ಬ್ರಹ್ಮಕಲಶಾಭಿಷೇಕ ಇಂದು....

ಇಂದು ಕುರ್ನಾಡು ಸೋಮನಾಥನಿಗೆ ಸಹಸ್ರ ಕುಂಭಾಭಿಷೇಕ
------------------------
ಕುರ್ನಾಡು:  ಬಂಟ್ವಾಳ ತಾಲೂಕು ಕುರ್ನಾಡು ಶ್ರೀ ಸೋಮನಾಥೇಶ್ವರ ದೇವಸ್ಥಾನದ ಅಷ್ಟಬಂಧ ಸಹಸ್ರಕುಂಭಾಭಿಷೇಕದ ಪ್ರಧಾನ ಕಾರ್ಯಕ್ರಮಗಳು ಇಂದು (ಏ.1, ಸೋಮವಾರ)

ವೈದಿಕ ಕಾರ್ಯಕ್ರಮಗಳು:

ಬೆಳಗ್ಗೆ 7ರಿಂದ ಗಣಪತಿ ಹೋಮ, 6.29ರಿಂದ 7.13ರ ತನಕ ಒದಗುವ ಧನಿಷ್ಠ ನಕ್ಷತ್ರ ಮೀನರಾಶಿಯಲ್ಲಿ *ಅಷ್ಟಬಂಧ ಲೇಪನ, ಪರಿಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ.*

ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಮಧ್ಯಾಹ್ನ 1ರಿಂದ ಮಹಾಅನ್ನಸಂತರ್ಪಣೆ.
ರಾತ್ರಿ 7ಕ್ಕೆ ರಾತ್ರಿಪೂಜೆ, 7.30ಕ್ಕೆ ಶ್ರೀಭೂತಬಲಿ, ನೃತ್ಯಬಲಿ, ಬಟ್ಟಲು ಕಾಣಿಕೆ, ಅನ್ನಸಂತರ್ಪಣೆ.

ಸಾಂಸ್ಕೃತಿಕ ಕಾರ್ಯಕ್ರಮ

ಬೆಳಗ್ಗೆ 11ರಿಂದ ಕೊಳಲು ಸಂಗೀತ ವಿದ್ಯಾಲಯ ಇರಾ ಮುಡಿಪು ಇಲ್ಲಿನ ವಿದ್ಯಾರ್ಥಿಗಳಿಂದ ನಾದ ತರಂಗ ಸಂಗೀತ ಕಾರ್ಯಕ್ರಮ.

ಮಧ್ಯಾಹ್ನ 2ರಿಂದ ಯಕ್ಷಗಾನ ತಾಳಮದ್ದಳೆ ಭೀಷ್ಮ ವಿಜಯ
ಭಾಗವತರು-ಸತೀಶ್ ಶೆಟ್ಟಿ ಪಟ್ಲ, ಗಿರೀಶ್ ರೈ ಕಕ್ಕೆಪದವು, ಡಾ.ಪ್ರಖ್ಯಾತ್ ಶೆಟ್ಟಿ ಅಳಿಕೆ, ಚೆಂಡೆ ಮದ್ದಳೆ-ಪ್ರಕಾಶ್ ವಿಟ್ಲ, ಪ್ರಶಾಂತ್ ವಗೆನಾಡು, ಅರ್ಥಧಾರಿಗಳು-ಉಜಿರೆ ಅಶೋಕ ಭಟ್, ಜಬ್ಬಾರ್ ಸಮೋ ಸಂಪಾಜೆ, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ನವನೀತ ಶೆಟ್ಟಿ ಕದ್ರಿ, ಸೀತಾರಾಮ ಕುಮಾರ್, ಡಿ.ಮಾಧವ ಬಂಗೇರ ಕೊಳತ್ತಮಜಲು. ಸಂಯೋಜನೆ-ಡಿ.ಮಾಧವ ಬಂಗೇರ.

ರಾತ್ರಿ 10.30ರಿಂದ ಕಾಪು ರಂಗತರಂಗ ಕಲಾವಿದರಿಂದ ಶರತ್ ಉಚ್ಚಿಲ ನಿರ್ದೇಶನದಲ್ಲಿ ಶ್ಯಾಮ್ ಕುಮಾರ್ ಚಿತ್ರಾಪು ವಿರಚಿತ *ತುಳು ಸಾಂಸಾರಿಕ ಹಾಸ್ಯ ನಾಟಕ ಪೊಪ್ಪ.*

ಸಭಾ ಕಾರ್ಯಕ್ರಮ

ಸಂಜೆ 5.00ರಿಂದ ಅಧ್ಯಕ್ಷತೆ ಮುಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಉದ್ಘಾಟಕರು ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ದೇವಿಪ್ರಸಾದ್ ಶೆಟ್ಟಿ ಕಲ್ಲಾಡಿ, ಧಾರ್ಮಿಕ ಉಪನ್ಯಾಸ ಟೈಂಮ್ಸ್ ಆಫ್ ಇಂಡಿಯಾ ಮಂಗಳೂರು ಪ್ರಸರಣಾಧಿಕಾರಿ ಕದ್ರಿ ನವನೀತ ಶೆಟ್ಟಿ, ಗೌರವ ಉಪಸ್ಥಿತಿ ಡಾ.ಎಚ್.ಬಾಲಕೃಷ್ಣ ನಾಯ್ಕ್, ವೆಂಕಪ್ಪ ಕಾಜವ ಮಿತ್ತಕೋಡಿ, ಅತಿಥಿಗಳು-ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಸಂಸದ ನಳಿನ್ ಕುಮಾರ್ ಕಟೀಲು, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರು ಶ್ರೀದೇವಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಎ.ಸದಾನಂದ ಶೆಟ್ಟಿ, ಶಾಸಕ ರಾಜೇಶ್ ನಾಯ್ಕ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಉದ್ಯಮಿ ಕೆ.ಡಿ.ಶೆಟ್ಟಿ, ಮಂಗಳೂರು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಡಾ.ಸದಾನಂದ ಪೆರ್ಲ, ಗಂಜಿಮಟ ರಾಜ್ ಅಕಾಡೆಮಿಯ ಯತಿರಾಜ್ ಶೆಟ್ಟಿ, ಸೋಮೇಶ್ವರ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಜೀರ್ಣೋರ್ಧಾರ ಸಮಿತಿ ಅಧ್ಯಕ್ಷ ರವೀಂದ್ರನಾಥ ರೈ, ಉದ್ಯಮಿ ರಂಗನಾಥ ಪೂಂಜ, ಅಜೆಕಳಗುತ್ತು, ಫಜೀರು, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಜಯಾನಂದ ಪಿ., ನಿರೂಪಕರು ಸುಕೇಶ್ ಚೌಟ ಉಳ್ಳಾಲಗುತ್ತು.

No comments: