ಮಾತೆಲ್ಲ ಮುಗಿದ ಮೇಲೆ....

ಎಂತಹ ಕಟುಕನಾದರೂ ತಾನು ಹಚ್ಚಿಕೊಂಡವರಲ್ಲಿ, ಗೌರವಿಸುವವರಲ್ಲಿ ವ್ಯವಹರಿಸುವಾಗ ಮಗುವೇ ಆಗಿರುತ್ತಾನೆ. ಮಾತನಾಡುವಾಗ ತುಂಬಾ ಯೋಚಿಸುವುದಿಲ್ಲ. ಕಾಳಜಿಯನ್ನು, ಅಕ್ಕರೆಯನ್ನು, ಸಲುಗೆಯನ್ನು ಮುಚ್ಚಿಡುವುದಿಲ್ಲ. ಕಷ್ಟಗಳನ್ನು, ಸಂಧಿಗ್ತತೆಗಳನ್ನು ಹೇಳಿಕೊಳ್ಳುವಾಗ ಮುಜುಗರ ಪಡುವುದಿಲ್ಲ. ಗೊಂದಲಗಳನ್ನು ಹೇಳಿಕೊಂಡು ಹಗುರಾದ ಮೇಲೆ ಅಯ್ಯೋ ಯಾಕಾದ್ರೂ ಹೇಳಿಕೊಂಡೆನ್ನಪ್ಪಾ ಅಂತ ಹಲುಬುವುದಿಲ್ಲ.
ಕಾರಣ, ಆತ್ಮೀಯತೆಯ ಬಂಧವೆಂಬುದರಲ್ಲಿ ಅಷ್ಟೊಂದು ವಿಶ್ವಾಸ ಅರ್ಥೈಸಿಕೊಳ್ಳುವಿಕೆ ತುಂಬಿರುತ್ತದೆ. ಯಾರೂ ಅದಕ್ಕೊಂದು ಡೆಫಿನಿಶನ್ ಮತ್ತು ಸ್ಕೋಪ್ ಹುಡುಕಿ ಮಾತನಾಡುವುದಿಲ್ಲ. ಮಾತುಗಳು ತನ್ನಷ್ಟಕ್ಕೇ ಬರುತ್ತವೆ. ತುಂಬಾ ಪೂರ್ವತಯಾರಿ ಮಾಡಿ, ಅಳೆದೂ ಸುರಿದೂ ಮಾತನಾಡುವ ಅಗತ್ಯವಿರುವುದಿಲ್ಲ. ಪುಟ್ಟ ಮಗುವೊಂದು ತನ್ನ ಹೆತ್ತವರಲ್ಲಿ ಮಾತನಾಡಿದ ಹಾಗೆ.
ಆ ಮಾತಿನಲ್ಲಿ ಕೆಲವೊಮ್ಮೆ ಸಿಟ್ಟು, ಕಾಲೆಳೆಯುವಿಕೆ, ಮೂದಲಿಕೆ, ಹುಸಿಕೋಪ, ಸಲುಗೆಯ ಚುಚ್ಚುವಿಕೆ ಎಲ್ಲ ಇರುತ್ತವೆ.

ಆದರೆ ಹೇಳುವವನು ಮತ್ತು ಕೇಳಿಸಿಕೊಳ್ಳುವವನ ಮನಸ್ಥಿತಿ ಮೇಲೆ ಸಂವಹನ ಏರ್ಪಡುತ್ತದೆ ಅಲ್ಲವೇ... ಹೇಳುವವನು ಕೆಟ್ಟ ಮನಸ್ಥಿತಿಯಲ್ಲಿ ಏನನ್ನಾದರೂ ಹೇಳಿದಾಗ ಕೇಳಿಸಿಕೊಳ್ಳುವವನನ ಮನಸ್ಥಿತಿ ಆಹ್ಲಾದಕರವಾಗಿದ್ದರೆ ಅವನದನ್ನು ಖುಷಿ ಖುಷಿಯಾಗಿಯೇ ಸ್ವೀಕರಿಸುತ್ತಾನೆ. ಬೈದರೂ ಸರಿ, ಹಂಗಿಸಿದರೂ ಸರಿ. ಯಾಕಂದರೆ ಹೇಳುವವನು ಮೂಲತಹ ತನ್ನ ಬಗ್ಗೆ ಯಾವುದೇ ಪೂರ್ವಾಗ್ರಹ ಹೊಂದಿಲ್ಲ... ಅದೇನಿದ್ದನೂ ತನ್ನ ಕುರಿತಾಗಿರುವ ಸಲುಗೆಯೇ ಹಾಗೆ ಮಾತನಾಡಿಸುತ್ತದೆ ಎಂಬುದು ಆತನಿಗೂ ಗೊತ್ತಿರುತ್ತದೆ.

ಆದರೆ...

ಹೇಳುವವನ ಜೊತೆ ಕೇಳುವವನ ಮನಸ್ಥಿತಿ ಕೂಡಾ ಆ ಕ್ಷಣಕ್ಕೆ ಸರಿಯಿಲ್ಲದೆ ಕೆಟ್ಟ ಹೋಗಿದ್ದರೆ ಹೇಳಿದ್ದು ಸರಿಯಾಗಿ ತಲುಪದೆ ಇನ್ನೊಂದು ಅರ್ಥ ಹುಟ್ಟಿ ಅಪಾರ್ಥಗಳಿಗೆ ಕಾರಣವಾಗುತ್ತದೆ. ಯಾಕೆಂದರೆ ಹೇಳುವವನಿಗೆ ಇರುವಂಥಹ ಕೆಟ್ಟ ಘಳಿಗೆಗಳು ಕೇಳುವವನ ಬಾಳಿನಲ್ಲೂ ಇರಬಹುದು. ಹೇಳುವವನಷ್ಟೇ ಅಸಹನೆ ಕೇಳುವವನಿಗೂ ಇರಬಹುದು...
ಅಂತಹ ಸಂದರ್ಭಗಳಲ್ಲಿ ಮಾತುಗಳು ಆ ಕ್ಷಣದ ವ್ಯಾಲಿಡಿಟಿ ಹೊಂದಿದ್ದರೂ ಅದು ಉಂಟು ಮಾಡುವ ಪರಿಣಾಮ (ಅಪಾರ್ಥ) ಮಾತ್ರ ದೀರ್ಘಕಾಲದ ವರೆಗೆ ಒಡೆದು ಗಾಜಿನ ಹಾಗೆ ಕಾಡಬಹುದೇನೋ...


ಅದಕ್ಕೇ ಅನ್ನಿಸುವುದು... ಕೆಟ್ಟ ಮೂಡಿನಲ್ಲಿ, ಕೆಟ್ಟ ಘಳಿಗೆಗಳಲ್ಲಿ, ಕನಸುಗಳು ಸುಟ್ಟು ಹೋಗುತ್ತಿರುವ ಸಂದರ್ಭಗಳಲ್ಲಿ ಮಾತನಾಡಲೇಬೇಕೆಂಬ ಹಪಹಪಿಕೆ ಯಾಕಾದರೂ ಬೇಕು. ಮಾತು ಸೋಲುತ್ತದೆಯೆಂದು ಗೊತ್ತಾದ ಮೇಲೆ ಅದಕ್ಕೊಂದು ವಿರಾಮ ಕೊಟ್ಟು, ಅಮೂಲ್ಯವಾದ ಸಂಬಂಧಗಳನ್ನು ಉಳಿಸಿಕೊಳ್ಳಬೇಕಲ್ಲವೇ...
ಮಾತಿಗೆ ಮಾತು, ಮತ್ತೊಂದು ಅಹಂನ ಗೋಡೆ ಮತ್ತೆ ಮೌನ...
ಇದು ವ್ಯಕ್ತಿಗಳಿಗೂ, ದೇಶ ದೇಶಗಳಿಗೂ, ಪಕ್ಷ ಪಕ್ಷಗಳಿಗೂ ಕಾಡುವ ವೈರಸ್ಸು... ಮಾತು ಸೋತಾಗಲೆಲ್ಲಾ ಮೌನ ಗೆಲ್ಲುತ್ತದೆ. ಆದರೆ ಸೋಲುವುದು ಗೊತ್ತಿದ್ದೂ ಆಡುವ ಮಾತು ಹಾಗೂ ಮಾತು ಇರಿದು ಆಗುವ ಗಾಯ ಮೌನವನ್ನೂ ಮೀರಿ ಕಾಡುತ್ತದೆ...
ಸ್ವಯಂಕೃತಪರಾಧಗಳಾದರೆ ಅವರವರೇ ಹೊಣೆ...ಮತ್ತೆಷ್ಟು ರೋಧಿಸಿದರೂ ಅಷ್ಟೇ. ಏನೂ ಪ್ರಯೋಜನವಿಲ್ಲ.
ಪರಿಸ್ಥಿತಿ ಮಾತನಾಡಿಸಿದರೂ, ಮನಸ್ಥಿತಿ ಮಾತನಾಡಿಸಿದರೂ ಮಾತಿಗೊಂದು ತೂಕವಿರುತ್ತದೆ. ಮಾತು ನಿಮ್ಮ ಕೈಮೀರಿ ಹೋಗುತ್ತದೆಯಾದರೇ ಅದನ್ನು ಆಡದಿದ್ದರೂ

No comments: