ಸಾವಿರ ಕಾಲಕು ಮರೆಯದ ನೆನಪು.....

(ಯುಸಿಎಂ ಬಿಕಾಂ 1997-2000 ಬ್ಯಾಚಿನ ಗೆಟ್ ಟುಗೆದರ್ ವರದಿ, ದಿನಾಂಕ 15.12.2019)

----

ಇಂದು ಕಾಲೇಜಿಗೆ ನಾವು ಮತ್ತೆ ಹೋದಾಗ ಈ ಹಿಂದಿನ ಭೇಟಿಯ ಥರ ಆಗಿರಲಿಲ್ಲ.
19 ವರ್ಷಗಳ ಬಳಿಕ ಜೊತೆಗೆ ಕಲಿತವರು ಮತ್ತೆ ನೋಡಲು ಸಿಕ್ಕುತ್ತಾರೆ ಎಂಬ ಉದ್ವೇಗ. ಜೊತೆಗೆ, ಬರುತ್ತೇವೆ ಎಂದು ಹೇಳಿದವರೆಲ್ಲ ಬಂದಾರೋ.... ಇಲ್ಲವೋ ಎಂಬ ಆತಂಕ. 8.45ಕ್ಕೇ ಕಾಲೇಜು ತಲುಪಿದ್ದ ಜಗದೀಶ ಮತ್ತು ಸುಶೀಲ್ ಅಲ್ಲಿಂದಲೇ ಕರೆ ಮಾಡಿ ತಲುಪಿದ್ದನ್ನು ತಿಳಿಸಿದರು. ನಾನು ಹೋಗಿ ತಲುಪುವಷ್ಟರ ವೇಳೆಗೆ 9.05. ಅವರಾಗಲೇ ಬಿಕಾಂ ಫೈನಲ್ ಇಯರ್ ಎ ಮತ್ತು ಬಿ ಸೆಕ್ಷನ್ ಕ್ಲಾಸ್ ಬಾಗಿಲು ತೆರೆಸಿ, ಆಗಮಿಸಿದವರ ಹೆಸರು ಬರೆಯುವ ರಿಜಿಸ್ಟರ್ ಸಿದ್ಧಪಡಿಸಿ ಆಗಿತ್ತು. ಸುಕನ್ಯಾ ಮತ್ತಿತರರು ನಂತರ ಸೇರಿಕೊಂಡರು.
----
ಹೂವು, ಹಣ್ಣು, ಸನ್ಮಾನದ ವಸ್ತುಗಳು, ಬಲೂನು ಇತ್ಯಾದಿ... ಇತ್ಯಾದಿಗಳನ್ನು ತಮಗೆ ಜವಾಬ್ದಾರಿ ವಹಿಸಿದವರು ಒಬ್ಬೊಬ್ಬರಾಗಿ ತೆಗೆದುಕೊಂಡು ಬಂದರು... ನಿತಿನ್ ಕಾಳಜಿಯಲ್ಲಿ ಬೆಳಗ್ಗಿನ ತಿಂಡಿಯೂ ಬಂದು ಸೇರಿತು. ಒಬ್ಬೊಬ್ಬರಾಗಿ ಸ್ನೇಹಿತರು ಬರತೊಡಗಿದರು... ಅದಕ್ಕೂ ಮೊದಲು ಬಹುತೇಕ ಲೆಕ್ಚರರ್ಸ್ ಬಂದು 10 ಗಂಟೆಗೆ ಸರಿಯಾಗಿ ಸ್ಟಾಫ್ ರೂಂ ಬಂದು ಸೇರಿದರು... ವಿದ್ಯಾರ್ಥಿಗಳೇ ತುಸು ಲೇಟು.
ಈ ನಡುವೆ ರವೀಂದ್ರ ಕಲಾಭವನ ಪಕ್ಕದಿಂದ ಚೇರ್ ತಂದು, ಒರೆಸಿ, ತರಗತಿಗೆ ಬಲೂನ್ ಕಟ್ಟಿ, ಸಿಂಗರಿಸಿ, ಹೂವಿನ ಮಾಲೆ ಹಾಕಿ... ಎಲ್ಲವನ್ನೂ ತಯಾರು ಮಾಡಿ ಆಯಿತು...
19 ವರ್ಷಗಳಿಕ ದಢೂತಿಗಳಾಗಿಯೋ, ಚೆಹರೆ ಬದಲಾಗಿ ಬಂದವರನ್ನೋ ಕಂಡು ಒಬ್ಬೊಬ್ಬರೇ ಗುಂಪು ಗುಂಪಾಗಿ ಮಾತನಾಡುತ್ತಾ... ಹಳೆ ಸ್ನೇಹಿತರನ್ನು ಕಂಡು ಹುಡುಕಿ ಸೆಲ್ಫೀ ತೆಗೆಯುವ ಕಾರ್ಯ ಶುರುವಾಯಿತು. ಒತ್ತಾಯಪೂರ್ವಕವಾಗಿ ಮತ್ತೆ ಎಲ್ಲರನ್ನು ವರ್ತಮಾನಕ್ಕೆ ಕರೆತರುವ ಕೆಲಸವಾಯಿತು.
ಇಡ್ಲಿ, ವಡಾ, ಕಾಶಿ ಹಲ್ವ, ಚಹಾ ಸೇವನೆ ಬಳಿಕ 10.45ರ ಬಳಿಕ ಕ್ಲಾಸ್ ರೂಂ (ಇಂದಿನ ಮಟ್ಟಿಗೆ ಸಭಾಂಗಣ ಪ್ರವೇಶವಾಯಿತು.
ಅಂದಿನ ಎಚ್ ಒಡಿ ಪ್ರೊ.ಸೀತಾರಾಮ ಪೂಜಾರಿ, ಈಗಿನ ಪ್ರಾಂಶುಪಾಲ ಡಾ.ಉದಯಕುಮಾರ್ ಇರ್ವತ್ತೂರು, ಈಗಿನ ಎಚ್ ಒಡಿ ಮೀನಾ ಎಸ್.ಕಜಂಪಾಡಿ, ಉಪನ್ಯಾಸಕರಾದ ಸುನಂದಾ, ಡಾ.ಅನಸೂಯಾ ರೈ, ಡಾ.ಸುಧಾ, ಡಾ.ಯತೀಶ್ ಕುಮಾರ್, ರಾಜಲಕ್ಷ್ಮೀ ಅತಿಥಿಗಳಾಗಿದ್ದರು.
ಸುಶೀಲ್ ಕುಮಾರ್ ಅವರ ನವಿರಾದ ನಿರೂಪಣೆಯೊಂದಿಗೆ ಸಭಾ ಕಾರ್ಯಕ್ರಮ ಆರಂಭವಾಯಿತು. ಸುಕನ್ಯಾ ಪ್ರಾರ್ಥಿಸಿದರು. ಶುಭಾ ಎಲ್ಲರನ್ನೂ ಸ್ವಾಗತಿಸಿದರು.

ಬಳಿಕ ತುಸು ಭಾವುಕ ಸನ್ನಿವೇಶ...
ನಮಗೆ ಪಾಠ ಮಾಡಿದ ಶಿಕ್ಷಕರನ್ನು ಸನ್ಮಾನಿಸಿದ ಕ್ಷಣವದು...
ಸೀನಿಯಾರಿಟಿ ಪ್ರಕಾರ ಎಲ್ಲರನ್ನೂ ಆಗಮಿಸಿದ ಎಲ್ಲ ಹಳೆ ವಿದ್ಯಾರ್ಥಿಗಳನ್ನೂ ಒಳಗೊಳ್ಳುವಂತೆ ತಂಡಗಳಾಗಿ ಸನ್ಮಾನಿಸಲಾಯಿತು. ಹಾರ ಹಾಕಿ, ಶಾಲು ಹೊದೆಸಿ, ಫಲಪುಷ್ಪ ತಟ್ಟೆ ನೀಡಿ, ಮಲ್ಲಿಗೆಯ ಮಾಲೆ ಮುಡಿಸಿ, ಆಶೀರ್ವಾದ ಬೇಡಿ ಗುರುಗಳನ್ನು ಸನ್ಮಾನಿಸಲಾಯಿತು.
ಪ್ರತಿಯೊಬ್ಬ ಶಿಕ್ಷಕರೂ ಸನ್ಮಾನದ ಬಳಿಕ ಭಾವುಕರಾಗಿ ಮಾತನಾಡಿದರು. ನಿವೃತ್ತ ಎಚ್ ಒಡಿ ಸೀತಾರಾಮ ಪೂಜಾರಿ ಅವರಂತೂ ಕೋಸ್ಟಿಂಗ್ ಸಬ್ಜೆಕ್ಟಿನ ಒಂದು ಭಾಗವನ್ನು ಪಾಠವನ್ನೂ ಮಾಡಿ ಮತ್ತೆ ಎಲ್ಲರನ್ನೂ ಗತಕಾಲಕ್ಕೆ ಕರೆದೊಯ್ದರು. ಯತೀಶ್, ಉದಯ ಸರ್, ಸುಧಾ ಮೇಡಂ, ಸುನಂದಾ, ಅನಸೂಯಾ ರೈ, ರಾಜಲಕ್ಷ್ಮೀ ಮೇಡಂ ಎಲ್ಲರ ಹಿತವಚನ, ನೇರ ಹಾಗೂ ಸಂಕ್ಷಿಪ್ತ ಮಾತುಗಳು... ಒಂದು ವಿಶಿಷ್ಟ ಅನುಭೂತಿಯನ್ನು ಸೃಷ್ಟಿಸಿದ್ದು ಸುಳ್ಳಲ್ಲ....
ನಂತರ....ಅಡ್ಮಿನ್ ನೆಲೆಯಲ್ಲಿ ಕೆಎಂ ಅವರು ಘನಘೋರವಾಗಿ ಸುಮಾರು 19 ವರೆ ನಿಮಿಷಗಳ ಕಾಲ ಮಾತನಾಡಿ ಸೇರಿದವರನ್ನು ಸುಸ್ತು ಹೊಡೆಸಿದರು. ಬಳಿಕ, ಅಡ್ಮಿನ್ ಆದಿ ಗ್ರೂಪ್ ಆರಂಭಿಸಿದ್ದಕ್ಕೆ ಪ್ರಾಯಶ್ಚಿತ್ತವಾಗಿ ಕಾರ್ಯಕ್ರಮದ ಕೊನೆಗೆ ಅನಿರೀಕ್ಷಿತವಾಗಿ ಈ ವ್ಯಕ್ತಿಯನ್ನು ಗುರುಗಳ ಮುಖೇನ ಸನ್ಮಾನಿಸಲಾಯಿತು (ತಮಾಷೆಗಾಗಿ ಬರೆದ ಸಾಲು).
ಸೇರಿದ ಪ್ರತಿಯೊಬ್ಬರೂ ತಮ್ಮ ಸಂಕ್ಷಿಪ್ತ ಪರಿಚಯ ಮಾಡಿಕೊಂಡರು.
ಈ ಸಾಲಿನಲ್ಲಿ ಸಾಧನೆ ಮೂಲಕ ಪ್ರಶಸ್ತಿಗಳನ್ನು ಗಳಿಸಿದ ಪೊಲೀಸ್ ಇಲಾಖೆಯ ಸಾಧಕರಾದ ಉಮೇಶ್ ಶೆಟ್ಟಿ, ಶುಭಾ, ಅಶ್ವಿನ್ ಅವರನ್ನು ಅತಿಥಿಗಳು ಸಹಪಾಠಿಗಳ ಪರವಾಗಿ ಸನ್ಮಾನಿಸಿದರು. ತಮ್ಮ ಅನಿಸಿಕೆ ಹಂಚಿಕೊಂಡ ಉಮೇಶ್ ಹಾಗೂ ಶುಭಾ ಭಾವುಕಾರದ ಸಂದರ್ಭ ಸಹಪಾಠಿಗಳೂ ಭಾವುಕರಾಗಿ ಕಣ್ಣಂಚು ಒದ್ದೆಯಾಗಿದ್ದು ಸುಳ್ಳಲ್ಲ.... ಸಾಂಕೇತಿಕವಾಗಿ ಮೂವರು ಸಾಧಕರನ್ನಷ್ಟೇ ಸನ್ಮಾನಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರತಿಭಾಶಾಲಿಗಳನ್ನು ಸನ್ಮಾನಿಸುವ ಸಂಕಲ್ಪ ಮಾಡಲಾಯಿತು.

ನಮ್ಮ ಬ್ಯಾಚಿನ ಪರವಾಗಿ ನಮ್ಮ ಉಳಿತಾಯ ಖಾತೆಯಿಂದ ಕಾಲೇಜಿನ ಪ್ರಾಜೆಕ್ಟ್ ಒಂದರ ಬಳಕೆಗಾಗಿ ನಮ್ಮ ಬ್ಯಾಚಿನ ಇಸವಿಯನ್ನು ಪ್ರತಿನಿಧಿಸುವ 19997 ರು.ಗಳ ಚೆಕ್ ನ್ನು ದೇಣಿಗೆ ರೂಪದಲ್ಲಿ ಕಾಲೇಜಿಗೆ ಪ್ರಾಂಶುಪಾಲರ ಮುಖೇನ ಹಸ್ತಾಂತರಿಸಲಾಯಿತು. ಕೆಎಂ ವಂದಿಸಿದರು.

---

ಬಳಿಕ ಶುರುವಾಗಿದ್ದು, ಫೋಟೋ ಸೆಶನ್

ಈ ನಡುವೆ ಅಚ್ಚರಿಯೆಂಬಂತೆ ಲತೀಫ್, ಸುಖಲತಾ, ಮಧ್ಯಾಹ್ನದ ಬಳಿಕ ಥನುಶ್, ನಂದೀಶ್, ವಿಶಾಲ್ ಇವರೆಲ್ಲ ನಮ್ಮನ್ನು ಸೇರಿಕೊಂಡರು.
ಲವಲವಿಕೆಯ ಸುದರ್ಶನ್ (ಬಿ ಸೆಕ್ಷನ್) ರವೀಂದ್ರ ಕಲಾಭವನದ ಹಿಂದಿನ ಅಂಗಳದ ಸುಡುಬಿಸಿಲಿನಲ್ಲಿ ನಮ್ಮ ಚೆಂದದ ಫೋಟೋ ಸೆರೆ ಹೆಡಿದರು. ಪಾಪ, ಸುದರ್ಶನ್ ಆ ಫ್ರೇಮಿನಲ್ಲಿ ಇರಲೇ ಇಲ್ಲ. ಈ ಫೋಟಗಳನ್ನು ಗ್ರೂಪಿನಲ್ಲಿ ಹಂಚಿಕೊಳ್ಳಲಾಗಿದೆ.
ಫೋಟೋ ಸೆಶನ್ ಬಳಿಕ ಊಟ
ಶಾಖಾಹಾರ, ಮಾಂಸಾಹಾರ ಊಟವನ್ನು ಶಿಕ್ಷಕರೊಂದಿಗೆ ತರಗತಿಯಲ್ಲೇ ಕುಳಿತು ಸವಿದದ್ದಾಯಿತು.
ನಂತರ ಶಿಕ್ಷಕರಿಗೆ ವಿದಾಯ ಹೇಳಿ...ಅಪರಾಹ್ನ ಬಳಿಕದ ಮನರಂಜನಾ ಸೆಶನ್ ನಡೆಯಿತು.
ಸ್ನೇಹಿತ ಸಚಿನ್ ಅಲ್ಮೇಡಾ ನಡೆಸಿಕೊಟ್ಟ ಈ ಪುಟ್ಟು ಪುಟ್ಟ ಆಟಗಳ ಸೆಶನ್ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸಿತು. ಎಲ್ಲರೂ ಪಾಲ್ಗೊಳ್ಳುವಂತಹ ಬಾಂಬ್ ಇನ್ ದ ಸಿಟಿ, ಹೌಸಿ... ಹೌಸಿ, ಇತ್ಯಾದಿ ಆಟಗಳು, ಪಿಲಿ ನಲಿಕೆ, ಹಾಡು, ಅಂತ್ಯಾಕ್ಷರಿ... ಪಾಲ್ಗೊಂಡಿದ್ದ ಪುಟ್ಟ ಪುಟ್ಟ ಮಕ್ಕಳಿಗೆ ಪುಟ್ಟ ಪುಟ್ಟ ಆಟಗಳು... ಇಡೀ ತರಗತಿಯನ್ನು ಕಲರವದ ಗೂಡಾಗಿಸಿತು.... ಇಷ್ಟೆಲ್ಲ ಆಗುವಾಗ ಹೊತ್ತು 5 ಗಂಟೆಯನ್ನು ತಲುಪಿದ್ದು ಗೊತ್ತೇ ಆಗಲಿಲ್ಲ. ದೂರದೂರಿನವರಿಗೆ ಗೂಡು ಸೇರುವ ತವಕ... ಮನಸ್ಸಿಲ್ಲದ ಮನಸ್ಸಿನಿಂದ ವಿದಾಯ ಹೇಳುತ್ತಾ ಒಬ್ಬೊಬ್ಬರಾಗಿ ಮನೆಯತ್ತ ತೆರಳಿದೆವು.
ರೇಶ್ಮಾ ನೇತೃತ್ವದಲ್ಲಿ ಖರ್ಚು, ವೆಚ್ಚ, ದೇಣಿಗೆ ಸಂಗ್ರಹದ ಲೆಕ್ಕಾಚಾರದ ಬಳಿಕ ಸಂಘಟನಾ ಸಮಿತಿ ನಾವೂ ಮನಸ್ಸಿಲ್ಲದ ಮನಸ್ಸಿನಿಂದ ಮತ್ತೊಮ್ಮೆ ಸಿಗುವ ಮಾತುಗಳೊಂದಿಗೆ ಯಥಾಶಕ್ತಿ ಸೆಲ್ಫೀಗಳನ್ನು ಕ್ಲಿಕ್ಕಿಸಿ ಮನೆಯತ್ತ ಹೊರಡುವುದರೊಂದಿಗೆ ಸಾರ್ಥಕ ದಿನವೊಂದನ್ನು ಕಳೆದ ಸುಖವನ್ನು ಮನಸ್ಸಿನಲ್ಲೇ ಸೇವ್ ಮಾಡಿಟ್ಟುಕೊಂಡೆವು...

-----

ಸ್ನೇಹಿತರೇ....
ಕೆಲವೊಂದು ಕ್ಷಣಗಳನ್ನು ಮತ್ತೊಮ್ಮೆ ಸೃಷ್ಟಿಸಲು ಆಗುವುದಿಲ್ಲ. ಅಂತಹ ದಿನಗಳ ಪೈಕಿ ಇಂದೂ ಕೂಡಾ ಒಂದು. 19 ವರ್ಷಗಳ ಬಳಿಕದ ಮೊದಲ ಭೇಟಿ, ಮೊದಲ ತರಗತಿ, ಮತ್ತೊಮ್ಮೆ ವಿದ್ಯಾರ್ಥಿಗಳ ಥರಹ ಕ್ಲಾಸಿನಲ್ಲಿ ಕೂತದ್ದು... ದೈಹಿಕವಾಗಿ ಬದಲಾದರೂ ಮಾನಸಿಕವಾಗಿ ಅದೇ ಮನಸ್ಸಿನಿಂದ ಒಡನಾಡಿ, ಆಡಿ ಕುಣಿದ ಸಹಪಾಠಿಗಳ ಸಾಂಗತ್ಯ... ಇವೆಲ್ಲ ಮತ್ತೆ ಮತ್ತೆ ಮೆಲುಕು ಹಾಕುವಂಥಹ ಅನುಭೂತಿಯನ್ನು ಮನಸ್ಸಿನಲ್ಲಿ ಸೃಷ್ಟಿಸಿದೆ...
ಒಂದು ದಿನದ ಮಟ್ಟಿಗ ಚಾಟಿಂಗು, ಲೈಕು, ಕಮೆಂಟುಗಳ ಹಂಗು ತೊರೆದೆ ಮುಖಾಮುಖಿ ಕುಳಿತು ಹರಟುವ, ಮಾತನಾಡುವ, ಮಕ್ಕಳ ಮನಸ್ಸಿನವರಾಗುವ ಖುಷಿಯನ್ನು ಮೊಗೆದು ಬಾಚಿ, ಮಡಿಲಲ್ಲಿ ತುಂಬುವ ಅವಕಾಶ ಎಲ್ಲರಿಂದಾಗಿ ದೊರಕಿತ್ತು...

ಇಂತಹ ಕ್ಷಣಗಳು ಮರುಕಳಿಸಲಿ ಎಂಬ ಆಶಯದೊಂದಿಗೆ ದಿನಕ್ಕೊಂದು ವಿದಾಯ...
ಸುಶೀಲ, ನಿತಿನ್, ಸಚಿನ್, ದೂರದ ಗಲ್ಪಿನಲ್ಲಿರುವ ಫಾರೂಕ್, ಬಾಂಬೆಯಿಂದ ನಿತ್ಯವೂ ಕ್ಷೇಮ ವಿಚಾರಿಸುವ ಸ್ನೇಹಿತೆಯರು... ಟೀಂ ಲೀಡರುಗಳು, ಎಲ್ಲರ ಪ್ರಯತ್ನ, ಸಮಯಪ್ರಜ್ನೆ.... ಸಮರ್ಪಣೆಯ ಫಲ ಇಂದಿನ ಕಾರ್ಯಕ್ರಮ....
ಕಾರ್ಯಕ್ರಮದ ಆಡಿಯೋ, ವಿಡಿಯೋ, ಫೋಟಗಳನ್ನು ಯಥಾಶಕ್ತಿ ನಮ್ಮ ಪ್ರಧಾನ ಗ್ರೂಪಿನಲ್ಲಿ ಹಂಚಿಕೊಂಡಿದ್ದು, ಕಾರ್ಯಕ್ರಮಕ್ಕೆ ಬರಲಾಗದವರನ್ನೂ ತಲುಪಿದೆ ಅಂದುಕೊಳ್ಳುತ್ತೇನೆ... ಬ್ಲಾಗಿನಲ್ಲಿ ಫಾರೂಕ್ ನೆರವಿನಿಂದ ಅಚ್ಚೊತ್ತಿದೆ. ಎಲ್ಲ ವಿಡಿಯೋಗಳು ಯೂಟ್ಯೂಬಿನಲ್ಲಿ ಅಚ್ಚುಕಟ್ಟಾಗಿ ಸಂಗ್ರಹವಾಗಲಿದೆ.

ಈ ದಿನ ಇತಿಹಾಸವಾಗದಿರಲಿ... ವರ್ತಮಾನವಾಗಿ ಆಗಾಗ ದೊರಕಲಿ ಎಂಬ ಆಶಯ...

-KM (15-12-2019)

No comments: