ಸಾಮಾಜಿಕ ಬದ್ಧತೆ, ಜವಾಬ್ದಾರಿ ಇತ್ಯಾದಿ ಇತ್ಯಾದಿ...
(ಕಮೆಂಟು, ಲೈಕು ಬಾರದ ಕತೆ)
------------------------
"ಅಲ್ಲ ಈ ಮೀಡಿಯಾದವ್ರಿಗೆ ಸ್ವಲ್ಪನಾದ್ರೂ ಬದ್ಧತೆ ಬೇಡ್ವ, ಜವಾಬ್ದಾರಿ ಇಲ್ವ, ನೈತಿಕತೆ ಅಂದ್ರೆ ಏನೂಂತ ಗೊತ್ತಿಲ್ವ... ಅಲ್ಲ ಬೆಳಗ್ಗಿನಿಂದಾನೂ ಅದೇ ಮದ್ಯ ಮಾರಾಟ ಸುದ್ದಿನೇ ಒಂದೇ ಸಮನೇ ತೋರಿಸ್ತಾ ಇದ್ದಾರಲ್ಲ.. ಯಾಕೆ ಇವ್ರಿಗೆ ಬೇರೆ ಏನೂ ಸುದ್ದಿ ಇಲ್ವ. ಅಥವಾ ಬೇರೆ ಸುದ್ದಿ ಹಾಕಿದ್ರೆ ದುಡ್ಡು ಬರಲ್ವ.... ಛಿ ಛಿ ಇವ್ರೇನೂ ಮನುಷ್ಯರೋ... ಮನೆ ಮಂದಿ ಎಲ್ಲ ಕುಳಿತು ಟಿ.ವಿ.ನೇ ನೋಡೋ ಹಾಗಿಲ್ಲ... ಬೆಳಗ್ಗಿನಿಂದ ಹಾಕಿದ್ದೇ ಹಾಕ್ತಿದಾರೆ. ಬೇರೆ ಚಾನೆಲ್ ಹಾಕಿದ್ರೆ ಅಲ್ಲೂ ಇದೇ ಕಥೆ..."
ತುಸು ವಯಸ್ಸಾದ ಆ ಯಜಮಾನ್ರು ಹೇಳ್ತಾನೆ ಹೋದ್ರು. ನಿನ್ನೆಯಷ್ಟೇ ಫ್ಲಾಟಿಗೆ ಅವರ ಸಂಸಾರ ಹೊಸದಾಗಿ ಬಂದಿತ್ತು. ನಿವೃತ್ತರು ಅಂತ ಅನಿಸ್ತದೆ. ಈಗಷ್ಟೇ ಪರಿಚಯ ಆಯ್ತು... ಹೇಳ್ತಾ ಹೋದ್ರು..
"ಅಲ್ಲ ಸರ್, ಬೆಳಗ್ಗಿನಿಂದ ಹಾಕಿದ್ದೇ ಹಾಕ್ತಿದಾರೆ ಅಂತೀರಲ್ಲ ನಿಮ್ಗೆ ಹೇಗೆ ಗೊತ್ತಾಯ್ತು... ನೀವು ನೋಡ್ತಾನೇ ಇದ್ರ...?" ತುಂಟ ಪ್ರಶ್ನೆ ಕೇಳಿದೆ.
ನನ್ನನ್ನು ಕೆಕ್ಕರಿಸಿ ನೋಡಿದ್ರು, ಸಿಟ್ಟು ನೇತ್ತಿಗೇರಿತು.. "ಅಲ್ರೀ ಸರ್, ನೀವು ಮೀಡಿಯಾದ್ವರನ್ನು ಸಪೋರ್ಟ್ ಮಾಡಿ ಮಾತಾಡ್ತೀರಲ್ಲ.... ಈ ಮೀಡಿಯಾದವ್ರೇ ಹೀಗೆ ಮಾಡಿದ್ರೆ ಹೇಗೆ. ಇವ್ರಿಗೆ ಏನು ಕೊಡಬೇಕು, ಏನು ಕೊಡ್ಬಾರ್ದು ಅನ್ನುವ ಪ್ರಜ್ನೆ ಬೇಡ್ವ... ಇವ್ರು ಕೊಟ್ಟಿದ್ದೇ ಸುದ್ದಿ ಅಂತ ಆಗಿದೆ, ಅದೇನು ಭಾಷೆನೋ, ಅದೇನು ಉತ್ಪ್ರೇಕ್ಷೆನೋ... ನಿಮ್ಗೊತ್ತ ಸರ್, ಈ ಕೊರೋನಾ, ಗಿರೋನಾ ಎಲ್ಲ ಅಂಥ ಸೀರಿಯಸ್ ವಿಷ್ಯ ಏನಲ್ಲ, ಈ ಟಿ.ವಿ.ನೋರು, ಪೇಪರ್ನೋರು ಜನ್ರನ್ನ ಭಯ ಪಡಿಸ್ತಾ ಇದಾರೆ, ಅವ್ರಿಗೆ ಟಿ.ಆರ್.ಪಿ ಜಾಸ್ತಿ ಆದ್ರೆ ಸಾಕು, ಇಲ್ಲಿ ಜನ ಹೆದ್ರಿ ಸತ್ರೂ ಪರ್ವಾಗಿಲ್ಲ, ನೈತಿಕತೆ ಬೇಕು.... ನೈತಿಕತೆ.."
ಅವರ ಮೂಗಿನ ತುದಿ ಕೆಂಪಾಗಿತ್ತು, ಕೈಗಳು ಸಿಟ್ಟಿನಿಂದ ನಡುಗುತ್ತಾ ಇತ್ತು...
ಬಿ.ಪಿ. ಹೆಚ್ಚಾಗಿ ಅಭಾಸ ಆದ್ರೆ ಕಷ್ಟ ಅನಿಸ್ತು... ಟಾಪಿಕ್ ಬದಲಾಯಿಸಿದೆ...
"ಸರ್, ನಾವು ಈ ಫ್ಲಾಟಿನ ಸಮಸ್ಯೆಗಳು, ವಿಚಾರಗಳನ್ನು ಹಂಚಿಕೊಳ್ಳೋದಕ್ಕೆ ಒಂದು ಅಸೋಸಿಯೇಶನ್ ಮಾಡಿದ್ದೇವೆ. ಅದಕ್ಕೊಂದು ವಾಟ್ಸಪ್ ಗ್ರೂಪು ಕೂಡಾ ಶುರು ಮಾಡಿದ್ದೇವೆ. ನಾನದರ ಅಡ್ಮಿನ್ನು. ನಿಮ್ಗೆ ಅಭ್ಯಂತರ ಇಲ್ಲ ಅಂದ್ರೆ ನಾನು ನಿಮ್ಮನ್ನು ಗ್ರೂಪಿಗೆ ಸೇರಿಸ್ತೇನೆ..."
ಹೇಳಿದೆ.
-----------
ಅವರ ಸಿಟ್ಟು ಕಡಿಮೆ ಯಾಯಿತು. ನಗು ಅರಳಿತು. "ಓ ಶ್ಯೂರ್ ಶ್ಯೂರ್... ಎಲ್ಲಿ ನಿಮ್ಮ ನಂಬರ್ ಕೊಡಿ, ನಾನು ಮಿಸ್ಡ್ ಕಾಲ್ ಕೊಡ್ತೀನಿ." ನಂಬರ್ ವಿನಿಮಯ ಆಯ್ತು. ನಾನವರನ್ನು ಸ್ಥಳದಲ್ಲೇ ಗ್ರೂಪಿಗೆ ಸೇರಿಸಿದ್ದೂ ಆಯ್ತು...
ಸ್ವಲ್ಪ ಹಿಂಜರಿಕೆಯಿಂದ ಹೇಳಿದೆ. "ಸರ್ ಗ್ರೂಪಿಗೆ ಕೆಲವು ರೂಲ್ಸ್ ಇದೆ, ಅನಗತ್ಯ ವಿಚಾರಗಳನ್ನು ಫಾರ್ವರ್ಡ್ ಮಾಡಬಾರದು, ಫ್ಲಾಟಿನ ವಿಚಾರ ಬಿಟ್ಟು ಮತ್ತೇನೂ ಹಾಕಬಾರದು."
"ಓ... ಐ ನೋ... ಐ ನೋ... ರೂಲ್ಸ್, ರೆಗ್ಯುಲೇಶನ್ ಎಲ್ಲ ಬೇಕ್ರೀ, ಇಲ್ದಿದ್ರೆ ಈ ದರಿದ್ರ ಮಿಡಿಯಾ ಥರ ಆಗಿ ಬಿಡ್ತದೆ... ಕಡಿವಾಣನೇ ಇಲ್ಲ..." ಹೇಳ್ತಾ ಹೋದ್ರು... ಕೈಮುಗಿದು ಆಚೆ ಬಂದೆ.
--------------------
ಒಂದರ್ಧ ಗಂಟೆ ಆಗಿರಬಹುದು, ಸದಾ ಸೈಲೆಂಟೇ ಆಗಿರುತ್ತಿದ್ದ ಗ್ರೂಪಿನಲ್ಲಿ ಠಣ್ಣನೆ ಯಜಮಾನ್ರ ಮೆಸೇಜು ಬಂತು.
ರಾಜ್ಯದಲ್ಲಿ ಒಂದೇ ದಿನ 45 ಕೋಟಿ ರು.ಮೌಲ್ಯದ ಮ್ದದ್ಯ ಮಾರಾಟ, ಸಮೀಕ್ಷಾ ವರದಿ ಹೇಳಿದೆ... ಅಷ್ಟುದ್ದದ ಮೇಸೇಜು, ಏನು, ಎತ್ತ ಅಂತಿಲ್ಲ.
ಪ್ರೆವೈಟ್ ಮೆಸೇಜ್ ಹಾಕಿದೆ. "ಸರ್ ಗ್ರೂಪಲ್ಲಿ ಬ್ರೇಕಿಂಗ್ ನ್ಯೂಸ್, ಅದೂ ಇದೂ ಎಲ್ಲ ಬೇಡ ಅನ್ಸುತ್ತೆ, ಬೇರೆ ಮೆಂಬರ್ಸು ಸಿಟ್ಟು ಮಾಡ್ಕೋತಾರೆ. ಫ್ಲಾಟಿನ ವಿಚಾರ ಮಾತ್ರ ಹಾಕಿ..."
"ಐ ನೋ ಐನೋ.. ಇದು ಗಂಭೀರ ವಿಷಯ ನೋಡಿ, ಎಷ್ಟು ಇಂಟರೆಸ್ಟೆಂಗ್ ಇದೆ ಅಲ್ವ... ಎಲ್ರೂ ತಿಳ್ಕೊಳ್ಲಿ ಬಿಡಿ. ಡೋಂಟ್ ವರಿ... ಐ ವಿಲ್ ಹ್ಯಾಂಡಲ್.." ಅವರ ಮಾರುತ್ತರ ಬಂತು...
ಮತ್ತೆ ಏನೂ ಹೇಳಲಿಲ್ಲ...
---------------
ಒಂದಾದ ಮೇಲೆ ಒಂದರ ಹಾಗೆ ಮೆಸೇಜು ಬರಲು ಶುರು ಆಯ್ತು. ಅಮೆರಿಕಾದಲ್ಲಿ ಕೊರೋನಾದಿಂದ ಸತ್ತ 10 ಮಂದಿಯ ದೇಹಗಳನ್ನು ಎಲ್ಲಿ ಹೂತು ಹಾಕಿದ್ರು ಅನ್ನೋ 15 ಫೋಟೋಗಳು ಬ್ಯಾಕ್ ಟು ಬ್ಯಾಕ್, ಕೊರೋನಾಗೆ ಜೀರಿಗೆ ಸೇವಿಸಿದ್ರೆ ಎಷ್ಟು ಪರಿಣಾಮಕಾರಿ ಅಂತ ಪಂಡಿತರೊಬ್ಬರು ವಿವರಿಸುವ ವಿಡಿಯೋ...
ಕೊರೋನಾದಿಂದ ಸತ್ತವರಲ್ಲಿ ಪುರುಷರು ಜಾಸ್ತಿನೋ, ಮಹಿಳೆಯರೋ... ಹೀಗೆ ಸಾಲು ಸಾಲು ಹೆಸರು, ವಿಳಾಸವಿಲ್ಲದ ಮೆಸೇಜುಗಳು ಬರಲು ಶುರು ಆಯ್ತು.
ಒಂದಿಬ್ಬರು ನನಗೆ ಪ್ರೇವೈಟ್ ಮೆಸೇಜು ಹಾಕಿದ್ರು. ಯಾರ್ರಿ ಅದು ಅಧಿಕ ಪ್ರಸಂಗಿ ರಾತ್ರಿ ಈ ಥರ ಡಿಸ್ಟರ್ಬ್ ಮಾಡ್ತಿದಾರೆ ಅಂತ.
ಮಹಾಶಯರಿಗೆ ಅರ್ಥವೇ ಆಗಲಿಲ್ಲ. ಮತ್ತೊಂದು ಹಾಕಿದ್ರು, ನಾನೇ ಬರೆದು ಓದಿದ ಕವನ, ಇದರ ಯ್ಯೂಟ್ಯೂಬ್ ಲಿಂಕ್ ಓಪನ್ ಮಾಡಿ, ನೋಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಂಡ ಕಂಡಲ್ಲಿ ಶೇರ್ ಮಾಡಿ...
ಇಲ್ನೋಡಿ... ಕೊರೋನಾ ಬಂದ ನಂತರ ಇಲ್ಲಿ ಕಸ ವಿಲೇವಾರಿ ಆಗ್ತಾ ಇಲ್ಲ... ಈ ಫೋಟೋ ನೋಡಿ, ಇದು ಪ್ರಧಾನು ಮಂತ್ರಿಯನ್ನು ತಲಪುವ ವರೆಗೂ ಶೇರ್ ಮಾಡಿ... !!
ಹೀಗೆ ಮೆಸೇಜು ಬರ್ತಾನೇ ಇತ್ತು. ಟಿ.ವಿ.ಯನ್ನಾದ್ರೂ ಆಫ್ ಮಾಡಬಹುದು, ಇವರನ್ನು ಕಂಟ್ರೋಲ್ ಮಾಡುವುದು ಕಷ್ಟ ಅನ್ನಿಸ್ತು. ಯಾಕಪ್ಪಾ ಗ್ರೂಪಿಗೆ ಸೇರಿಸಿದ್ನೋ ಅನಿಸ್ತು.
.....
ಕುತೂಹಲಕ್ಕೆ ಅವರ ಸ್ಟೇಟಸ್ ತೆಗೆದು ನೋಡಿದೆ...
ಮೊದಲಿಗೆ ದೇವರ ಭಜನೆ, ನಂತರ ದೇಶ ವಿದೇಶಗಳಲ್ಲಿ ಕೊರೋನಾದಿಂದ ಸತ್ತವರದ್ದು ಎನ್ನಲಾದ ಬೇರೆ ಬೇರೆ ವೆಬ್ ಸೈಟುಗಳಲ್ಲಿ ಬಂದ ಫೋಟೋಗಳ ರಾಶಿ, ಕಣ್ಣೀರಿನ ಸ್ಮೈಲೀಗಳು, ಕುಡಿದ ಮತ್ತಿನಲ್ಲಿ ಪುಣ್ಯಾತ್ಮನೊಬ್ಬ ಮೈಮರೆತು ಕುಣಿಯುವ ಟಿಕ್ ಟಾಕ್ ವಿಡಿಯೋ (ಇಂತಹ ವಿಡಿಯೋ ಶೇರ್ ಮಾಡಿದ್ರೆ ಕುಡಿದವನ ಖಾಸಗಿತನಕ್ಕೆ ಧಕ್ಕೆ ಬರಲ್ವೇ ಅಂತ ಆ ಯಜಮಾನರಲ್ಲಿ ಕೇಳುವಷ್ಟು ಧೈರ್ಯ ನನಗಿರಲಿಲ್ಲ), ಗುರೂಜಿಯೊಬ್ಬರು ಕೊರೋನಾ ಬರಲು ಏನು ಕಾರಣ ಅಂತ ಪಂಚಾಂಗ ನೋಡಿ ಹೇಳಿದ ಸಾಲುಗಳ ವಿಡಿಯೋ ಅಬ್ಬಬ್ಬಾ.... ಕೊನೆಗೆ ಬಹುನಿರೀಕ್ಷಿತವಾದದ್ದು...
"ಇಂದು ಸಂಜೆ ತಾನೇ ಸಿಕ್ಕಿದ ಎರಡು ಬಾಟಲ್ ಗುಂಡಿನ ಜೊತೆ ಸೆಲ್ಫಿ... !!!"
ತಲೆಕೆಟ್ಟು ಹೋಯ್ತು. ಅಷ್ಟರಲ್ಲಿ ನಾನು ಆನ್ ಲೈನ್ ಇರೋದು ಕಂಡು ಅವ್ರ ಮೆಸೇಜು ಬಂತು....
"ಸಾರಿ ಇವ್ರೇ... ಆಗ ಕೇಳೋದೇ ಮರೆತೆ, ನೀವು ಜಾಬ್ ಮಾಡ್ತಿದೀರ... ಏನು ಕೆಲ್ಸ?"
"ಹೌದು ನಾನು ಖಾಸಗಿ ಚಾನೆಲ್ ನಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಆಗಿದ್ದೇನೆ...."ಉತ್ತರ ಕಳುಹಿಸಿದೆ.
ಎರಡು ನಿಮಿಷ ಬಿಟ್ಟು ಉತ್ತರ ಬಂತು....
"ಸಾರಿ ಇವ್ರೇ... ಬೇಸರ ಮಾಡ್ಬೇಡಿ. ಸಂಜೆ ನಾನು ಬೈದದ್ದು ಎಲ್ಲ ಮೀಡಿಯಾಗೂ ಅಲ್ಲ... ಕೆಲವು ಮೀಡಿಯಾ ಮಾತ್ರ, ಎಲ್ಲ ಮೀಡಿಯಾಗಳೂ ಹಾಗಿರಲ್ಲ...." etc etc
(ಮೀಡಿಯಾವನ್ನು ಬೈದ ಬಳಿಕ ಮೀಡಿಯಾದಲ್ಲಿ ಕೆಲಸ ಮಾಡುವವರಲ್ಲಿ ಸ್ಪಷ್ಟೀಕರಣ ಕೊಡ್ತಾ, ಇದೇ ಮಾತು ಹೇಳ್ತಾ ಇರುವ ನೀವು 999ನೇ ವ್ಯಕ್ತಿ ಇರಬೇಕು, ಮನಸ್ಸಿನಲ್ಲೇ ಅಂದ್ಕೊಂಡೆ. ಈ ಮಾತು ಅವರಿಗೆ ಹೇಳಬೇಕು ಅನ್ನಿಸ್ಲಿಲ್ಲ.). "ಯಾವುದು ಸಾರ್ ಆ ಕೆಲವು ಮೀಡಿಯಾಗಳು?" ಅಂತ ಕೇಳೋಣ ಅನ್ನಿಸಿತು.
ಇದೇ ವಿಚಾರ ಹಲವರಲ್ಲಿ ಜಗಳ ಮಾಡಿ ಸಾಕಾಗಿತ್ತು. ಕೇಳುವ ಉತ್ಸಾಹವೂ ಹೊರಟು ಹೋಗಿತ್ತು.
"ಇಟ್ಸ್ ಓಕೆ ಸಾರ್, ಪ್ರಜಾಪ್ರಭುತ್ವ ಅಲ್ವ. ಎಲ್ರಿಗೂ ಅವರವರ ಅನಿಸಿಕೆ ಹೇಳುವ ಹಕ್ಕಿದೆ..." ಉತ್ತರ ಕೊಟ್ಟೆ.
"ಯೂ ಆರ್ ರೈಟ್... ಸಾರಿ ಪರ್ಸನಲ್ ಆಗಿ ತಗೋಬೇಡಿ...." ಮತ್ತೆ ಸಂದೇಶ ಬಂತು... ಉತ್ತರ ಕೊಡಬೇಕು ಅನ್ನಿಸ್ಲಿಲ್ಲ.
......
ಫ್ಲಾಟಿನವರೆಲ್ಲ ಕೈಯ್ಯಲ್ಲಿ ಬಡಿಗೆ ಹಿಡ್ಕೊಂಡು ಅಟ್ಟಿಸಿಕೊಂಡು ಬರ್ತಾ ಇದಾರೆ. "ಅಯ್ಯೋ ಯಾರ್ರಿ ಅದು ಅವ್ನನ್ನ ವಾಟ್ಸಪ್ ಗ್ರೂಪಿಗೆ ಸೇರ್ಸಿದ್ದು, ಏನು ಬಡ್ಕೋತಾನೆ ಇಡೀ ರಾತ್ರಿ...." ನಾನು ಏದುಸಿರು ಬಿಡುತ್ತಾ ಓಡುತ್ತಲೇ ಇದ್ದೆ... ಅಯ್ಯೋ ಗೇಟು ದಾಟಿದ ಮೇಲೆ ಸರ್ರನೆ ಜಾರಿ ಬಿದ್ದೆ.... ಇನ್ನೇನು ಬಡಿಗೆ ಏಟು ತಲೇಗೆ ಬೀಳಬೇಕು ಅನ್ನುವಷ್ಟರಲ್ಲಿ ಎಚ್ಚರ ಆಯ್ತು....
ಅಬ್ಬ ಕನಸು..!!!
ಬೆವರೊರೆಸಿಕೊಂಡೆ, ನೀರು ಕುಡಿದಾಗ ಸಮಾಧಾನ ಆಯ್ತು...
ರಾತ್ರಿ 12 ಗಂಟೆ, ವಾಟ್ಸಪ್ ಚೆಕ್ ಮಾಡಿದೆ, ಮಹಾಶಯರು ಇನ್ನೂ
ಆನ್ ಲೈನಿನಲ್ಲೇ ಇದ್ರು.
ಮೆಸೇಜು ಮಾಡಿದೆ....
"ಸರ್ ನಾಳೆ ಸಂಜೆ ಫ್ಲಾಟಿನ ಪಾರ್ಕಿಂಗ್ ಏರಿಯಾದಲ್ಲಿ ನಿಮ್ಮದೊಂದು ಸಣ್ಣ ಉಪನ್ಯಾಸ ಇಡೋಣ ಅಂತ ಇದ್ದೇನೆ. ನಮ್ಮ ಅಸೋಸಿಯೇಶನ್ ಅವರಿಗೆ. ವಿಷಯ ನೈತಿಕತೆ, ಸಾಮಾಜಿಕ ಬದ್ಧತೆ ಹಾಗೂ ಸಾಂಸ್ಕೃತಿಕ ಕಾಳಜಿ.... ದಯವಿಟ್ಟು ಇಲ್ಲ ಅನ್ನಬಾರದು..."
ಅವ್ರಿಗೆ ಸಿಕ್ಕಾಪಟ್ಟೆ ಖುಷಿ ಆಯ್ತು. "ಖಂಡಿತಾ ಇವ್ರೇ... ನಾನು ವ್ಯಕ್ತಿತ್ವ ವಿಕಸನ ತರಬೇತಿ ನೀಡಲು ಶುರ ಮಾಡಿ 30 ವರ್ಷ ಆಯ್ತು. ಖಂಡಿತಾ ಶಾರ್ಪ್ ಐದು ಗಂಟೆಗೆ ರೆಡಿ ಇರ್ತೇನೆ" ಅಂದ್ರು.
ಗುಡ್ ನೈಟ್ ಸರ್...
ಮಲಗಿದೆ.
.....
ಬೆಳಗ್ಗೆ ಏಳುವಾಗಲೇ ಯಜಮಾನರ ಮೆಸೇಜು... ಇವ್ರೇ... ರಾತ್ರಿಯೆಲ್ಲ ಕುಳಿತು ಇಂದು ಸಂಜೆಯ ಉಪನ್ಯಾಸ ಡ್ರಾಫ್ಟ್ ಮಾಡಿದೆ. ವಾಟ್ಸಪ್ಪಿನಲ್ಲಿ ಕಳಿಸಿದ್ದೇನೆ ನೋಡಿ. ಒಮ್ಮೆ ನೋಡಿ ಸರಿ ಇದೆಯಾ ಹೇಳಿ ಪ್ಲೀಸ್...
ಫೈಲ್ ಓಪನ್ ಮಾಡಿದೆ....
"ದೇಶ ಇಂದು ಎತ್ತ ಹೋಗುತ್ತಿದೆ. ಸೂಕ್ಷ್ಮತೆ ಕಳೆದುಕೊಳ್ಳುತ್ತಿದ್ದೆಯಾ. ನಮ್ಮಲ್ಲಿನ ಸಾಮಾಜಿಕ ಬದ್ಧತೆ ಏನಾಗುತ್ತಿದೆ... ನಾವು ಕೇಳಿಸಿಕೊಳ್ಳುವುದನ್ನೇ ಮರೆತಿದ್ದೇವಾ... ನಮ್ಮಲ್ಲಿ ನೈತಿಕತೆ ಕಡಿಮೆ ಆಗುತ್ತಿದೆಯೇ.... ಇತರರ ಭಾವನೆಗಳಿಗೆ ಬೆಲೆಯೇ ಕೊಡ್ತಾ ಇಲ್ವೇ... ಬದಲಾಗಲು ನಾವೇನು ಮಾಡಬೇಕು..."
ಮತ್ತೆ ಓದಲು ಮನಸ್ಸಾಗಲಿಲ್ಲ.
ಆಚೆ ಫ್ಲಾಟಿನಿಂದ ಅವ್ರು ಹೆಂಡತಿ ಜೊತೆ ದೊಡ್ಡ ಸ್ವರದಲ್ಲಿ ಕೂಗಾಡುವುದು ಕೇಳಿತು... "ಥತ್ ಈ ಚಾನೆಲ್ ನವರಿಗೆ ಜವಾಬ್ದಾರಿಯೇ ಇಲ್ಲ.... ಮದ್ಯ ಖರೀದಿ ಮಾತ್ರ ಅಲ್ಲ, ಕುಡಿಯೋದನ್ನೂ ತೋರಿಸ್ತಾರಲ್ಲ, ನಾಳೆ ಇವ್ರೂ ಬೆಡ್ ರೂಂಗೂ ಬಂದ್ರೂ ಬರಬಹುದು... ತೋರಿಸಿದ್ದನ್ನೇ ತೋರಿಸ್ತಾರಲ್ಲ... ಇವ್ರನ್ನ ರಿಪೇರಿ ಮಾಡುವುದು ಯಾರು..."
ನಾನು ಟಿ.ವಿ. ವ್ಯಾಲ್ಯೂಂ ಜಾಸ್ತಿ ಮಾಡಿದೆ....!
-ಕೃಷ್ಣಮೋಹನ ತಲೆಂಗಳ.

No comments:
Post a Comment