RIP ಅಡ್ಮಿನ್...!
(ಕಾಲ್ಪನಿಕ ಕತೆ)
.........
ಅದೊಂದು ಸಾಮಾನ್ಯ ವಾಟ್ಸಪ್ ಗ್ರೂಪು. ಗ್ರೂಪು ಭರ್ತಿಯಾಗಿತ್ತು, ಸದಾ ಲವಲವಿಕೆಯಿಂದ ಇತ್ತು. ಗ್ರೂಪು ಶುರು ಮಾಡಿದ ವ್ಯಕ್ತಿಯೇ ಗ್ರೂಪಿಗೆ ಏಕೈಕ ಅಡ್ಮಿನ್. ಗ್ರೂಪು ಚೆನ್ನಾಗಿಯೇ ನಡೆಯುತ್ತಿದ್ದರೂ ಅಡ್ಮಿನ್ ಸ್ವಲ್ಪ ಕಟ್ಟುನಿಟ್ಟು. ಇಂದು ತುಂಬ ಮಂದಿಗೆ ಕಿರಿಕಿರಿ ಅನಿಸುತ್ತಿತ್ತು. ಆದರೂ ಗ್ರೂಪು ಚೆನ್ನಾಗಿ ನಡೆಸುತ್ತಾನಲ್ಲ ಎಂಬ ಕಾರಣಕ್ಕೆ ಬಾಯಿ ಮುಚ್ಚಿಕೊಂಡಿದ್ದರು. "ಇವನೊಬ್ನೇ ಯಾಕೆ ಅಡ್ಮಿನ್ ಆಗಿರ್ಬೇಕು? ಇನ್ನೂ 2-3 ಮಂದಿಗೆ ಜವಾಬ್ದಾರಿ ಕೊಡಬಹುದಲ್ವ?" ಅಂತ ಒಳಗೊಳಗೆ ಮಾತನಾಡಿಕೊಂಡ್ರೂ ಗ್ರೂಪಿನಲ್ಲಿ ಹೇಳ್ತಾ ಇರ್ಲಿಲ್ಲ, ಅವ ಮುಂಗೋಪಿ ಎಂಬ ಕಾರಣಕ್ಕೆ. "ಅವನ ಮೂಗಿನ ನೇರಕ್ಕೇ ಗ್ರೂಪಿರಬೇಕೆಂಬ ಸ್ವಾರ್ಥಿ ಇರಬೇಕವ..". ಹೀಗೊಂದು ಮಾತು ಅಲ್ಲಿಲ್ಲಿ ಕೇಳ್ತಾ ಇತ್ತು...
.........................
ಒಂದು ಸಂಜೆ ಸಡನ್ ಗ್ರೂಪಿನ ಅತ್ಯುತ್ಸಾಹಿ ಸದಸ್ಯನೊಬ್ಬನ ಮೆಸೇಜ್ ಗ್ರೂಪನ್ನು ಅಲ್ಲಾಡಿಸಿ ಬಿಡ್ತು...
"ಸಾರೀ ಟು ಸೇ ದಿಸ್... ನಮ್ಮ ಗೌರವಾನ್ವಿತ ಅಡ್ಮಿನ್ ಇಂದು ಮಧ್ಯಾಹ್ನ ಸಂಭವಿಸಿದ ಆಕ್ಸಿಡೆಂಟಿನಲ್ಲಿ ಹೋಗ್ಬಿಟ್ರು....!!!"
ಮಲಗಿದಂತಿದ್ದ ಗ್ರೂಪು ಒಮ್ಮೆಲೇ ಮೈಕೊಡವಿ ಎದ್ದುಕೊಂಡಿತು... ಹೌದಾ? ಯಾವಾಗ? ಏನಂತೆ? ಪ್ರಶ್ನೆಗಳಿಗೆ ಸಿಕ್ಕಿದ್ದು ಒಂದೇ ಉತ್ತರ.
"ಸಾರಿ... ಹೆಚ್ಚಿನ ಮಾಹಿತಿ ಇಲ್ಲ..."
.........................
ತಕೊಳ್ಳಿ ಶುರು ಆಯ್ತು...
RIP, ರೆಸ್ಟ್ ಇನ್ ಪೀಸ್... ಓಂ ಶಾಂತಿ... ದೇವರು ಅವರ ಆತ್ಮಕ್ಕೆ ಸದ್ಗತಿ ಕರುಣಿಸಲಿ... "ಇನ್ನು ಮುಂದೆಯಾದರೂ ಅವರು ಸಮಾಧಾನದಿಂದ ಇರಲಿ..."
ಮೂರು ನಾಲ್ಕು RIP ಮೆಸೇಜ್ ನೋಡಿದ ಬಳಿಕ ತಡವಾಗಿ ಗ್ರೂಪಿಗೆ ಬಂದವರಿಗೆ ಯಾರು ಸತ್ತದ್ದು ಎಂಬ ಸರಿಯಾದ ಮಾಹಿತಿ ಇಲ್ಲದಿದ್ದರೂ ತಮ್ಮದೂ ಇರಲಿ ಅಂತ RIP... RIP... ಹಾಕ್ತಾ ಹೋದ್ರು.
ಅಡ್ಮಿನ್ ಅತಿರೇಕದ ಶಿಸ್ತಿನಿಂದ ಕಂಗೆಟ್ಟಿದ್ದ ಸದಸ್ಯನೊಬ್ಬ ತನ್ನ ಸಮಾನ ಮನಸ್ಕನಿಗೆ ಪ್ರೈವೇಟ್ ಮೆಸೇಜ್ ಹಾಕಿದ "ಅವತ್ತೇ ನಾನು ಹೇಳಿಲ್ವ... ಸ್ಟ್ಯಾಂಡ್ ಬೈ ಆದರೂ ಇನ್ನೊಬ್ಬ ಅಡ್ಮಿನ್ ಬೇಕು ಅಂತ. ಯಾಕೆ ತಾನೇ ಒಬ್ಬನೇ ಎಲ್ಲದನ್ನೂ ನಿಭಾಯಿಸುವ ದೊಡ್ಡಸ್ತಿಕೆ? ಈಗ ನೋಡು, ಗ್ರೂಪಿಗೆ ಅಡ್ಮಿನ್ನೂ ಇಲ್ಲ, ಬೇರೆಯವರನ್ನು ಹೊಸದಾಗಿ ಹೇಗೆ ಅಡ್ಮಿನ್ ಮಾಡುವುದೂ ಹೇಗಂತಲೂ ಗೊತ್ತಿಲ್ಲ... ಇಷ್ಟು ಕಷ್ಟ ಪಟ್ಟು ಸೇರಿದ ಗುಂಪು ಇನ್ನು ಲಗಾಡಿ ಹೋಗುವುದು ಗ್ಯಾರಂಟಿ..."
"ಆಯ್ತು ಮಾರಾಯ ಸುಮ್ಮನಿರು, ಏನಾದರೂ ಮಾಡುವ.... ಈಗ ಸುಮ್ಮನಿರು..." ಉತ್ತರ ಬಂತು.
ಅದೇ ಬೇಸರ ಹಾಗೂ ಅತ್ಯುತ್ಸಾಹದಲ್ಲಿ ಗ್ರೂಪಿನ ಹೆಸರನ್ನೇ ತತ್ಕಾಲಕ್ಕೆ ಯಾರೋ ಚೇಂಜ್ ಮಾಡಿದರು ರಿಪ್ ಅಡ್ಮಿನ್ ಅಂತ..ಫೇಸ್ ಬುಕ್ಕಿಗೆ ಹೋಗಿ ಅಡ್ಮಿನ್ ಖಾತೆಯಿಂದ ಪ್ರೊಫೈಲ್ ಪಿಕ್ಚರ್ ಹೇಗೆ ಡೌನ್ ಲೋಡ್ ಮಾಡುವುದು ಅಂತ ತಿಳಿಯದೆ ಅವಸರಕ್ಕೆ ಸ್ಕ್ರೀನ್ ಶಾಟ್ ತೆಗೆದು ಗ್ರೂಪಿನ ಡಿಪಿ ಆಗಿ ಹಾಕಲಾಯಿತು! ಅಡ್ಮಿನ್ ಗೆ ಕೊನೆ ಕಾಲದಲ್ಲಾದರೂ ಗೌರವ ಸಲ್ಲಿಸುವ ಅಂತ.
...................
ಒಂದು ಅರ್ಧ ಗಂಟೆ ಬಳಿಕ ಪುನಹ, ಸತ್ತ ಸುದ್ದಿ ಹಾಕಿದ ಪುಣ್ಯಾತ್ಮನಿಂದ ಮತ್ತೊಂದು ಮೆಸೇಜ್ ಬಂತು...
"ಸಾರಿ ಗೈಸ್.... ತಪ್ಪು ಮಾಹಿತಿ ಬಂದಿತ್ತು... ಅಡ್ಮಿನ್ ಗೆ ಅಪಘಾತ ಆಗಿದ್ದು ಹೌದು. ಆದರೆ, ಸತ್ತು ಹೋಗಿಲ್ಲ ಎಂದು ತಿಳಿಸಲು ವಿಷಾದಿಸುತ್ತೇನೆ. ಸ್ವಲ್ಪ ಏಟಾಗಿ ಆಸ್ಪತ್ರೆಯಲ್ಲಿದ್ದಾರೆ... ಥ್ಯಾಂಕ್ಸ್ ಗಾಡ್..."
ಇತ್ಯಾದಿ ಇತ್ಯಾದಿ ಮೆಸೇಜು ಬಂದದ್ದೇ ತಂಡ...
ತಕೊಳ್ಳಿ ಶುರುವಾಯ್ತು...
ಅರ್ಧ ಗಂಟೆ ಮೊದಲಷ್ಟೇ RIP ಹಾಕಿದ್ದವರೆಲ್ಲ "ಡಿಲೀಟ್ ಫಾರ್ ಎವ್ರಿವನ್" ಆಯ್ಕೆ ಬಳಸಿ RIP ಮೆಸೇಜುಗಳನ್ನೆಲ್ಲ ಡಿಲೀಟ್ ಮಾಡಿ ಬುದ್ದಿವಂತಿಕೆ ಪ್ರದರ್ಶಿಸಿದರು. ಮತ್ತೊಬ್ಬ Get wel soon dear admin... ಅಂತ ಹಾಕಿದ. ತುಂಬ ಮಂದಿ ಅದನ್ನು ಕಾಪಿ, ಪೇಸ್ಟ್ ಮಾಡಿ ಶೇರ್ ಮಾಡಿ ಅಡ್ಮಿನ್ ಗೆ ಶುಭ ಕೋರಿ ಕೃತಾರ್ಥರಾದರು. ಈ ನಡುವೆ ಗ್ರೂಪಿನ ಹೆಸರು ಚೇಂಜ್ ಮಾಡಿದ್ದವ ಎಲ್ಲರೂ ಮಲಗಿದ ಮೇಲೆ ತಡರಾತ್ರಿ ಮತ್ತೆ ಮೊದಲಿನ ಹೆಸರನ್ನೇ ಟೈಪ್ ಮಾಡಿ ಬೆವರೊರೆಸಿಕೊಂಡ!
.........
ಮರುದಿನ ಬೆಳಗ್ಗೆ ಆಸ್ಪತ್ರೆಯಲ್ಲಿ ಅಡ್ಮಿನ್ ಗೆ ಪ್ರಜ್ನೆ ಬಂದಾಗ ಗ್ರೂಪು ತುಂಬಾ ಸಹಜವಾಗಿತ್ತು. ಆಕ ಆನ್ ಲೈನಿಗೆ ಬಂದಾಗ ಅದಾಗಲೇ 4-5 ಗುಡ್ ಮಾರ್ನಿಂಗ್, ದಿನ ವಿಶೇಷ ಕ್ವೋಟ್ ಗಳೆಲ್ಲ ಬಂದಾಗಿತ್ತು....
ಮತ್ತೂ ಮೇಲೆ ಸ್ಕ್ರೋಲ್ ಮಾಡಿದಾಗ ಸಾಲು ಸಾಲಾಗಿ ಕಂಡ Get wel soon dear admin... ಮೆಸೇಜು ನೋಡಿ ಅಡ್ಮಿನ್ ಕಣ್ಣುಗಳಿಂದ ಆನಂದಬಾಷ್ಪ ಸುರಿಯಲಾರಂಭಿಸಿತು...
ಮಾತು ಬಾರದಿದ್ದ ವಾಟ್ಸಪ್ ಗ್ರೂಪು ಎಲ್ಲವನ್ನೂ ಕಂಡು ನಿಶ್ಯಬ್ಧವಾಗಿ ಸೈಲೆಂಟ್ ಮೋಡ್ ನಲ್ಲಿ MUTE ಆಗಿ ಕುಳಿತಿತ್ತು!!
-ಕೃಷ್ಣಮೋಹನ ತಲೆಂಗಳ.

No comments:
Post a Comment