ಸ್ಮೈಲೀಗೆ ನಿಲುಕದ್ದು!
ಇಳಿಜಾರು ರಸ್ತೆಯಲ್ಲಿ ಬರುತ್ತಾ ಇದೆ. ವಾಹನ ಓಲಾಡಿದ ಹಾಗಾಯ್ತು. ಭ್ರಮೆ ಅಂದುಕೊಂಡು ಮುಂದೆ ಹೋದಾಗ, ಪೂರ್ತಿ ವಾಲುತ್ತಾ ನಿಧಾನವಾಯಿತು. ಇಳಿದು ನೋಡಿದಾಗ ಎದುರಿನ ಟಯರ್ ಪಂಕ್ಚರ್. ಟಯರ್ ಬದಲಿಸಲು ಅಲ್ಪಸ್ವಲ್ಪ ಗೊತ್ತಿತ್ತು. ಪೂರ್ತಿ ಐಡಿಯಾ ಇರಲಿಲ್ಲ. ಅಭಿಮನ್ಯು ಚಕ್ರವ್ಯೂಹ ಪ್ರವೇಶಿಸಿದ ಹಾಗೆ. ಸುತ್ತಮುತ್ತ ನೋಡಿದರೆ ಯಾರೂ ಇಲ್ಲ. ಅದು ಪ್ರವಾಸಿತಾಣಕ್ಕೆ ಹೋಗುವ ಗುಡ್ಡಗಾಡಿನ ರಸ್ತೆ ಬೇರೆ. ಯೋಚಿಸುತ್ತಾ ಕೂರುವ ಹಾಗಿರಲಿಲ್ಲ. ಮುಸ್ಸಂಜೆಯಾಗುತ್ತಾ ಬರುತ್ತಿತ್ತು, ಹತ್ತಿರ ಎಲ್ಲಿಯೂ ಪಂಕ್ಚರ್ ಶಾಪ್ ಇರುವ ಸಾಧ್ಯತೆ ಕಮ್ಮಿ. ಮಳೆ ಬರುವ ಲಕ್ಷಣ ಇತ್ತು. ಎದೆ ಢವ ಢವ ಎನ್ನತೊಡಗಿತು.
ಜಾಕ್ ಅಳವಡಿಸಿ ಗೊತ್ತಿರುವ ವಿದ್ಯೆಯಯನ್ನು ಮನಸ್ಸಿನಲ್ಲೇ ಮನನ ಮಾಡಿಕೊಂಡು ಚಕ್ರ ಕಳಚಲು ಕುಳಿತೆ. ಏನಾಶ್ಚರ್ಯ... ದೇವರೇ ಕಳುಹಿಸಿಕೊಟ್ಟರೋ ಎಂಬಂತೆ ಒಂದು ಆಟೋ ಬಂತು. ಆಟೋ ನಿಲ್ಲಿಸಿದ ಚಾಲಕ ಬಳಿ ಬಂದು, ಸಹಾಯ ಬೇಕ, ಏನಾಯ್ತು ಎಂದು ಕೇಳಿದಾಗ, ವಿಷಯ ತಿಳಿಸಿದೆ. ಹಿಂದು ಮುಂದು ನೋಡದೆ ಚಕಚಕನೆ ಚಕ್ರ ಬಿಚ್ಚಿ ಸ್ಟೆಪ್ನಿ ಅಳವಡಿಸಿಕೊಟ್ಟರು. ನಾನು ಈತ ಎಲ್ಲಿಂದ ಬಂದ ಎಂದುಕೊಂಡು ಆಶ್ಚರ್ಯದಿಂದ ನೋಡುತ್ತಲೇ ಇದ್ದೆ. ಭಾರಿ ಒತ್ತಡವೊಂದು ಸುಲಭವಾಗಿ ಹಗುರವಾದಂತೆ ಭಾಸವಾಯಿತು. ಆ ಉದ್ವೇಗದಲ್ಲಿ ಆತನಿಗೆ ಚಕ್ರ ಬಿಚ್ಚಲು ಸಹಾಯ ಮಾಡಬೇಕೆಂಬ ವಿಚಾರವೂ ತಲೆಗೆ ಹೋಗಲಿಲ್ಲ.
---------------
ಚಕ್ರ ಬದಲಾಯಿಸಿ, ಡಿಕ್ಕಿಯಲ್ಲಿಟ್ಟ ಆತ ಕೈಒರೆಸಿಕೊಳ್ಳುತ್ತಾ, ಬರುತ್ತೇನಣ್ಣ ಅಂತ ಹೊರಟರು. ಜೇಬಿಗೆ ಕೈಹಾಕಿ ಸ್ವಲ್ಪ ದುಡ್ಡು ತೆಗೆದು ಕೊಡಲು ಹೊರಟೆ, ನಯವಾಗಿಯೇ ನಿರಾಕರಿಸಿ, ಬೆವರೊರೆಸಿಕೊಳ್ಳುತ್ತಾ ಆತ ಆಟೋದತ್ತ ನಡೆದರು. ಓಡುತ್ತಾ ಹೋಗಿ ಧನ್ಯವಾದ ಹೇಳಬೇಕೆಂದು ಪ್ರಯತ್ನಿಸಿದೆ, ಅವರಿಗೆ ಅದರಲ್ಲಿ ಆಸಕ್ತಿ ಇರಲಿಲ್ಲ, ತನ್ನ ಕರ್ತವ್ಯ ಮುಗಿಸಿದ ಭಾವ ಇತ್ತು ಮುಖದಲ್ಲಿ. ನನಗಾದರೋ ಉಪಕಾರದ ಋಣ ಭಾರ ಕಳೆದುಕೊಳ್ಳುವ ಆತುರ.
-----------
ಅವಸರದಲ್ಲಿ ಯಾವುದೇ ವಾಕ್ಯ ಬಾಯಿಯಿಂದ ಹೊರಡಲಿಲ್ಲ... ಸಾಲು ಸಾಲಾಗಿ ಇಮೋಜಿಗಳೇ ಕಣ್ಣ ಮುಂದೆ ಸುಳಿದಾಡತೊಡಗಿದವು... ಲೈಕು, ಸ್ಮೈಲೀ, ಹಾರ್ಟ್ ಸಿಂಬಲ್ಲು, ಫ್ಲವರ್ರು... ಹೀಗೆ ಇಮೋಜಿಯಲ್ಲಾದರೆ ಸುಲಭವಾಗಿ ಥ್ಯಾಂಕ್ಸ್ ಹೇಳಬಹುದಿತ್ತಲ್ಲ ಅನ್ನಿಸಿತು. ಯಾವ ಇಮೋಜಿ ಸೂಕ್ತ ಅಂತ ಯೋಚಿಸುತ್ತಿರಬೇಕಾದರೆ ಆಟೋ ಸ್ಟಾರ್ಟ್ ಆಗಿ ಹೊರಟೇ ಹೋಯ್ತು. ಮೊಬೈಲ್ ನಂಬರ್ ಪಡೆಯಲೂ ಮರೆತೆ ಹೋಗಿತ್ತು... ಛೆ....
ಕೊನೆಗೂ ನನಗೆ ಯಾವ ಇಮೋಜಿ ಬಳಸಿ ಥ್ಯಾಂಕ್ಸ್ ಹೇಳಬೇಕೆಂದು ಹೊಳೆಯಲೇ ಇಲ್ಲ. ವಾಟ್ಸಪ್ಪ್ ಸೃಷ್ಟಿಕರ್ತನಿಗೊಂದು ಮೈಲ್ ಮಾಡಬೇಕು, ಮಾತಿಗೆ ನಿಲುಕದ ಪದಗಳಿಗೆ ಹೊಸದೊಂದು ಇಮೋಜಿ ಪರಿಚಯ ಮಾಡಬೇಕು ಅಂತ ಅಂದುಕೊಳ್ಳುತ್ತಲೇ ತುಸು ನಿರಾಳ, ತುಸು ವಿಷಾದದಿಂದ ಗಾಡಿ ಸ್ಟಾರ್ಟ್ ಮಾಡಿದೆ....
-ಕೃಷ್ಣಮೋಹನ ತಲೆಂಗಳ..

1 comment:
ಯಾರಪ್ಪಾ ಆ ಮಹಾನುಭಾವ
Post a Comment