು ಆಳವಾಗಿ ಯೋಚಿಸಬಹುದು.
-ಅಂತಿಮವಾಗಿ ಸಣ್ಣ ಪುಟ್ಟ ಮನಸ್ಥಿತಿ ಬದಲಾವಣೆಗಳನ್ನು ಜಗತ್ತಿಗೆ ತೋರಿಸದೆ ತನ್ನ ಪಾಡಿಗೆ ತಾನಿರಬಹುದು.
---
ಮನಸ್ಥಿತಿ ಸರಿ ಇಲ್ಲದಿರುವಾಗ, ಒಂದು ವಿಚಾರದ ಕುರಿತು ಗೊಂದಲಗಳು ಇರುವಾಗ, ವ್ಯಗ್ರ ಮನೋಭಾವ ಇರುವಾಗ ಯಾವುದಕ್ಕೂ ಪ್ರತಿಕ್ರಿಯಿಸದೇ ಇರುವುದು ತನಗೂ, ತನ್ನ ಸುತ್ತಮುತ್ತಲಿನವರಿಗೂ ಒಳ್ಳೆಯದು.

No comments: