ನಿಜವಾದ ಗೆಳತಿ... (ಸಣ್ಣ ಕತೆ)

ಒಂದಾನೊಂದು ಕಾಲದಲ್ಲಿ ಇಬ್ಬರು ಆಪ್ತ ಗೆಳತಿಯರು ಇದ್ದರು. ಒಬ್ಬಳ ಹೆಸರು ಸೋನು, ಮತ್ತೊಬ್ಬಳ ಹೆಸರು ಚಿನ್ನು. ಚಿನ್ನು ಶ್ರೀಮಂತ ಹುಡುಯಾಗಿದ್ದಳು. ಆದರೆ ಸೋನು ಶ್ರೀಮಂತಳಾಗಿರಲಿಲ್ಲ.

ಅವರಿಬ್ಬರೂ ಕಲಿಯುವುದರಲ್ಲಿ ತುಂಬಾ ಮುಂದಿದ್ದರು. ಅವರು ಶಾಲೆಗೆ ಹೋಗುವುದು, ಬರುವುದು, ಓದುವುದು, ಆಡುವುದು ಎಲ್ಲ ಒಟ್ಟಿಗೆ ಮಾಡುತ್ತಿದ್ದರು. ಅವರಿಬ್ಬರು ಆಪ್ತ ಗೆಳತಿಯರಾಗಿದ್ದರು.

 

ಚಿನ್ನು ಕಲಿಯುವುದಕ್ಕೋಸ್ಕರ ಪಟ್ಟಣಕ್ಕೆ ಹೋದಳು. ಆದರೆ, ಸೋನು ಹೋಗಲಿಲ್ಲ. ಚಿನ್ನುವಿಗೆ ಪಟ್ಟಣದಲ್ಲಿ ಹೊಸ ಗೆಳತಿ ತನ್ವಿ ಎಂಬವಳು ಭೇಟಿಯಾದಳು. ಆಕೆ ಚಿನ್ನುವಿನ ಶ್ರೀಮಂತಿಕೆ ನೋಡಿ ಗೆಳೆತನ ಮಾಡಿದ್ದಳು. ಕೆಲವೇ ದಿವಸದಲ್ಲಿ ಚಿನ್ನುವಿನ 18 ವಯಸ್ಸಿನ ಹುಟ್ಟುಹಬ್ಬ ಇತ್ತು. ಅದಕ್ಕೆ ಎಲ್ಲರನ್ನೂ ಆಹ್ವಾನಿಸಿದ್ದಳು.

 

ಆ ಸಮಾರಂಭಕ್ಕೆ ಸೋನು ಬರುವುದಾಗಿ ಯೋಚಿಸಿದ್ದಳು. ಚಿನ್ನುವಿಗೆ ಮಣ್ಣಿನ ಗೊಂಬೆ ಎಂದರೆ ಬಹಳ ಇಷ್ಟ. ಅವಳು ಅದನ್ನೇ ಕೊಡುವುದಾಗಿ ಯೋಚಿಸಿದಳು. ಹುಟ್ಟುಹಬ್ಬದ ದಿವಸ ತನ್ವಿ ಅವಳಿಗೆ ಹೂದಾನಿ ಕೊಟ್ಟಳು. ಸೋನು ಮಣ್ಣಿನ ಗೊಂಬೆ ಕೊಟ್ಟಳು. ಅವಳಿಗೆ ತುಂಬಾ ಇಷ್ಟವಾಯಿತು.

 

ಇದನ್ನು ಕಂಡು ತನ್ವಿಗೆ ತುಂಬ ಕೋಪ ಬಂತು. ಅವಳು ಕೇಳಿದಳು. ನಿನಗೆ ಈ ಬೆಲೆಬಾಳುವ ಹೂದಾನಿ ಇಷ್ಟವಾಗಲಿಲ್ಲ. ಆದರೆ ಈ ಮಣ್ಣಿನ ಬೊಂಬೆ ಇಷ್ಟವಾಯಿತೇ?” ಎಂದು. ಆಗ ಚಿನ್ನು, ಇದು ಮಣ್ಣಿನ ಗೊಂಬೆಯಾದರೇನಾಯಿತು. ಇದನ್ನು ಮಾಡಲು ಅವಳು ಎಷ್ಟು ಶ್ರಮ ಪಟ್ಟಿದ್ದಾಳೆ ಗೊತ್ತೇ? ನಾವು ಚಿಕ್ಕ ವಯಸ್ಸಿನಿಂದ ಆಪ್ತ ಗೆಳತಿಯರು. ಆಕೆ ತುಂಬ ಒಳ್ಳೆ ಮನಸ್ಸಿನವಳು. ನಾನು ಇಲ್ಲಿದ್ದ ಎರಡು ವರ್ಷ ಅವಳು ಫೋನ್ ಮಾಡದ ದಿನವೇ ಇಲ್ಲ. ಆದರೆ, ನೀನು, ನಾನು ಹೋದ ಮೇಲೆ ಬೇರೆಯವರನ್ನು ಸ್ನೇಹಿತೆಯನ್ನಾಗಿ ಮಾಡುತ್ತೀಯ. ನಿನಗೆ ಗೆಳೆತನದ ಮಹತ್ವ ಗೊತ್ತಿಲ್ಲ. ಗೆಳೆತನ ಎಂದರೆ, ಅವರು ಎಲ್ಲಿದ್ದರೂ, ಹೇಗಿದ್ದರೂ ಗೆಳೆಯರಾಗಿಯೇ ಇರಬೇಕು ಎಂದಳು.

 


ನೀತಿ: ಗೆಳೆತನವನ್ನು ಶ್ರೀಮಂತಿಕೆ, ಚಂದ ನೋಡಿ ಮಾಡಬಾರದು, ಗುಣನೋಡಿ ಮಾಡಬೇಕು.

 

-ಅನನ್ಯ ಟಿ. (14/09/2020)

 

3 comments:

Varijakshi.yash. dammadka. said...

ಚಂದದ ನೀತಿಯ ಸುಂದರ ಕತೆ.ಇನ್ನೂ ಬರೆಯಿರಿ

Smitha Ballal said...

ತುಂಬಾ ಚಂದದ ಕತೆ ಅನನ್ಯ����ಅದ್ಭುತ ಪ್ರತಿಭೆ ನಿಮ್ಮದು.ಮುಂದೆಯೂ ನಿಮ್ಮ ಬರಹಗಳು ನಮ್ಮನ್ನು ತಲುಪುತ್ತಿರಲಿ.ನಿಮ್ಮ ಭವಿಷ್ಯ ಉಜ್ವಲವಾಗಿರಲಿ ಪುಟ್ಟಾ��

Unknown said...

ವಾಸ್ತವ ಪ್ರಪಂಚ ಹೇಗಿದೆ ಅಂತ ತುಂಬಾ ಚೆನ್ನಾಗಿ ತಿಳಿದಿದ್ದೀರಿ..ಕಥೆ ಸೊಗಸಾಗಿದೆ ಅನನ್ಯ... ಬರೀತಾ ಇರಿ..