ಒಗ್ಗಟ್ಟಿನ ಬಲ (ಅನನ್ಯ ಬರೆದ ಕಥೆ)
ಒಂದು ದೊಡ್ಡ ಮರದಲ್ಲಿ ಪಕ್ಷಿ, ಅಳಿಲು, ಇರುವೆ ವಾಸಿಸುತ್ತಿದ್ದವು. ಪಕ್ಷಿ ಮರದ ರೆಂಬೆಯಲ್ಲಿ, ಅಳಿಲು ಮರದ ಪೊಟರೆಯಲ್ಲಿ ಹಾಗೂ ಇರುವೆ ಮರದ ಬುಡದಲ್ಲಿ ವಾಸಿಸುತ್ತಿದ್ದವು. ಇರುವೆ ಬುದ್ಧಿವಂತ ಪ್ರಾಣಿಯಾಗಿತ್ತು ಹಾಗೂ ಜಗಳ ಮಾಡುತ್ತಿರಲಿಲ್ಲ. ಆದರೆ ಅಳಿಲು ಮತ್ತು ಪಕ್ಷಿ ಯಾವಾಗಲು ಜಗಳ ಮಾಡುತ್ತಿದ್ದವು.
ಒಂದು ದಿವಸ ಒಬ್ಬ ಮರ ಕಡಿಯುವಾತ ಆ ದೊಡ್ಡ ಮರವನ್ನು
ನೋಡಿ ಯೋಚಿಸಿದ, “ನಾನು ಈ ಮರವನ್ನು ಕಡಿದು ಮಾರಿದರೆ ತುಂಬ ದುಡ್ಡು
ಸಿಗಬಹುದು. ನಾನು ಈಗಲೇ ಆ ಮರವನ್ನು ಕಡಿಯುತ್ತೇನೆ” ಎಂದು ಯೋಚಿಸಿ ಒಂದು ಕೊಡಲಿಯನ್ನು ತೆಗೆದುಕೊಂಡು ಆ ಮರದ
ಹತ್ತಿರ ಹೋದ.
ಅದನ್ನು ಕಂಡ ಪಕ್ಷಿ ಹೇಳಿತು. “ಅಳಿಲೇ ನಾನು ಆ ಮರ ಕಡಿಯುವಾತನನ್ನು
ಓಡಿಸುತ್ತೇನೆ. ನಿನಗಿಂತ ನಾನೇ ಶಕ್ತಿವಂತ” ಎಂದಿತು. ಆಗ ಅಳಿಲು, “ಇಲ್ಲ, ಇಲ್ಲ ನಾನೇ ಶಕ್ತಿವಂತ” ಎಂದಿತು ಮತ್ತೆ ಚಿಕ್ಕ ವಿಷಯಕ್ಕೆ ಜಗಳ
ಆರಂಭವಾಯಿತು.
ಆಗ ಇರುವೆ, “ಸಾಕು ಮಾಡಿ ನಿಮ್ಮ ಜಗಳ. ನೀವು ಹೀಗೆ
ಜಗಳ ಮಾಡುತ್ತಾ ಇದ್ದರೆ ಮರ ಕಡಿಯುವಾತ ನಮ್ಮ ಮರವನ್ನು ಕಡಿಯುತ್ತಾನೆ. ಆಗ ನಮ್ಮ ಮರಿಗಳು, ಆಹಾರ
ಎಲ್ಲ ನಾಶವಾಗುತ್ತವೆ, ಅದರ ಬದಲು ನಾವೆಲ್ಲ ಒಗ್ಗಟ್ಟಾಗಿ ಅವನನ್ನು ಓಡಿಸೋಣ” ಎಂದಿತು.
ಆಗ, ಅವರಿಗೂ ಅದು ಸರಿ
ಎನಿಸಿತು. ಅವರೆಲ್ಲರೂ ಒಟ್ಟಿಗೆ ಸೇರಿದರು. ಇರುವೆ ಮರ ಕಡಿಯಲು ಬಂದವನ ಕಾಲಿಗೆ ಕಚ್ಚಿತು. ಅಳಿಲು
ಅದು ಶೇಖರಿಸಿಟ್ಟಿದ್ದ ಕಡಲೆ ಕೋಡುಗಳನ್ನು ಅವನ ಮೇಲೆ ಎಸೆಯಿತು. ಪಕ್ಷಿ ಅವನಿಗೆ
ಕುಕ್ಕುತೊಡಗಿತು. ಆಗ ಇದನ್ನು ಸಹಿಸಲಾಗದೆ ಮರಕಡಿಯುವಾತ ಓಡಿ ಹೋದ.
ಆಗ ಪ್ರಾಣಿಗಳಿಗೆಲ್ಲ ತುಂಬ
ಸಂತೋಷವಾಯಿತು. ಅವರು ಒಗ್ಗಟ್ಟಿನ ಬಲ ಅರಿತರು.
ನೀತಿ: ಒಗ್ಗಟ್ಟಿನಲ್ಲಿ ಬಲವಿದೆ.
-ಅನನ್ಯ ತಲೆಂಗಳ
(07.05.2021)
1 comment:
Cute & Sweet Story. I loved this story. Keep writing. God Bless You Ananya😍
Post a Comment