ಕೇಳಲೊಂಥರಾ... ಥರಾ...!

ಮುಂಗಾರುಮಳೆ ಬಾಕ್ಸ್ ಆಫೀಸಲ್ಲಿ ಹಿಟ್ ಆಗಿದ್ದು ಮಾತ್ರ ಅಲ್ಲ. ಕಳೆದು ಹೋಗುತ್ತಿದ್ದ ಕನ್ನಡದ ಸುಮಧುರ ಚಿತ್ರಗೀತೆಗಳ ಪರ್ವವನ್ನು ಮತ್ತೆ ಶುರುವಿಟ್ಟುಕೊಂಡಿತು. ವಿಶೇಷವಾಗಿ ಸಾಹಿತ್ಯದ ಕೋನದಿಂದ ನೋಡಿದ್ರೆ ಕಾಯ್ಕಿಣಿ, ಮನೋಮೂರ್ತಿ, ಸೋನು ನಿಗಂ -ಸಂಗಮ ‘ಮುಂಗಾರು ಮಳೆ’ಯ ನಂತರವೂ ಹಲವು ಚಿತ್ರಗಳಲ್ಲಿ ಕಿವಿಗಿ೦ಪಾದ ಹಾಡುಗಳನ್ನು ಕೊಟ್ಟಿದೆ. ಹೆಚ್ಚು ಕಡಿಮೆ ಉಳಿದೋರು ಅದೇ ಟ್ರೆಂಡ್ ಮುಂದುವರಿಸಿದ್ರು ಅಂತಾನೇ ಹೇಳ್ಬಹುದು
... ನಿನ್ನಿಂದಲೇ..., ಮಳೆ ನಿಂತು ಹೋದ ಮೇಲೆ, ಮಿಂಚಾಗಿ ನೀನು ಬರಲು.., ಈ ಸಂಜೆ ಯಾಕಾಗಿದೆ..., ನಾದಿಂ ಧೀಂತನಾ..., ನೀನು ಬಂದ ಮೇಲೆ ತಾನೆ..., ಹೇಳಲೊಂಥರಾ ಥರಾ..., ಏನಾಗಲೀ ಮುಂದೆ ಸಾಗು ನೀ..., ನನಗು ಒಬ್ಬ ಗೆಳೆಯ ಬೇಕು.. ಹೀಗೆ ಸಾಲು ಸಾಲು ಇಂಪಾದ ಹಾಡುಗಳು ಕನ್ನಡ ಸಿನಿಮಾದಲ್ಲಿ ಬರ್ತಾ ಇವೆ. ಎವರ್‍ ಗ್ರೀನ್ ಹಾಡುಗಳ ಜಮಾನ ಎಲ್ಲಿ ಮುಗಿದು ಹೋಯಿತೋ ಅಂದುಕೊಳ್ಳುವಷ್ಟರಲ್ಲಿ, ಜನ ಒಳ್ಳೆ ಹಾಡು ಕೊಟ್ರೆ ಕೇಳೇ ಕೇಳ್ತಾರೆ ಅಂತ ಪ್ರೂವ್ ಆಗಿದೆ...
ಈ ನಡುವೆ ಸತ್ಯ ಭಾಮಾ ಬಾರಮ್ಮ..., ಕೊಲ್ಲೇ ನನ್ನನ್ನೇ..., ನಿನ್ನಾ ಪೂಜೆಗೆ ಬಂದೆ ಮಾದೇಶ್ವರ..., ಜಿಂಕೆ ಮರೀನಾ... ಸ್ಟ್ಯಲ್ ಹಾಡುಗಳೂ ಹಿಟ್ ಆಗಿವೆ... ದೇಶೀಯ ಸಂಗೀತ ಹಾಳಾಗ್ತಾ ಇದೆ ಅಂತ ಎಷ್ಟು ಬಾಯಿ ಬಾಯಿ ಬಡ್ಕೊಂಡ್ರೂ ‘ಟೇಸ್ಟ್ ಬದಲಾವಣೆ ಅನ್ನೋದು ತನ್ನ ಪಾಡಿಗೆ ವಿಚಿತ್ರವಾಗಿ ಆಗ್ತಾನೇ ಇರ್‍ತದೆ’! ಆದರೆ ಒಂದು ಸಂಶಯ-ಅಭಿರುಚಿಯನ್ನ ಜನಕ್ಕೆ ಬೇಕಾದ ಹಾಗೆ ಇಂಡಸ್ಟ್ರಿ ಕೊಡುತ್ತೋ? ಅಥವಾ ಇಂಡಸ್ಟ್ರಿ ಕೊಟ್ಟದ್ದನ್ನ ಜನ ಸ್ವೀಕರಿಸಲೇ ಬೇಕಾಗುತ್ತೋ ಅಂತ?

10 comments:

Chevar said...

very nice. the opinion of you are true.

ಚಿತ್ರಾ ಸಂತೋಷ್ said...

"ಅಭಿರುಚಿಯನ್ನ ಜನಕ್ಕೆ ಬೇಕಾದ ಹಾಗೆ ಇಂಡಸ್ಟ್ರಿ ಕೊಡುತ್ತೋ? ಅಥವಾ ಇಂಡಸ್ಟ್ರಿ ಕೊಟ್ಟದ್ದನ್ನ ಜನ ಸ್ವೀಕರಿಸಲೇ ಬೇಕಾಗುತ್ತೋ ಅಂತ?"-ಹೌದು..ನಾನು ಅದನ್ನೇ ಯೋಚನೆ ಮಾಡ್ತಾ ಇದ್ದೀನಿ..!!!
-ಚಿತ್ರಾ

ಹರೀಶ ಮಾಂಬಾಡಿ said...

ಇಂಡಸ್ಟ್ರಿ ಕೊಟ್ಟದ್ದನ್ನ ಜನ ಸ್ವೀಕರಿಸುತ್ತಾರೆ ಎಂಬ ಧೈರ್ಯದೊಂದಿಗೆ ಚಿತ್ರಗೀತೆಗಳು ರಚನೆ ಆಗುತ್ತವೆ.. ಅದೇ ಹಿಂದಿ ಶೈಲಿಯ ಕನ್ನಡ ಹಾಡುಗಳನ್ನು ವಿಚಿತ್ರವಾಗಿ ಒದರುವ ನಮ್ಮದೇ ಸಂಗೀತ ನಿರ್ದೇಶಕರಿರುವವರೆಗೆ ಯಾರೇನು ಮಾಡಲು ಸಾಧ್ಯ? ಈಗ ಜೊಂಕೆ ಮರೀನಾ ಹಾಡನ್ನೇ ತೆಗೆದುಕೊಳ್ಳಿ. ಅದರ ಉಚ್ಹಾರ ಕನ್ನಡದಂತೆ ಇತ್ತಾ? ಯಾವುದೋ ತಮಿಳು ಹಾಡು ಕೇಳಿದಂತೆ ಆಗುವುದಿಲ್ಲವೇ? ಕುಮಾರ್ ಸಾನು, ಸೋನು ನಿಗಮ್ ಅದೆಸ್ಟೇ ಒಳ್ಳೆ ಸಾಹಿತ್ಯದ ಹಾಡನ್ನು ಹಾಡಿದರೂ ನಮ್ಮ ಕನ್ನಡದ ಅಥವಾ ದ.ಭಾರತದ ಹಾಡುಗಾರರು ಹಾಡಿದಂತಾಗಿತ್ತದೆಯೆ?

ಮಿಥುನ ಕೊಡೆತ್ತೂರು said...

ಹಳೇ ಹಾಡುಗಳನ್ನು ಕೇಳೋ ಮಜಾನೇ ಬೇರೆ? ಇತ್ತೀಚಿಗಿನ ಚಿತ್ರಾನ್ನ ಚಿತ್ರಾನ್ನದಂತಹ ಹಾಡುಗಳನ್ನು ಹೊರತು ಪಡಿಸಿದರೆ, ಅನೇಕ ಹಾಡುಗಳ ಸಾಹಿತ್ಯ ಸೂಪರ್ ಅಲ್ವಾ

Unknown said...

ಅಭಿರುಚಿಯನ್ನ ಜನಕ್ಕೆ ಬೇಕಾದ ಹಾಗೆ ಇಂಡಸ್ಟ್ರಿ ಕೊಡುತ್ತೋ? ಅಥವಾ ಇಂಡಸ್ಟ್ರಿ ಕೊಟ್ಟದ್ದನ್ನ ಜನ ಸ್ವೀಕರಿಸಲೇ ಬೇಕಾಗುತ್ತೋ ಅಂತ?
mara modalo beeja modalo anno prashnege uttara eshtu kashtavo ee prashnegu uttara ashte kashta.

ರಾಧಾಕೃಷ್ಣ ಆನೆಗುಂಡಿ. said...

Nice item.......

Photo is distrubing...!

ಬಾನಾಡಿ said...

ಒಳ್ಳೆಯದು ಕಿಟ್ಟಣಭಟ್ರ ಪುಳ್ಳಿಯವ್ರೆ. ನಿಮ್ಮ ಹಳೆಯ ಬ್ಲಾಗ್ ನೋಡಿ ತುಂಬಾ ದಿನದ ನಂತ್ರ ನಾನು ಇಲ್ಲಿ ಬಂದೆ. ಡಿಸೈನ್ ಎಡ್ಡೆ ಉಂಡು. ಹರೀಶನ ಕಥೆಯಂತೆ ನಿಮಗೆ ನೆನಪು ಕೊಡಬಹುದಾದ ಸಾಲುವಿನ ಕಥೆ ನನ್ನ ಬ್ಲಾಗ್ ನಲ್ಲಿದೆ. ನಿಮಗೆ ಹತ್ತಿರ ಎಣಿಸಬಹುದು. ಕಾರಣ ನಿಮ್ಮೂರಿನ ಕಥೆಯೇ. ಬೇಗ ಅಪ್ ಡೇಟ್ ಮಾಡ್ತಿರಿ. ತುಂಬಾ ದಿನ ಆಯ್ತು. ತಲೆಂಗಳದ ಸುದ್ದಿ ಕೇಳಿ.
ಒಲವಿನಿಂದ
ಬಾನಾಡಿ

ಮಹೇಶ್ ಪುಚ್ಚಪ್ಪಾಡಿ said...

ಏನ್ ಸಾರ್ ,ಇತ್ತೀಚೆಗಿನ ಚಿತ್ರಗೀತೆಗಳು ಅದರಲ್ಲೂ ಕಾಯ್ಕಿಣಿಯವರು ಬರೆದಿದ್ದಾರಲ್ಲಾ ಆ ಹಾಡುಗಳಲ್ಲಿ ಎಂತಹಾ ಸಾಹಿತ್ಯವಿದೆ.ಅಂತಹ ಹಾಡುಗಳು ಬರಬೇಕು ಅಂತ ನಾನು ಯೋಚಿಸ್ತಾ ಇರುವಾಗಲೆ ಮೊನ್ನೆ ನಾನೊಂದು ಹಾಡು ಕೇಳಿದೆ ನೀ ನಿಲ್ಲದೆ.. ಎನ್ನುವ ಪಲ್ಲವಿಯಿಂದ ಶುರುವಾಗುತ್ತದೆ...ಎಂತಹ ಹಾಡುರೀ ಅದು...ಇನ್ನೊಮ್ಮೆ ಕೇಳೋಣ ಅಂತ ಅನ್ನಿಸುತ್ತೆ ಸಾಹಿತ್ಯ ಅಷ್ಟು ಚೆನ್ನಾಗಿದೆ...


ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ ..ಸೋ ಎಂದು ಶೃತಿ ಹಿಡಿದು ಸುರಿಯುತ್ತಿತ್ತು ಅದಕೆ ಹಿಮ್ಮೇಳವನು ಸೋಸಿ ಬಹ ಸುಳಿ ಗಾಳಿ ತೆಂಗುಗರಿಗಳ ನಡುವೆ ನುಸುಳುತ್ತಿತ್ತು....

ಈ ಹಾಡಿನ ಸಾಹಿತ್ಯ ಹೇಗಿದೆ...

Chevar said...

Why no updates? once in a month or two post this.

ಚಿತ್ರಾ ಸಂತೋಷ್ said...

ಸಾರ್..ಖಾಲಿ ಹಾಳೆ ಮೇಲೆ ಯಾಕೆ ನೆನಪುಗಳು ಬಿಚ್ಚಿಲ್ಲ...ನಾವು ಬರೋದು-ಹೋಗೋದೇ ಆಗುತ್ತೆ..ಅಟ್ ಲೇಸ್ಟ್ ಬಂದವರಿಗೆ ಟೀ ಆದ್ರೂ ಕೊಟ್ಟು ಕಳಿಸಿ ಸರ್...
-ಚಿತ್ರಾ