ಗೊಂಬೆಯ ಬೆಲೆ

 ಒಂದು ಊರಿನಲ್ಲಿ ಒಬ್ಬಳು ಹುಡುಗಿ ಇದ್ದಳು.

ಅವಳ ಹೆಸರು ಸೌಮ್ಯಾ. ಅವಳು 2ನೇ ತರಗತಿಯಲ್ಲಿ ಓದುತ್ತಿದ್ದಳು. ಸೌಮ್ಯಾಳ ಅಪ್ಪ ಹಾಗೂ ಅಮ್ಮ ತುಂಬ ಶ್ರೀಮಂತರಾಗಿದ್ದರು. ಅವಳಿಗೆ ಗೊಂಬೆಗಳೆಂದರೆ ಬಹಳ ಇಷ್ಟ. ಅವಳು ಮನೆಯಲ್ಲಿ ತುಂಬ ಬಣ್ಣದ, ತುಂಬ ರೀತಿಯ ಬಹಳ ಗೊಂಬೆಗಳಿದ್ದವು.


ಅವಳಿಗೆ ಒಂದು ಕೆಟ್ಟ ಹವ್ಯಾಸವಿತ್ತು. ಅವಳ ಹತ್ತಿರ ಎಷ್ಟೇ ಗೊಂಬೆಗಳಿದ್ದರೂ ಅವರ ಸಂಬಂಧಿಕರ ಮನೆಯಲ್ಲಿದ್ದ ಗೊಂಬೆಗಳನ್ನು ತನ್ನದೆಂದು ಮನೆಗೆ ತರುತ್ತಿದ್ದಳು. ಅಪ್ಪ, ಅಮ್ಮ ಎಷ್ಟು ಸಲ ಹೇಳಿದರೂ, ಎಷ್ಟು ಗೊಂಬೆಗಳನ್ನು ತಂದರೂ ಅವಳು ಆ ಹವ್ಯಾಸವನ್ನು ಬಿಡುತ್ತಿರಲಿಲ್ಲ.


ಒಂದು ದಿವಸ ಸೌಮ್ಯಾಳ ತಂದೆಯ ಗೆಳೆಯನ ಮಗನ ನಾಲ್ಕನೇ ವರ್ಷದ ಹುಟ್ಟು ಹಬ್ಬದ ದಿವಸ ಸೌಮ್ಯಾಳ ಮನೆಯವರನ್ನು ಆಹ್ವಾನಿಸಲಾಗಿತ್ತು. ಅದಕ್ಕೆ ಅವಳು ಬಂದಿದ್ದಾಗ, ಅಲ್ಲಿದ್ದ ಒಂದು ಗೊಂಬೆಯನ್ನು ತನ್ನದೆಂದು ಹೇಳಿ ತೆಗೆದುಕೊಂಡು ಹೋಗಿ ವಾಹನದ ಒಳಗೆ ಕುಳಿತುಕೊಂಡಳು. ಅವನ ತಂದೆ ಸೌಮ್ಯಾನ ತಂದೆಗೆ "ನೀವು ಎಷ್ಟು ಶ್ರೀಮಂತರು. ನಿಮ್ಮ ಮಗಳಿಗೆ ಒಂದು ಗೊಂಬೆ ಕೊಡಿಸಲಾಗುವುದಿಲ್ಲವೇ. ನಿಮಗೆ ನಾಚಿಕೆ ಆಗುವುದಿಲ್ಲವೇ?" ಎಂದರು. ಆಗ ಸೌಮ್ಯಾನ ತಂದೆಗೆ ತುಂಬ ಬೇಸರವಾಯಿತು.


ಅವಳಿಗೆ ಬುದ್ಧಿ ಕಲಿಸಲೇಬೇಕು ಎಂದುಕೊಂಡರು. ಅವಳ ಎಲ್ಲಾ ಗೊಂಬೆಗಳನ್ನು ಅಡಗಿಸಿಟ್ಟರು. ಆ ಸಮಯದಲ್ಲಿ ಆಕೆ ಶಾಲೆಗೆ ಹೋಗಿದ್ದಳು. ಆಕೆ ಬಂದ ಕೂಡಲೇ ಗೊಂಬೆಗಳೊಡನೆ ಆಟವಾಡಿಯೇ ತಿಂಡಿ ತಿನ್ನುತ್ತಿದ್ದಳು. ಗೊಂಬೆ ಇಲ್ಲದೆ ಆದಾಗ ಆಕೆಗೆ ತುಂಬ ಬೇಸರವಾಯಿತು.


ಅವಳು ತಂದೆಯನ್ನು ಕೇಳಿದಳು. ಆಗ ತಂದೆ, "ನೀನು ಬೇರೆಯವರ ಗೊಂಬೆಯನ್ನು ಹಿಂದಿರುಗಿಸದಿದ್ದರೆ ನಿನ್ನ ಬೊಂಬೆಗಳನ್ನು ನೀರಿಗೆ ಹಾಕುತ್ತೇನೆ" ಎಂದರು. ಆಕೆಗೆ ಬೇರೆ ದಾರಿ ಇರಲಿಲ್ಲ. ಅವರು ಹೇಳಿದ ಹಾಗೇ ಮಾಡಿದಳು. ಮತ್ತೆಂದೂ ಹಾಗೆ ಮಾಡುವುದಿಲ್ಲ ಎಂದು ಮಾತು ಕೊಟ್ಟಳು.

(ಮುಗಿಯಿತು)

ನೀತಿ: ಒಂದು ವಸ್ತುವಿನ ಬೆಲೆ ಕಳೆದುಕೊಂಡಾಗಲೇ ತಿಳಿಯುವುದು.

 

-ಅನನ್ಯಾ ಟಿ. 






1 comment:

Varijakshi.yash. dammadka. said...

ಕತೆ ಮತ್ತು ನೀತಿ ಚೆನ್ನಾಗಿದೆ.ಇನ್ನಷ್ಟು ಬರೆ
ಯಿರಿ.