ಅಮ್ಮೆಂಬಳ ಕುರ್ನಾಡು ಶ್ರೀ ಸೋಮನಾಥೇಶ್ವರ ದೇವಸ್ಥಾನದ ಅಷ್ಟಬಂಧ ಸಹಸ್ರಕುಂಭಾಭಿಷೇಕ (27.03.2019ರಿಂದ 01.04.2019) ಮುಖ್ಯಾಂಶಗಳು.

ಬ್ರಹ್ಮಕಲಶೋತ್ಸವದ ಆಹ್ವಾನ ಪತ್ರಿಕೆ


















































---------------------------
 01.04.2019 ಸೋಮವಾರ, ಬ್ರಹ್ಮಕಲಶಾಭಿಷೇಕದ ಇಡೀ ದಿನದ ಚಿತ್ರಗಳು.
ಫೋಟೋ-ಪ್ರವೀಣ್ ಕುರ್ನಾಡು.


























































































































































01.04.2019 ಸೋಮವಾರ ಬೆಳಗ್ಗಿನ ಚಿತ್ರಗಳು...










































31.03.2019 ಭಾನುವಾರದ 
ಕಾರ್ಯಕ್ರಮದ ಚಿತ್ರಗಳು.





























































































30.03.2019 ಶನಿವಾರದ ಚಿತ್ರಗಳು


























































































































































































 28.03.2019ರ ಚಿತ್ರಗಳು
Pics: KM

















































28.03.2019ರ ಗುರುವಾರ ಸಂಜೆಯ ದೃಶ್ಯಗಳು. ಪ್ರವೀಣ್ ಕುರ್ನಾಡು ಫೋಟೋಗ್ರಫಿ


















































ಹೊರೆಕಾಣಿಕೆ ಮೆರವಣಿಗೆ ಚಿತ್ರಗಳು
ಫೋಟೋಗಳು: KMT


















































































































































 ಹೊರೆಕಾಣಿಕೆ ಮೆರವಣಿಗೆ, 27.03.2019ರ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳ ಚಿತ್ರಗಳು....
 Praveen Kurnadu Photography






























































































































































ಹರಿದು ಬಂದ ಹೊರೆಕಾಣಿಕೆ, ಸ್ವಯಂಸೇವಕರ ತಂಡದಿಂದ ನಿರಂತರ ಸೇವೆ


--------


ಕುರ್ನಾಡು: ಬಂಟ್ವಾಳ ತಾಲೂಕು ಅಮ್ಮೆಂಬಳ ಕುರ್ನಾಡು ಶ್ರೀ ಸೋಮನಾಥೇಶ್ವರ ದೇವಸ್ಥಾನದ ಅಷ್ಟಬಂಧ ಸಹಸ್ರಕಲಶಾಭಿಷೇಕದ ಯಶಸ್ಸಿಗೆ ಸ್ವಯಂಸೇವಕರ ತಂಡವೇ ಟೊಂಕ ಕಟ್ಟಿದ್ದು, ಉತ್ಸವದ ಆರೂ ದಿನವೂ ನಿರಂತರ ಅನ್ನದಾನ ಹಾಗೂ ಸಮಯಪಾಲನೆಗೆ ಮಹತ್ವ ನೀಡಲಾಗಿದೆ. ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕ್ಲಪ್ತ ಸಮಯಕ್ಕೆ ಆರಂಭಿಸುವ ಮೂಲಕ ಶಿಸ್ತಿನಿಂದ ಉತ್ಸವ ಗಮನ ಸೆಳೆದಿದೆ.

ನಿರಂತರ ಅನ್ನದಾನ

ಮಾ.27ರಿಂದ ಮೊದಲ್ಗೊಂಡು ದಿನದ ನಾಲ್ಕೂ ಹೊತ್ತು ದೇವಸ್ಥಾನದ ರಥಗದ್ದೆಯಲ್ಲಿ ಹಾಕಲಾಗಿರುವ ಸುಮಾರು 7500 ಚದರ ಅಡಿಯ ಭೋಜನಶಾಲೆಯಲ್ಲಿ ಅನ್ನದಾನ ಹಾಗೂ ತಿಂಡಿತೀರ್ಥ ವಿತರಣೆ ನಡೆದಿದೆ. ವಾರದ ರಜಾ ದಿನವಾದ ಭಾನುವಾರ ಹಾಗೂ ಪ್ರಧಾನ ಬ್ರಹ್ಮಕಲಶೋತ್ಸವ ನಡೆಯುವ ಸೋಮವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರನ್ನು ನಿರೀಕ್ಷಿಸಲಾಗಿದೆ. ಶನಿವಾರದ ತನಕ ಸುಮಾರು 10 ಸಾವಿರಕ್ಕೂ ಅಧಿಕ ಮಂದಿ ಅನ್ನಪ್ರಸಾದ ಸ್ವೀಕರಿಸಿದ್ದಾರೆ.
ಪ್ರಧಾನ ಬ್ರಹ್ಮಕಲಶೋತ್ಸವದ ದಿನವಾದ ಸೋಮವಾರ ಏ.1ರಂದು ಸುಮಾರು 20 ಸಾವಿರ ಮಂದಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ ಎಂದು ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ಎಚ್.ಬಾಲಕೃಷ್ಣ ನಾಯ್ಕ್ ತಿಳಿಸಿದ್ದಾರೆ.

ಬೆಳಗ್ಗೆ ಹಾಗೂ ಸಂಜೆ ತಿಂಡಿ ಚಹಾ ಕಾಫಿ ಯಥೇಚ್ಛವಾಗಿ ವಿತರಣೆಯಾಗುತ್ತಿದೆ. ಸುಮಾರು 100 ಮಂದಿ ಸ್ವಯಂಸೇವಕರು ತರಕಾರಿ ಹೆಚ್ಚುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಪ್ರತಿ ದಿನ ಸುಮಾರು 150 ಮಂದಿ ಸ್ವಯಂಸೇವಕರು ಸ್ವಚ್ಛತೆ ಕಾರ್ಯದಲ್ಲಿ ತೊಡಗಿದ್ದಾರೆ. ಪರಿಸರ ಸ್ನೇಹಿಯಾಗಿರುವ ಉದ್ದೇಶದಿಂದ ಬಾಳೆ ಎಲೆಗಿಂತಲೂ ಸ್ಟೀಲ್ ಬಟ್ಟಲುಗಳಿಗೇ ಪ್ರಾಶಸ್ತ್ಯ ನೀಡಲಾಗಿದ್ದು, ತ್ಯಾಜ್ಯ ಉತ್ಪತ್ತಿ ಪ್ರಮಾಣ ತಗ್ಗಿಸಲಾಗಿದೆ ಎಂದು ಸಮಿತಿ ಕಾರ್ಯಾಧ್ಯಕ್ಷ ರಾಜೇಶ್ ಶೆಟ್ಟಿ ಫಜೀರ್ ಗುತ್ತು ತಿಳಿಸಿದ್ದಾರೆ.

ಪತಂಜಲಿ ಯೋಗ ಶಿಕ್ಷಣ ಸಮಿತಿ ಸಹಿತ ವಿವಿಧ ಸಂಘಟನೆಗಳವರು ಸ್ವಯಂಪ್ರೇರಿತವಾಗಿ ಸ್ವಚ್ಛತಾ ಸೇವೆ ನೀಡುತ್ತಿದ್ದಾರೆ. ಅಸೈಗೋಳಿ ಉದಯ ಭಟ್ ನೇತೃತ್ವದ 25 ಮಂದಿಯ ಬಾಣಸಿಗರ ತಂಡ ಅಡುಗೆ ವ್ಯವಸ್ಥೆ ನೋಡಿಕೊಳ್ಳುತ್ತಿದ್ದು, ಕೈ
ಕಾಳುಲಾಡು, ಕಡಿ, ಜಿಲೇಬಿ, ರವಾಲಾಡು, ಕೇಸರಿಬಾತು ಮತ್ತಿತರ ಸಿಹಿತಿಂಡಿಗಳು, ಪ್ರತಿದಿನ ಇಡ್ಲಿ ಸಾಂಬಾರು, ಚಹಾ, ಕಾಫಿ ಶರಬತ್ತು, ಗೋಳಿಬಜೆ, ಕ್ಷೀರ, ಅವಲಕ್ಕಿ, ಸಜ್ಜಿಗೆಗಳಂತಹ ತಿಂಡಿಗಳ ವ್ಯವಸ್ಥೆ ಇರುತ್ತದೆ.

ಭಾರಿ ಹೊರೆ ಕಾಣಿಕೆ ಸಂಗ್ರಹ

ಸುಮಾರು 2500 ಚದರ ಅಡಿಯಲ್ಲಿ ಭಕ್ತರು ನೀಡಿದ ಭಾರಿ ಪ್ರಮಾಣದ ಹೊರೆ ಕಾಣಿಕೆ ಸಂಗ್ರಹವಾಗಿದೆ. 1500ರಷ್ಟು ತೆಂಗಿನ ಕಾಯಿ, 5000ದಷ್ಟು ಎಳನೀರು, 750ಕ್ಕೂ ಮಿಕ್ಕಿ ಬಾಳೆಗೊನೆ, ಒಂದೂವರೆ ಟನ್ ಅಕ್ಕಿ, 25 ಕ್ವಿಂಟಲ್ ಸೌತೆಕಾಯಿ, 10 ಕ್ವಿಂಟಲ್ ಬೆಲ್ಲ, 5 ಕ್ವಿಂಟಲ್ ಸಕ್ಕರೆ, 10 ಕ್ವಿಂಟಲ್ ಬೆಳ್ತಿಗೆ ಅಕ್ಕಿ, 25 ಮುಡಿ ಅಕ್ಕಿ, 5 ಕ್ವಿಂಟಲ್ ಹಲಸಿನ ಕಾಯಿ, 10 ಕ್ವಿಂಟಲ್ ಗಳಷ್ಟು ಚೀನಿಕಾಯಿ, ಕುಂಬಳ ಕಾಯಿ ಮತ್ತಿತರ ತರಕಾರಿಗಳು, 20 ಸಾವಿರದಷ್ಟು ಬಾಳೆೆಎಲೆ, 2 ಲಕ್ಷ ರು.ಮೌಲ್ಯದ ಪಾತ್ರೆ ಸಾಮಾಗ್ರಿಗಳು ಸಹಿತ ಸಾಕಷ್ಟು ಜಿನಸಿ, ತರಕಾರಿಗಳ ಕೊಡುಗೆ ಹರಿದು ಬಂದಿವೆ ಎಂದು ಅನ್ನಸಂತರ್ಪಣೆ ಸಮಿತಿ ಪ್ರಧಾನ ಸಂಚಾಲಕ ಶರತ್ ಕಾಜವ ಮಿತ್ತಕೋಡಿ ಮಾಹಿತಿ ನೀಡಿದ್ದಾರೆ.
ಸತೀಶ್ ನಾಯ್ಕ್, ಸುಂದರ ಶೆಟ್ಟಿ ಭೋಜನ, ಊಟೋಪಚಾರದ ಸಮಗ್ರ ಜವಾಬ್ದಾರಿಗೆ ಹೆಗಲು ಕೊಟ್ಟಿದ್ದಾರೆ. ಸ್ವಚ್ಛತೆಗೆ ಸಾಕಷ್ಟು ಮಹತ್ವ ನೀಡಲಾಗಿದೆ. ಭೋಜನ ವ್ಯವಸ್ಥೆಗೆಂದೇ ಸುಮಾರು 7500 ಚದರ ಅಡಿಗೂ ಮಿಕ್ಕಿದ ವಿಶಾಲ ಚಪ್ಪರ ರಚಿಸಲಾಗಿದೆ. ಸುಮಾರು 25 ಸಾವಿರ ಲೀಟರ್ ಸಾಮರ್ಥ್ಯದ ನೀರು ಪೂರೈಕೆ ಟ್ಯಾಂಕ್, ಸ್ವಚ್ಛತೆ ವ್ಯವಸ್ಥೆ, ಸಾಕಷ್ಟು ಶೌಚಾಲಯಗಳನ್ನು ರಚಿಸಲಾಗಿದೆ.

ಸುಮಾರು 1050 ಚದರಡಿ ವ್ಯಾಪ್ತಿಯ ವಿಶಾಲವಾದ ಕುರ್ನಾಡು ಗುತ್ತು ಎಚ್.ರಾಮಯ್ಯ ನಾಯ್ಕ್ ವೇದಿಕೆ, ಅದರೆದುರು ಸುಮಾರು 8000 ಚದರ ಅಡಿಯ ವಿಶಾಲ ಸಭಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಸ್ವಯಂಸೇವಕರ ಸಹಾಕರವೇ ಉತ್ಸವದ ಯಶಸ್ಸಿಗೆ ಕಾರಣ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶಿವಶಂಕರ ಭಟ್ ಕಾಡಿಮಾರು ತಿಳಿಸಿದ್ದಾರೆ. ರಥ ಗದ್ದೆಯಲ್ಲಿ ಸುಮಾರು 36000 ಚದರ ಅಡಿಯ ಚಪ್ಪರವನ್ನು ಬೋಳಿಯಾರಿನ ಶ್ರೀ ದೇವಿಪ್ರಸಾದ್ ಶಾಮಿಯಾನದವರು ಕಟ್ಟಿದ್ದಾರೆ.

ದೇವಸ್ಥಾನ ಸಮೀಪದ 12 ಮುಡಿ ಗದ್ದೆ ಮೈದಾನದ ಸುಮಾರು ನಾಲ್ಕು ಎಕರೆ ಸೇರಿದಂತೆ ಐದೂವರೆ ಎಕರೆ ಜಾಗದಲ್ಲಿ ಸುವ್ಯವಸ್ಥಿತಿ ಪಾರ್ಕಿಂಗ್ ವ್ಯವಸ್ಥೆ ರೂಪಿಸಲಾಗಿದೆ ಎಂದು ಪಾರ್ಕಿಂಗ್ ವ್ಯವಸ್ಥೆಯ ಉಸ್ತುವಾರಿ ಗೋಪಾಲ ಮಿತ್ತಕೋಡಿ ತಿಳಿಸಿದ್ದಾರೆ.
ಉತ್ಸವಗಳ ನಿರಂತರ ನೇರಪ್ರಸಾರವನ್ನು ಫಾರ್ಚೂನ್ ಟಿವಿ ಮೂಲಕ ಯೂಟ್ಯೂಬ್ ನಲ್ಲಿ ಸುಮಾರು 12 ಸಾವಿರ ಮಂದಿ ವೀಕ್ಷಿಸಿದ್ದಾರೆ ಎಂದು ಉಸ್ತುವಾರಿ ಅಭಿ ಕೊಣಾಜೆ ಮಾಹಿತಿ ನೀಡಿದ್ದಾರೆ.




ಪೋಟೋಗಳು: ಪ್ರವೀಣ್ ಕುರ್ನಾಡು

1 comment:

Unknown said...

Very Nice Photos and Good Coverage...