96

ಹತ್ತನೇ ಕ್ಲಾಸಲ್ಲಿ ಇಷ್ಟ ಪಟ್ಟ ಹುಡುಗಿಗೆಂದು ಬರೆದ ಕವನವನ್ನು 22 ವರ್ಷಗಳ ನಂತರ ಅವಳೆದುರು ಓದಿ ಹೇಳುತ್ತಾನೆ...!
ಆಕೆ ಒಬ್ಬ ಮಗಳಿರುವ ಗೃಹಿಣಿ, ಅವನಿನ್ನೂ ಬ್ರಹ್ಮಚಾರಿ...

ಪರಿಸ್ಥಿತಿಯ ಕೈಗೊಂಬೆಗಳಾಗಿ ಬೇರೆ ಬೇರೆಯಾದ 1996ನೇ ಬ್ಯಾಚಿನ ಹಳೆ ವಿದ್ಯಾರ್ಥಿಗಳ ಸಮ್ಮಿಲನ ಹದಿಹರೆಯದ ಆ ಪ್ರೇಮಿಗಳನ್ನು ಮತ್ತೊಮ್ಮೆ ಸಂಧಿಸುವಂತೆ ಮಾಡುತ್ತದೆ...

ಮೆಚ್ಯೂರ್ಡ್ ಆಗಿರುವ ಪ್ರಾಕ್ಟಿಕಲ್ ಹುಡುಗಿ... ಅದೇ ಹಳೆ ನಾಚಿಕೆಯ ಹುಡುಗ...ಆಪ್ತವೆನಿಸುವ ಶಾಲೆ...ಸಾಂಕೇತಿಕವಾಗಿ ಕಾಡುವ ಹಳೆ ಪೆಟ್ಟಿಗೆ...ಮುದಕೊಡುವ ಹಾಡುಗಳು, ಎಲ್ಲಿಯೂ ಉತ್ಪ್ರೇಕ್ಷೆ ಎನಿಸದ ನಿರೂಪಣೆ...
ಆಸೆಗಳನ್ನು ಮೀರಿ ನಿಲ್ಲುವ ಪ್ರೀತಿ, ಕಾಳಜಿ, ವಾಸ್ತವದ ಪ್ರಜ್ನೆ ಈ ಸಿನಿಮಾವನ್ನು ಭಿನ್ನವಾಗಿಸುತ್ತದೆ.

ತಮಿಳಿನ "96" ಸಿನಿಮಾ ಸಿಕ್ಕರೆ ನೋಡಿ‌.....(ನನಗೆ ಜಾಸ್ತಿ ವಿಮರ್ಶೆ ಮಾಡಲು ಬರುವುದಿಲ್ಲ)

ಇದು ಹತ್ತರಲ್ಲಿ ಹನ್ನೊಂದಾಗುವ ಸಿನಿಮಾವಲ್ಲ.

No comments: