ಮರಣಶಯ್ಯೆಯಲ್ಲಿರುವ ಚೇತನವ "ಸಾಯಿಸಿದ್ದು" ಸರಿಯೇ?!

ದೇಶ ಕಂಡ ಮಹಾನ್ ಗಾಯಕರೊಬ್ಬರು ತೀವ್ರ ಅನಾರೋಗ್ಯದಿಂದ ಚಿಂತಾಜನಕ‌ ಸ್ಥಿತಿಯಲ್ಲಿ, ಚಿಕಿತ್ಸೆ ಪಡೆದುಕೊಂಡು ಆಸ್ಪತ್ರೆಯಲ್ಲಿದ್ದಾರೆ. ಇಂದು (21/08/20) ಬೆಳಗ್ಗೆ 8 ಗಂಟೆ ತನಕವೂ ಅವರ ಆರೋಗ್ಯದ ಕುರಿತು ಯಾವುದೇ ಋಣಾತ್ಮಕ ಸುದ್ದಿಯನ್ನು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೃದ್ಯರಾಗಲೀ, ಜವಾಬ್ದಾರಿಯುತ ಸುದ್ದಿ ಮಾಧ್ಯಮಗಳಾಗಲೀ ಹೇಳಿರಲಿಲ್ಲ, ಪ್ರಕಟಿಸಿರಲಿಲ್ಲ. ಆದರೂ ಹಲವಾರು ಮಂದಿ Facebook ಗೋಡೆ ಮತ್ತು Whatsapp statusಗಳಲ್ಲಿ ಶ್ರೀಯುತರಿಗೆ ಬಹಿರಂಗವಾಗಿ ಶ್ರದ್ಧಾಂಜಲಿ, RIP ಮತ್ತು ಮತ್ತು ಓಂ ಶಾಂತಿಯನ್ನು ದಾಖಲಿಸಿದ್ದಾರೆ....
ಅಂತಹ status ಒಂದರ screenshot ಈ post ಜೊತೆಗಿದೆ. 

ನನ್ನಲ್ಲಿ ಮೂಡಿರುವ ಪ್ರಶ್ನೆಗಳು:

1) ಯಾವುದೇ ಮಾಧ್ಯಮದ ಮೂಲಕ‌ ಅಥವಾ ಹೆಲ್ತ್ ಬುಲೆಟಿನ್ ಮೂಲಕ ಪ್ರಕಟವಾಗದ ಸುದ್ದಿ ಜಾಲತಾಣಗಳ ಸುದ್ದಿವೀರರಿಗೆ ತಲಪಿದ್ದು ಹೇಗೆ?!

2) TRPಗೋಸ್ಕರ ಮಾಧ್ಯಮಗಳು ಏನನ್ನೂ ಪ್ರಕಟಿಸುತ್ತವೆ, ಕಿರುಚುತ್ತವೆ, ಭಯ ಹುಟ್ಟಿಸುತ್ತವೆ ಅಂತೆಲ್ಲ ಹೇಳ್ತಾನೆ ಇರ್ತೀರಿ. ನಿನ್ನೆ ಯಾವ ಮಾಧ್ಯಮ ಅ ಮಹಾನ್ ಚೇತನ ಇನ್ನಿಲ್ಲ‌ ಅಂತ ಪ್ರಕಟಿಸಿದೆ ಹೇಳಿ? ಪ್ರಕಟಿಸಿಲ್ಲ ಅಲ್ವ? 

3) ಮಾಧ್ಯಮಗಳು ಕೆಲಸ ಮಾಡಲು TRP, Circulation ಎರಡೂ ಬೇಕು. ಆದಾಗ್ಯೂ ಜವಾಬ್ದಾರಿಯುತ ಮಾಧ್ಯಮಗಳು ಖಚಿತಪಡಿಸದೆ ಏನನ್ನೂ ಪ್ರಕಟಿಸುವುದಿಲ್ಲ. ಆ ವಿಷಯ ಪಕ್ಕಕ್ಕಿರಲಿ. Status, Facebook postಗಳಿಗೆ TRP ಹಂಗಿಲ್ಲ ತಾನೆ? ಮತ್ಯಾಕೆ "ಅಧಿಕೃತ" ವಲ್ಲದ ಸುದ್ದೀನ ಪ್ರಚಾರ ಮಾಡಿದ್ರಿ? ನಾನೇ ಇಡೀ ಜಗತ್ತಿಗೆ ತಿಳಿಸಿದ್ದು ಅನ್ನಿಸಿಕೊಳ್ಳುವ ನಿಜವಾದ ಹಪಹಪಿಕೆ ಇರುವುದು ಯಾರಿಗೆ? 

4) ಸೂಕ್ಷ್ಮತೆ, ಜವಾಬ್ದಾರಿ ಅನ್ನುವುದು ಇರಬೇಕಾದ್ದು ಮಾಧ್ಯಮಗಳಿಗೆ ಮಾತ್ರವೇ? ಅಥವಾ ಜಾಲತಾಣ ಬಳಸುವ ಪ್ರತಿಯೊಬ್ಬರಿಗೂ ವೈಯಕ್ತಿಕ ನೆಲೆಯಲ್ಲೂ ಜವಾಬ್ದಾರಿ, ಸೂಕ್ಷ್ಮತೆ ಇರಬೇಡವೇ?

5) ಸುಳ್ಳು ಸುದ್ದಿಯನ್ನು ಖಚಿತಪಡಿಸದೇ ಪ್ರಚಾರ ಮಾಡಿದ್ದು, ಶೇರ್ ಮಾಡಿದ್ದು ಭಯ ಹುಟ್ಟಿಸಿದ ಕಾರ್ಯ ಅಲ್ಲವೇ? 

6) ಒಬ್ಬರು ಮಹಾನ್ ಚೇತನ‌ವನ್ನು ಉಳಿಸಿಕೊಳ್ಳಲಾಗಲಿಲ್ಲ ಅಂದುಕೊಳ್ಳೋಣ. ಹಾಗಿದ್ದಾಗ್ಯೂ, ಯಾರಾದರೂ ಅದನ್ನು ಅಧಿಕೃತ ಪ್ರಕಟಿಸುವ ಮೊದಲೇ ಶ್ರದ್ಧಾಂಜಲಿ ಹಾಕುವ ಆತುರ ಬೇಕೆ? ಅದು ಆ ಚೇತನಕ್ಕೆ ನಾವು ಸಲ್ಲಿಸುವ ಅಗೌರವ ಅಲ್ಲವೇ?

7) ಸುದ್ದಿಗಳನ್ನು ತಿಳಿಸಲು ಸುದ್ದಿ ಮಾಧ್ಯಮಗಳಿವೆ, ಇನ್ನು ಸಕ್ರಿಯವಾಗೇ ಇವೆ. ಸುದ್ದಿಗಳನ್ನು ಖಚಿತಪಡಿಸಿಯೇ ಪ್ರಕಟಿಸಲು ಮಾಧ್ಯಮಗಳಿಗೆ ತಮ್ಮದೇ ಆದ ಮೂಲಗಳಿವೆ.  ಮೊಬೈಲ್‌ ನಲ್ಲೇ ಸುದ್ದಿ ತಿಳಿಯಲು ಸುದ್ದಿ ಜಾಲತಾಣಗಳಿವೆ...ಆದಾಗ್ಯೂ ನನ್ನ status ನೋಡಿಯೇ ಜನರಿಗೆ ಸುದ್ದಿಗಳು ತಿಳಿಯುತ್ತವೆ  ಅನ್ನುವ ಹುಚ್ಚು ಭ್ರಮೆ ಯಾಕೆ?

8) ಆಯ್ತು, ಯಾರೋ ಸುಳ್ಳು ಸುದ್ದಿನ ತಮ್ಮ‌ statusನಲ್ಲಿ ಹಾಕಿದ್ದಾರೆ ಅಂದ್ಕೊಳ್ಳೋಣ. ಅದನ್ನು ಖಚಿತ ಪಡಿಸದೆ ಯಾಕೆ ನಂಬ್ತೀರ? ಯಾಕೆ ಶೇರ್ ಮಾಡ್ತೀರಿ?

9) ಮಾಧ್ಯಮಗಳು ನೆಗೆಟಿವ್ ವಿಚಾರಕ್ಕೆ ಪ್ರಚಾರ ಕೊಡ್ತವೆ ಅಂತ ಆರೋಪಿಸ್ತಾರೆ. ನಿನ್ನೆಯ ಬೆಳವಣಿಗೆಯಲ್ಲಿ ನೆಗೆಟಿವ್ ಸುದ್ದಿಯನ್ನ ಹರಡಿದ್ದು ಯಾರು? ನೋಡಿ ಇವತ್ತು ಬೆಳಗಿನ ತನಕ (ಈಗ 8 ಗಂಟೆ) ಯಾವ ಮಾಧ್ಯಮವೂ ಅವರು ನಿಧನರಾದರು ಅಂತ ಪ್ರಕಟಿಸಿಲ್ಲ.

10) ಮಾಧ್ಯಮ ಸರಿ ಇಲ್ಲ, ಸೂಕ್ಷ್ಮತೆ ಇಲ್ಲ, ಧನಾತ್ಮಕ ಚಿಂತನೆ ಇಲ್ಲ ಅಂತೆಲ್ಲ ದೂರುವವರು ಈ ಪ್ರಕರಣ ಹಾಗೂ ಈ ಹಿಂದೆ ನಡೆದ ಇಂತಹ ಅನೇಕ ಆತುರದ ಶ್ರದ್ಧಾಂಜಲಿ ಪ್ರಕರಣಗಳಿಂದ ಒಂದು ವಿಚಾರ ಅರ್ಥ ಮಾಡಿಕೊಳ್ಳಬೇಕು. ಜವಾಬ್ದಾರಿ ಅನ್ನುವುದು ಅವರಿವರಲ್ಲಿ ಮಾತ್ರ ಅಲ್ಲ, ನಮ್ಮೊಳಗೂ, ಪ್ರತಿಯೊಬ್ಬರೊಳಗೂ ಇರಬೇಕು!

-ಕೃಷ್ಣಮೋಹನ.

No comments: