ಖಚಿತಪಡಿಸದ/ಸುಳ್ಳು ಸುದ್ದಿಗಳ ಪ್ರಚಾರವೂ ಒಂಥರಾ ವೈರಸ್ಸೇ!

(ಪ್ರತಿ forward messageಗೂ ಶುಲ್ಕ ವಿಧಿಸಿದರೆ ಅನಗತ್ಯ forward ಪಿಡುಗು, ಅತ್ಯುತ್ಸಾಹ ನಿಲ್ಲಬಹುದೇನೋ!)
...

ಆತ್ಮೀಯ ಜಾಲತಾಣಗಳ ಬಳಕೆದಾರರೇ,
 
ಕೊರೋನಾ ವೈರಸ್ ರಸ್ತೆಗಳಲ್ಲಿ ಓಡಾಡುವುದಿಲ್ಲ. ಅದು ದೇಹಗಳೊಳಗಿದ್ದು ಸಾಮಿಪ್ಯದಿಂದ ಹರಡುತ್ತದೆ. ಆದರೆ ಪದೇ ಪದೇ ಸರ್ಕಾರ ಮನವಿ ಮಾಡಿದರೂ ಕೇಳದೆ ಜನ, ಸಾರ್ವಜನಿಕರು ಓಡಾಡಿದ್ದರಿಂದಲೇ ದೇಶ  ಲಾಕ್ ಡೌನ್ ಆಗಿದೆ!

ಈಗ ಬಹುತೇಕರು ಮನೇಲಿದ್ದಾರೆ. ಉಚಿತ ಇಂಟರ್ ನೆಟ್ ಇದೆ. ಸ್ಮಾರ್ಟ್ ಫೋನುಗಳಿವೆ. ಶೀರ್ಷಿಕೆಗಳು ಲೆಕ್ಕಕ್ಕೇ ಇಲ್ಲದೆ ಕಂಡ ಕಂಡ whatsapp ಗ್ರೂಪುಗಳಲ್ಲಿ ಕೊರೋನಾ ಜಾಗೃತಿ ಉಕ್ಕಿ ಹರಿಯುತ್ತಿವೆ. ಇವುಗಳಲ್ಲಿ ಬಹಳಷ್ಟು ಖಚಿತ ಪಡಿಸದ ವಾರ್ತೆಗಳು, ಇನ್ನು ಕೆಲವು ವದಂತಿ, ಮತ್ತೆ ಕೆಲವು ಸುಳ್ಳು ಸುದ್ದಿಗಳು. ಕಂಡ ಕಂಡ ಗ್ರೂಪುಗಳಿಗೆ forward ಆಗ್ತಾನೇ ಇವೆ. ಸಾವಿರಗಟ್ಟಲೆ ಮೆಸೇಜುಗಳು ನಿಮಿಷದೊಳಗೆ ಬಂದು ರಾಶಿ ಬೀಳುತ್ತಿವೆ. ನೈಜ ಸುದ್ದಿಗಳನ್ನು ನೀಡಲೆಂದೇ ಇರುವ ಪತ್ರಕರ್ತರನ್ನೂ ಇಕ್ಕಟ್ಟಿಗೆ ಸಿಲುಕಿಸುವಂಥ ಫೇಕ್ ಸುದ್ದಿಗಳನ್ನು ಮನೆಯೊಳಗೆ ಕುಳಿತೇ ನಿರ್ಭೀತರಾಗಿ ಮುಂದೂಡುತ್ತಲೇ ಇದ್ದಾರೆ! ಸುಳ್ಳು ಸುದ್ದಿಗಳ ಸೃಷ್ಟಿ ಮತ್ತು ಪ್ರಚಾರ ಎರಡೂ ಅಪರಾಧ ಎಂಬುದು ಗೊತ್ತೇ ಇಲ್ವೇನೋ!

ಹೀಗೆಯೇ ಆದರೆ ದೇಶದ ಹಾಗೆ ಜಾಲತಾಗಳೂ ಲಾಕ್ ಡೌನ್ ಆಗುವ ದಿನಗಳು ದೂರವಿಲ್ಲ!

ಗಮನಿಸಿ:

1) ವೈದ್ಯರ ಕೆಲಸ ವೈದ್ಯರಿಗೆ, ಪೊಲೀಸ ಕೆಲಸ ಪೊಲೀಸರಿಗೆ, ಪತ್ರಕರ್ತರ ಕೆಲಸ ಪತ್ರಕರ್ತರಿಗೆ ಮಾಡಲು ಬಿಡಿ....ಎಲ್ಲರೂ ಎಲ್ಲವೂ ಆಗಲು ಹೊರಡುವ ಆತುರ ಬೇಡ

2) ಮೂಲಗಳೇ ಇಲ್ಲದ ಸುದ್ದಿಗಳನ್ನು forward ಮಾಡುವುದರಿಂದ ಯಾವ ಕೊರೋನಾ ಜಾಗೃತಿಯೂ ಆಗುವುದಿಲ್ಲ. ಸುಳ್ಳು ಸುದ್ದಿಗಳನ್ನು ಹಂಚಿದರೆ ಜನ ನಂಬ್ತಾರೆ, ಪ್ಯಾನಿಕ್ ಆಗ್ತಾರೆ ಅನ್ನುವ ಪ್ರಜ್ಞೆ ಇರಲಿ

3) ಪ್ರಧಾನ ಸುದ್ದಿ ವಾಹಿನಿಗಳಷ್ಟೇ ಜಾಲತಾಣದ ತಲಪುವಿಕೆಯೂ ಸಶಕ್ತವಾಗಿದೆ. ನೀವು ಹಾಕುವ ಪೋಸ್ಟ್ ಕೆಲವೇ ಕ್ಷಣಗಳಲ್ಲಿ ಸಾವಿರಗಳ ಸಂಖ್ಯೆಯಲ್ಲಿ ಹರಡುತ್ತದೆ. ತಪ್ಪು ಸುದ್ದಿಗಳು ಅಪಪ್ರಚಾರವಾಗ್ತವೆ ಎಂಬುದು ನೆನಪಿರಲಿ.

4) ಪ್ರತಿ whatsapp ಗ್ರೂಪುಗಳಿಗೂ ದಿನದ 24 ಗಂಟೆಯೂ ಕೊರೋನಾ ಸುದ್ದಿಗಳನ್ನು (I mean ಹೆಸರು ವಿಳಾಸವಿಲ್ಲದ ಪೋಸ್ಟುಗಳನ್ನು) forward ಮಾಡಿಯೇ ಸಿದ್ಧ ಎಂಬ ಕೆಟ್ಟ ಹಠ ಬಿಟ್ಬಿಡಿ. ಸ್ವಲ್ಪ ಮನಸ್ಸನ್ನು ಹಗುರಗೊಳಿಸುವ ವಿಚಾರಗಳನ್ನೂ ಆಯಾ ಗ್ರೂಪುಗಳ ಆಶಯಕ್ಕೆ ಪೂರಕವಾಗಿ ಹಂಚಿಕೊಳ್ಳಿ, ಜನರ ಒತ್ತಡವನ್ನು ಕಡಿಮೆ ಮಾಡಿ. 

5) ಎಷ್ಟು ಹೇಳಿದರೂ ಕೇಳದೆ forward ಪಿಡುಗು ಹೀಗೆಯೇ ಮುಂದುವರಿದರೆ ಇನ್ನು ನನ್ನ ಸಲಹೆ ಎರಡೇ: 1) ಪ್ರತಿ forward messageಗೂ ಅವರವರ ಬ್ಯಾಂಕ್ ಖಾತೆಯಿಂದ ಕನಿಷ್ಠ 50 ರು.(1 ರು. ಕೂಡಾ ಸಾಕು) ಕಡಿತ ಆಗಿಸಬೇಕು. 2) ಈ ಹಿಂದೆ forward ಮಾಡಿದ ಎಲ್ಲರ ಹೆಸರೂ watermark ರೂಪದಲ್ಲಿ ಸಂದೇಶದಲ್ಲಿ ಮೂಡಬೇಕು.

ಈ forward ವ್ಯಾಧಿಗೆ ಇನ್ನೇನೂ ಮದ್ದು ಕಾಣುತ್ತಿಲ್ಲ. ನಿಮಗೆ ಯಾರಿಗಾದರೂ ಪರಿಹಾರ ಗೊತ್ತಿದ್ದರೆ ಮದ್ದು ತಿಳಿಸಿ.

-ಕೃಷ್ಣಮೋಹನ.
(forward ಸುದ್ದಿ ದಾಳಿಗಳಿಂದ ಬಳಲಿದ ಓರ್ವ ಹತಾಶ ಜಾಲತಾಣ ಬಳಕೆದಾರ)

No comments:

Popular Posts