ಮಮ್ಮೂಟ್ಟಿ ಮುಖ್ಯಮಂತ್ರಿಯಾಗಿದ್ದು ಗೊತ್ತ....
ಚಿತ್ರ- ONE
ಭಾಷೆ-ಮಲಯಾಳಂ
ನಾಯಕ-ಮಮ್ಮೂಟ್ಟಿ....
ನಿರ್ದೇಶನ-ಸಂತೋಷ್ ವಿಶ್ವನಾಥ್
ಬಿಡುಗಡೆ-ಮಾ.26, 2021
.....
ವಾಸ್ತವ
ಜಗತ್ತಿನಲ್ಲಿ ಇಂತಹ ಮುಖ್ಯಮಂತ್ರಿ ಕಾಣ ಸಿಗುತ್ತಾರೋ ಗೊತ್ತಿಲ್ಲ. ಆದರೆ, ಇತ್ತೀಚೆಗೆ
ಬಿಡುಗಡೆಗೊಂಡ ಮಲಯಾಳಂ ಚಿತ್ರ ವನ್ ಇದರ ನಾಯಕ ಮಮ್ಮೂಟ್ಟಿ ಮಾತ್ರ... ನಿಮ್ಮಲ್ಲಿ ಹೌದೌದು
ಇದ್ದರೆ ಇಂತಹ ಸಿಎಂ ಬೇಕು ಅಂತ ಅನ್ನಿಸುವ ಹಾಗೆ ಮಾಡುವುದರಲ್ಲಿ ಸಂಶಯ ಇಲ್ಲ.
ಎಂದಿನ
ಹಾಗೆ ಮಲಯಾಳಂ ಭಾಷೆಯ ಪಕ್ಕಾ ಮನರಂಜನೆ ಸಿನಿಮಾ ಇದು. ಆಯಾ ನಟರನ್ನು ಎಷ್ಟು, ಹೇಗೆ ಬಳಸಬೇಕು,
ಹೇಗೆ ತೋರಿಸಬೇಕು ಎಂಬುದರಿಂದ ಹಿಡಿದು ಕಥಯ ಓಘವನ್ನು ಅತ್ಯಂತ ಅಚ್ಚುಕಟ್ಟಾಗಿ ತೆರೆಗೆ
ತಂದಿದ್ದಾರೆ ಸಂತೋಷ್ ವಿಶ್ವನಾಥ್. ಮಮ್ಮೂಟ್ಟಿಯ ಎಂದಿನ ಸಹಜ ಶೈಲಿ ಹಾಗೂ ನಟನೆ ಅವರ
ಅಭಿಮಾನಿಗಳನ್ನೂ ರಂಜಿಸಬಲ್ಲ ಅಂಶಗಳಿವೆ. ಪ್ರಜಾಪ್ರಭುತ್ವದ ಅತಿರೇಕಗಳು, ಸಹಜ ನಡೆಗಳು, ಕುಟಿಲ
ನೀತಿಗಳೂ ತುಂಬ ಚೆನ್ನಾಗಿ ಪ್ರಸ್ತುತಿಯಾಗಿವೆ. ಎಲ್ಲದಕ್ಕಿಂತ ಇಷ್ಟವಾಗುವುದು ಒಂದೆರಡು ಅಸಹಜ
ಅನ್ನಿಸಬಹುದಾದ ಸನ್ನಿವೇಶಗಳು ಕಥೆಯಲ್ಲಿ ಇರುವುದು ಬಿಟ್ಟರೆ ಅಷ್ಟೂ ಸಿನಿಮಾದ ಪ್ರಸ್ತುತಿ ಹಾಗೂ
ನಿರೂಪಣೆಯಲ್ಲಿ ಸಹಜತೆ ಇದೆ. ಅಚ್ಚುಕಟ್ಟುತನ ಇದೆ. ದೃಶ್ಯಗಳ ಜೋಡಣೆ ಹಾಗೂ ತೋರಿಸಿದ ರೀತಿ ಕೂಡಾ
ಸಿನಿಮಾವನ್ನು ಆಪ್ತವಾಗಿಸುತ್ತದೆ. ಫೇಸ್ಬುಕ್ಕಿನಲ್ಲಿ ಮುಖ್ಯಮಂತ್ರಿಗೆ ಬೈಯ್ದು ಹಾಕುವ ಅನಾಮಧೇಯ
ಪೋಸ್ಟಿನಿಂದ ಶುರುವಾಗುವ ಕಥೆ ಪ್ರಜಾಪ್ರಭುತ್ವದ ತತ್ವಕ್ಕೆ ಇನ್ನಷ್ಟು ಬೆಲೆ ಕೊಡುವ ಮಸೂದೆ
ಮಂಡನೆ ವರೆಗೆ ಸಾಗುತ್ತದೆ. ಹಾಗಂತ ಸಿನಿಮಾ ಬೋರು ಹೊಡೆಸುವುದಿಲ್ಲ. ಮನರಂಜನೆ, ಸಂದೇಶ ಎಲ್ಲವೂ
ಇದೆ. ಸಿನಿಮಾದಲ್ಲಿ ಒಂದೇ ಒಂದು ಫೈಟಿಂಗ್ ಇಲ್ಲ, ಮರ ಸುತ್ತುವ ಹಾಡುಗಳಿಲ್ಲ, ಬೇಕಿರಲಿಲ್ಲ
ಅನ್ನಿಸುವ ದೃಶ್ಯಗಳಿಲ್ಲ. ಕುಟುಂಬ ಸಮೇತ ನೋಡಬಹುದಾದ ಚಿತ್ರವೂ ಹೌದು.
ಕುಂಬ್ಳಾಂಗಿ
ನೈಟ್ಸ್ ನಲ್ಲಿ ಗಮನ ಸೆಳೆದ ಹುಡುಗ ಮ್ಯಾಥ್ಯೂ ಥೋಮಸ್ ಅದೇ ಲವಲವಿಕೆಯ ಅಭಿನಯ ನೀಡಿದ್ದಾನೆ. ಪೋಷಕ
ನಟರ ದಂಡೇ ಸಿನಿಮಾದಲ್ಲಿದೆ. ಸಲೀಂ ಕುಮಾರ್, ಮಮ್ಮುಕ್ಕೋಯ ತಮಗೆ ಸಿಕ್ಕಿದ ಅಷ್ಟೂ ಪಾತ್ರವನ್ನು
ಕಣ್ಣು ತೇವಗೊಳಿಸುವ ರೀತಿಯಲ್ಲಿ ಅಭಿನಯಿಸಿ ತಮ್ಮ ಹಿರಿತನವನ್ನು ಸಾಬೀತು ಪಡಿಸಿದ್ದಾರೆ. ಮುರಳಿ
ಗೋಪಿ (ವಿಲನ್), ಬಾಲಚಂದ್ರನ್, ಸಿದ್ದೀಕ್ ಸಹಿತ ಹಲವು ಹಿರಿಯ ನಟರು ರಾಜಕಾರಣಿಗಳಾಗಿ
ಮಿಂಚಿದ್ದಾರೆ. ಕ್ಲೈಮಾಕ್ಸ್ ನ ಸದನದ ದೃಶ್ಯ ಕೂಡಾ ಇಷ್ಟವಾಯಿತು. ಇದರ ಚಿತ್ರೀಕರಣ ನಡೆದದ್ದು
ಲಾಕ್ ಡೌನ್ ಅವಧಿಯಲ್ಲಿ ಇರಲಿಕ್ಕಿಲ್ಲ. ಸಿನಿಮಾ ನೆಟ್ ಫ್ಲಿಕ್ಸ್ ನಲ್ಲಿ ಲಭ್ಯ.
-ಕೃಷ್ಣಮೋಹನ
ತಲೆಂಗಳ.
Seen "One" on Netflix yet?
https://www.netflix.com/title/81327516?s=a&trkid=13747225&t=wha
No comments:
Post a Comment