ಅಚ್ಚರಿ!

 

(ಸಣ್ಣಕಥೆ)

...................

ಕಡಲ ತಡಿಯಲ್ಲಿ ಮಗಳೊಂದಿಗೆ ಕುಳಿತ ನಳಿನಾಕ್ಷಿಗೆ ದುಃಖ ಉಮ್ಮಳಿಸಿ ಬರುತ್ತಿತ್ತು. ಈ ಹುಚ್ಚರ ಮಾತು ಕೇಳಿ ತಾನು ಬಂದಿದ್ದೇ ತಪ್ಪಾಯಿತು. ತನ್ನನ್ನು ಹೀಗೂ ಇವರು ಮಂಗ ಮಾಡಿದ್ದು ಸಾಕು ಅಂತ ಅವಳಿಗೆ ಸಿಟ್ಟು ಉಕ್ಕಿ ಬರುತ್ತಿತ್ತು... ಇನ್ನಿಲ್ಲಿ ಹುಚ್ಚರ ಹಾಗೆ ಕಾಯುವುದಕ್ಕೆ ಅರ್ಥವೇ ಇಲ್ಲ ಅನ್ನಿಸಿತು...

 

ಅಷ್ಟಕ್ಕೂ ವಿಷಯ ಏನು ಅಂದ್ರೆ, ಇಂದು ನಳಿನಾಕ್ಷಿಯ ಜನ್ಮದಿನ. ಮರಾಠಿ ಶಿಕ್ಷಕಿಯಾಗಿದ್ದ ನಳಿನಾಕ್ಷಿ ಇರುವುದು ಬಾಂಬೆಯಲ್ಲಿ. ಆಕೆ ಕಳೆದ ಮಾರ್ಚಿನಲ್ಲಿ ಲಾಕ್ ಡೌನ್ ಆಗುವ ಮೊದಲು ಹೊಸಂಗಡಿಯ ಕೂಳೂರು ಚಿನಾಲದ ತರವಾಡು ಮನೆಗೆ ಬಂದವಳು ಅಲ್ಲಿ ಮಗಳೊಡನೆ ಬಾಕಿ ಆಗಿದ್ದಳು. ವಾಪಸ್ ಬಾಂಬೆಗೆ ಹೋಗಲು ಆಗಿರಲಿಲ್ಲ. ಈ ನಡುವೆ ವರುಷದ ಹಿಂದೆ ಅವಳು ಡಿಗ್ರಿ ಕಲ್ತಿದ್ದ ಕಾಲೇಜಿನ ಹುಡುಗರು ಸೇರಿ ಒಂದು ವಾಟ್ಸಪ್ ಗ್ರೂಪು ಮಾಡಿದ್ದು, ಅವಳನ್ನೂ ಅದಕ್ಕೆ ಸೇರಿಸಿದ್ದರು. ಆ ಗ್ರೂಪಿನಲ್ಲಿ ಎಲ್ಲರ ಬರ್ತ್ ಡೇ ಯಾವಾಗ ಅಂತ ತಿಳಿದುಕೊಳ್ಳುವ ವ್ಯವಸ್ಥೆ ಇತ್ತು. ಹಾಗಾಗಿ ಯಾರೂ ತಮ್ಮ ಬರ್ತ್ ಡೇಯನ್ನು ಮುಚ್ಚಿಡುವ ಹಾಗಿರಲಿಲ್ಲ.

ನಿನ್ನೆ ಸಂಜೆ ಗ್ರೂಪಿನಲ್ಲಿ ನಳಿನಾಕ್ಷಿಯ ಬರ್ತ್ ಡೇ ವಿಚಾರ ಚರ್ಚೆಯಾಗಿತ್ತು. ಅನ್ ಲಾಕ್ 3.0 ದೇಶಾದ್ಯಂತ ಆರಂಭವಾಗಿದ್ದು, ಕೊರೋನಾ ಬೇಸರದ ನಡುವೆ ಈ ಬರ್ತ್ ಡೇಯನ್ನು ಗಡದ್ದಾಗಿ ಆಚರಿಸುವ ಅಂತ ಗ್ರೂಪಿನಲ್ಲಿ ಚರ್ಚೆ ನಡೆದಿತ್ತು. ನಾವು ಹೇಗಾದರೂ ಸಮುದ್ರದ ದಡದಲ್ಲೇ ತಲಪಾಡಿಯ ಗಡಿ ದಾಟಿ ಕಣ್ವತೀರ್ಥ ಬೀಚಿಗೆ ಬರುತ್ತೇವೆ. ನೀವೂ ಮನೆಯವರೊಂದಿಗೆ ಅಲ್ಲಿಗೇ ಬನ್ನಿ ಬರ್ತ್ ಡೇ ಮಾಡುವ. ಮಧ್ಯಾಹ್ನ 2 ಗಂಟೆಗೆ ಸರಿಯಾಗಿ ಕಣ್ವತೀರ್ಥಕ್ಕೆ ಬನ್ನಿ ಅಂತ ನಿನ್ನೆ ಸಂಜೆಯಷ್ಟೇ ಗುಣಶೀಲ, ದುಷ್ಟಮೋಹನ, ಜಗನ್ನಾಥ, ಪ್ರೀತಿಲಕ್ಷ್ಮೀ, ಭಗೀರಥ ಮೊದಲಾದವರು ಒತ್ತಾಯಿಸಿದ್ದರು. ಈ ಬರ್ತ್ ಡೇಯನ್ನು ಗಡದ್ದಾಗಿ ಆಚರಿಸಿ ಅಭ್ಯಾಸವಿಲ್ಲದಿದ್ದರೂ ಸ್ನೇಹಿತರ ಒತ್ತಾಯಕ್ಕೆ ಕಟ್ಟು ಬಿದ್ದು ನಳಿನಾಕ್ಷಿ ಬೀಚಿಗೆ ಬಂದಿದ್ದಳು. 3 ಗಂಟೆ ದಾಟಿ 4 ಆಗುತ್ತಾ ಬಂದರೂ ಯಾರನ್ನೂ ಕಾಣದೆ ಆಕೆಗೆ ನಿರಾಶೆಯಾಯಿತು.

ಕಪ್ಪು ಮೋಡ ಕವಿದು ಇನ್ನೇನು ಮಳೆ ಸುರಿಯುವ ಹಾಗಿತ್ತು. ಆಕೆ ಮಗಳೊಡನೆ, ನಮ್ಮ ಇಲ್ಲಡೆ ಪೋಯಿ ಬಾಬ, ಮುಕುಲೆನ್ ನಂಬುದು ಪೊಕ್ಕಡೆ ಇಡೆ ಮುಟ್ಟ ಬರ್ಪಿ ಲೆಕ್ಕ ಆಂಡ್...ಅನ್ನುತ್ತಾ ಮನೆ ಕಡೆ ಹೊರಟಳು...

 

..........

 

ಅಷ್ಟೊತ್ತಿಗೆ... ಎಲ್ಲಿದ್ದರೋ ಗೊತ್ತಿಲ್ಲ!

ಹೋ... ಅಂತ ಕಿರುಚುತ್ತಾ ಹತ್ತಾರು ಮಂದಿಯ ತಂಡ ಮರಗಳ ಎಡೆಯಿಂದ ಓಡಿ ಬಂತು. ಅರೆ, ಎಲ್ರೂ ತನ್ನ ವಾಟ್ಸಪ್ ಗ್ರೂಪಿನ ಸ್ನೇಹಿತರು... ಬಾಡಿದ್ದ ನಳಿನಾಕ್ಷಿಯ ಮುಖ ಮತ್ತೆ ಅರಳಿತು... ಗುಣಶೀಲ, ಜಗನ್ನಾಥ, ದುಷ್ಟ, ಭಗೀರಥ, ಪ್ರೀತಿಲಕ್ಷ್ಮೀ, ನವನವೀನ ಶೆಟ್ಟಿ, ಅಚಿನ್ ಸಲ್ಮೇಡಾ ಎಲ್ರೂ ಇದ್ರು....

ಈ ಏತ್ ಪೊರ್ತು ಕಾಪುವ ಪಂಡ್ದ್ ಎಂಕ್ಲುಲ ಮರತ ಇಡೆಟ್ ಉಂತುದು ತೂವೊಂದಿತ್ತ, ಉಂತುವನ, ಪೋಪನ ಪಂಡ್ದ್. ಎಂಕುಲು ಎಕಡೇ ಬೈದ, ನಿಕ್ಕ್ ಸರ್ ಪ್ರೈಸ್ ಕೊರೋಡ್ ಪಂಡ್ದ್ ಅಂತ ಗುಣಶೀಲ ಹೇಳಿದಾಗ ನಳಿನಾಕ್ಷಿಗೆ ಹೋದ ಜೀವ ಮತ್ತೆ ಬಂದ ಹಾಗಾಯ್ತು...

 

ಹಾಗಾದ್ರೆ, ಇನ್ನು ತಡ ಯಾಕೆ ಬರ್ತ್ ಡೇ ಆಚರಣೆ ಮಾಡುವ ಅಂತ ಹೇಳಿದ ಜಗನ್ನಾಥ ದೊಡ್ಡದೊಂದು ಪೊಟ್ಟಣ ತೆರೆದ ಅದರಲ್ಲೊಂದು ಒಳ್ಳೆ ಹಣ್ಣಾದ ಹಲಸಿನ ಹಣ್ಣು ಹಾಗೂ ದೊಡ್ಡದೊಂದು ತಲವಾರು ಇತ್ತು!

ಅದನ್ನು ನೋಡಿ ನಳಿನಾಕ್ಷಿಗೆ ಆಶ್ಚರ್ಯ ಆಯ್ತು.. ಅವಳು ಹೇಳಿದಳು, ಓ ಪುಣ್ಯಾತ್ಮ, ಈ ನನಲ ಈ ಪೆಲಕ್ಕಾಯಿನ್ ಬುಡ್ದುಜ್ಜನ. ಅವೆನೇ ಪತ್ತೊಂದು ಏತ್ ತಿರ್ಗ್ವ ಮಾರಾಯ... ಬೇತೆಲ ಪರ್ದುಂಲು ಉಂಡು, ಒರ ತೂಲ

ಅದಕ್ಕೆ ಜಗನ್ನಾಥ ಹೇಳಿದ... ಹಲೋ ಇದು ಪೆಲಕ್ಕಾಯಿ ಅಲ್ಲ, ಪೆಲಕ್ಕಾಯಿ ಥರ ಡಿಸೈನ್ ಇರುವ ವಿಶೇಷವಾದ ಕೇಕ್ ಪೆಲಕ್ಕಾಯಿ ಫ್ಲೇವರ್ ನದ್ದು, ಪೆಲಕ್ಕಾಯಿ ಡಿಸೈನ್ ಅಷ್ಟೇ... ನೀವಿಗ ತಲವಾರಿನಿಂದ ಕೇಕ್ ಕಟ್ ಮಾಡಿ ಅಷ್ಟೇ....

ಕೊನೆಗೂ ಸ್ನೇಹಿತರ ಶುಭ ಕೋರುವ ಹಾಡಿನ ನಡುವೆ ನಳಿನಾಕ್ಷಿ ತಲ್ವಾರಿನಿಂದ ಪೆಲಕ್ಕಾಯಿ ಕೇಕ್ ಕಟ್ ಮಾಡಿ ಬರ್ತ್ಡೇ ಆಚರಿಸಿದಳು. ಎಲ್ಲರಿಗೂ ಕೇಕ್ ತಿನ್ನಿಸಿದ್ದಾಯಿತು.

 

..........

 

ಬೇಡ ಬೇಡ ಅಂದರೂ ಕೇಳದೆ ಜಗನ್ನಾಥ ಹಾಗೂ ದುಷ್ಟ ಕೆಟ್ಟದಾಗಿ ಒಂದು ಮರಾಠಿ ಹಾಡನ್ನು ತಪ್ಪು ತಪ್ಪಾಗಿ ಹೇಳಿ ಎಲ್ಲರ ತಲೆ ಕೆಡಿಸಿದರು. ಆಗ ಮನಸ್ಸಿನಲ್ಲೇ ನಳಿನಾಕ್ಷಿ ನಿರ್ಧಾರ ಮಾಡಿದಳು. ತಪ್ಪಿ ಕೂಡಾ ಇಂತಹ ಹುಚ್ಚರಿಗೆ ಮರಾಠಿ ಕಲಿಸ್ಬಾರ್ದು, ಭಾಷೆಯ ಮರ್ಯಾದೆ ತೇಗೀತಾರೆ, ಅರ್ಧರ್ಧ ಕಲಿತ್ರೆ ಹೀಗೇ ಆಗೋದು ಅಂತ...”!

ನಂತರ ಒಬ್ಬೊಬ್ರೇ ಗಿಫ್ಟ್ ಕೊಡಲು ಶುರು ಮಾಡಿದ್ರು... ಗುಣಶೀಲ ತನ್ನ ಹಾಡುಗಳ ಸಿ.ಡಿ. ಪ್ರೆಸೆಂಟ್ ಮಾಡಿದ್ರೆ, ದುಷ್ಟ ಅವತ್ತಿನ ಪೇಪರನ್ನೇ ಗಿಫ್ಟ್ ಕೊಟ್ಟ. ಜಗನ್ನಾಥ ಹುಲಿವೇಷದ ಸಣ್ಣ ಪ್ರತಿಕೃತಿ ಕೊಟ್ಟರೆ, ಪ್ರೀತಿಲಕ್ಷ್ಮೀ ತಲೆದಿಂಬನ್ನು ಉಡುಗೊರೆಯಾಗಿ ಕೊಟ್ಟಳು!

ಎಲ್ಲ ಆಗುವಾಗ ಒಂದು ಸ್ಕೂಟರ್ ಬಂದು ನಿಂತಿತು. ಹೆಲ್ಮೆಟ್ ತೆಗೆದಾಗ ಗೊತ್ತಾಯಿತು. ಅದು ಮಂಗಳೂರಿನ ಲೆಕ್ಕಪರಿಶೋಧಕಿ ವಿದ್ಯಾರಶ್ಮಿ ಅಂತ. ಸಾರಿ ಸಾರಿ, ಯಾನ್ ವಂತೆ ಬಿಝಿ ಇತ್ತೆ. ಇತ್ತೆ ಮೂಜಿ ಗಂಟೆ ಆನಗ ಸಡನ್ ನೆಂಪಾಂಡ್ ನಳಿನಿನ ಬರ್ತ್ ಡೇ ಬಂಡ್ದ್. ಅಂಚಾದ್ ತಡ ಆಂಡ್. ಕುಡೊರ ಸಾರಿ ಆವೆ.... ಅವಳು ಬ್ಯಾಗಿನಿಂದ ಐಡಿಯಲ್ ಪಾರ್ಲರಿನಿಂದ ತಂದ ಫ್ಯಾಮಿಲಿ ಪ್ಯಾಕ್ ಐಸಿ ಕ್ರೀಂ ಗಿಫ್ಟ್ ನೀಡಿದಳು...

ನಂತರ ಜಗನ್ನಾಥ ಶುಭ ಕೋರುವ ಭಾಷಣ ಮಾಡಿದ...

ಇವತ್ತು ಜನ್ಮದಿನ ಆಚರಿಸುವ ನಳಿನಾಕ್ಷಿ ಅವರಿಗೆ ನನ್ನದೊಂದು ಮನವಿ ಇದೆ. ತಾವು ಯಾವಾಗ ಬಾಂಬೆಯಿಂದ ಊರಿಗೆ ಬರ್ತೀರಿ, ಯಾವಾಗ ಹೋಗ್ತೀರಿ ಅಂತ ನಮಗೆ ಗೊತ್ತಾಗುವುದಿಲ್ಲ. ಆದ್ದರಿಂದ ತಾವು ಬರುವ ಮೊದಲು ಹಾಗೂ ಹೋಗುವ ಮೊದಲು ಸ್ಥಳೀಯ ಕೇಬಲ್ ಚಾನೆಲ್ ಮೂಲಕ ಜಾಹೀರಾತು ನೀಡಬೇಕು... ಇದರಿಂದ ನಮಗೂ ಪಾರ್ಟಿ ಕೇಳಲು, ಕಡಿಯಲು, ಕುರಿ ಮಾಡಲು ಅನುಕೂಲವಾಗುತ್ತದೆ... ಇಷ್ಟು ಹೇಳಿ ನನ್ನ ಮಾತು ಮುಗಿಸುತ್ತೇನೆ. ಪೆಲಕ್ಕಾಯಿಯುಂ ಗೆಲ್ಗೆ...

ಎಲ್ಲ ಆದಾಗ ಆಟೋದಲ್ಲಿ ಒಂದು ಜನ ಬಂದಿಳಿಯಿತು. ಅದು ಮತ್ಯಾರೂ ಅಲ್ಲ, ಉಪನ್ಯಾಸಕ ಭಗೀರಥ!!!

ಏನು ನಡೀತಾ ಇದೆ ಇಲ್ಲಿ, ವಿಷಯ ಏನು?”

ಭಗೀರಥ ಶುರುವಿನಿಂದ ಕೇಳಿದಾಗ ಜನ್ನಾಥನ ತಾಳ್ಮೆ ತಪ್ಪಿತು... ಈ ಜನಕ್ಕ್ ಓವ್ಲ ನೆನೆಪುಪ್ಪುಜ್ಜಿ, ಬೊಕ್ಕ ಈ ಜನ ಈಡೆ ಮುಟ್ಟ ಬೈದಿನಿ ಎಂಚ... ಅವ ಹೇಳಿದೆ ಓ ಮಾಷ್ಟ್ರೇ ಮೂಲು ಇನಿ ಮಾರ್ನೆಮಿ ಆವೊಂದುಂಡು. ನಳಿನಾಕ್ಷಿಲ ಯೇಸ ಪಾಡುವಲ್ಗೆ....

 

ಆಗ ಸಡನ್ ಭಗೀರಥನಿಗೆ ನೆನಪಾಯ್ತು... ಓ ಸಾರಿ ಸಾರಿ ಇವತ್ತು ಅವಳ ಬರ್ತ್ಡೇ ಅಲ್ವ... ಕ್ಷಮಿಸಿ ಕ್ಷಮಿಸಿ, ನನಗೆ ಒಮ್ಮೊಮ್ಮೆ ಕಣ್ಣೆಲ್ಲ ಮಯ ಮಯ ಮಯ ಆಗುದು, ಒಮ್ಮೊಮ್ಮೇ ಎಲ್ಲ ಮರ್ತು ಹೋಗುವುದು, ಬೇಸಪ ಮಾಡ್ಬಾರ್ದು, ಬೇಸರ ಮಾಡ್ಬಾರ್ದು.... ಅಂತ್ಹೇಳಿ ಒಂದು ಪುಸ್ತಕ ತೆಗೆದು ಗಿಫ್ಟ್ ನೀಡಿದ ನೆನಪು ಶಕ್ತಿ ವೃದ್ದಿಸುವುದು ಹೇಗೆ?” ಅಂತ.

ಅಷ್ಟೊತ್ತಿಗೆ ದೂರದಿಂದ ಒಂದು ಹೆಂಗಸು ವೇಗವಾಗಿ ಓಡಿ ಬಂದು ಸಾರಿ ನಳಿನಾಕ್ಷಿ ಯಾನ್ ಪಿದಾಡ್ನಗ ತಡ ಆಂಡ್, ಸುದೆಟ್ ಬೊಲ್ಲ ಬತ್ತ್ ದ್ ಓಡ ತಿಕ್ನಗ ಕಡೆಸ್ ಡ್.... ಇಂದ ಗಿಫ್ಟ್ ದೆತ್ತೋನು, ಯಾನ್ ಬರ್ಪೆ, ಕುಡ ಬರ್ಸ ಬತ್ತಂಡ ಇಲ್ಲಡೆ ಎತ್ನಗ ಕಷ್ಟ ಆಪುಂಡು ಅಂತ ಒಂದೇ ಉಸಿರಿಗ ಹೇಳಿ... ಒಂದು ಪುಸ್ತಕವನ್ನು ಉಡುಗೊರೆಯಾಗಿ ಕೊಟ್ಟು ಬಂದಷ್ಟೇ ವೇಗವಾಗಿ ಓಡಿ ಹೋದಳು. ಅವಳು ಕೊಟ್ಟ ಪುಸ್ತಕದ ಹೆಸರು ಗುಡ್ ನೈಟ್ ಹೇಳುವ 100 ವಿಧಾನಗಳು, ಬಂದವಳು ಮತ್ಯಾರೂ ಅಲ್ಲ, ಭೀಮಾವತಿ!

………..

 

ಆಯಿತು ಇನ್ನೇನು ಹೊರಡಬೇಕು ಅನ್ನುವಷ್ಟರಲ್ಲಿ ದೂರದಿಂದ ಒಬ್ಬ ಹೋಯ್.... ಅಂತ ಬೊಬ್ಬೆ ಹಾಕಿದ್ದು ಕೇಳಿಸಿತು... ಎಲ್ಲರಿಗೂ ಆಶ್ಚರ್ಯ ಅದು ಮತ್ಯಾರೂ ಅಲ್ಲ, ಕೊಚ್ಚಿಯಿಂದ ಕೊನೆಯ ಕ್ಷಣದಲ್ಲಿ ರೈಲು ಹತ್ತಿ ಬಂದಿದ್ದ ಹಮೇಶ ರೈ. ಹಮೇಶ ರೈಗೆ ರಜೆ ಸಿಕ್ಕದ್ದರಿಂದ ಕಾರ್ಯಕ್ರಮಕ್ಕೆ ಬರುವ ಬಗ್ಗೆ ಗ್ಯಾರಂಟಿ ಇರಲಿಲ್ಲ... ಆದರೂ ನೆನಪಿಟ್ಟು ಬರುವಷ್ಟರಲ್ಲಿ 5 ಗಂಟೆಯಾಗಿತ್ತು.... ಎಲ್ಲರಿಗೂ ಶುಭ ಕೋರಿದ ಹಮೇಶ ರೈ ನಳಿನಾಕ್ಷಿಗೂ ಶುಭ ಕೋರಿ ಎಲ್ಲರನ್ನೂ ಉದ್ದೇಶಿಸಿ ಮಾತನಾಡಿದ.

ಪೂರೆರ್ಗೆಲ ಸೊಲ್ಮೆಲು... ನಿಕುಲು ಪೂರಾ ಸೇರ್ದ್ ಇನಿ ಒಂಜು ಪುಟ್ದಿ ಪರ್ಬೊನು ಆಚರಣೆ ಮಲ್ದಿನ ಎಂಕ್ ಮಸ್ತ್ ಖುಷಿ ಆಂಡ್. ಎಂಕ್ ಸುರುಕೇ ಬರೋಡೊಂದು ಇತ್ತಂಡ್. ಆಂಡ, ಕಡೆಸಂಡ್. ಆಯಿಕ್ ಮಾಪು ನಟ್ಟುವೆ. ನಮ ಏತ್ ಪೊರ್ತು ಏರ್ನೊಟ್ಟುಗು ಉಪ್ಪುವ ಪನ್ಪಿನ ಮಲ್ಲ ಇಸಯ ಅತ್ತ್. ನಂಕ್ ಅಡೆ ಬರ್ಯರ ಏತ್ ಆಸಕ್ತಿ ಉಂಡು, ಅಯಿಕ್ ನಮ ಏತ್ ಪ್ರಯತ್ನ ಮಲ್ಪುವ ಪನ್ಪಿನನೆ ಮುಖ್ಯ. ಬುಕ್ಕ ಜಗನ್ನಾಥಗ್ಲ, ದುಷ್ಟಗಲ ಯಾನೊಂಜಿ ಪಾತೆರ ಪನ್ಪೆ. ಎಂಕ್ ವಾ ಭಾಸೆದ ಮಿತ್ತ್ ಲ ಕೋಪ ಇಜ್ಜಿ. ಆಂಡ ನಿಕುಲು ಬೇತೆ ಭಾಸೆನ್ ತಪ್ಪು ತಪ್ಪಾದ್ ಪಾತೆರುನ ಸರಿ ಅತ್ತ್. ಮರಾಠಿ ಪಾತೆರ್ಲೆ. ಆಂಡ. ಸರಿ ಕಲ್ತ್ ದ್ ಪಾತೆರ್ಲೆ.. ಅಜ್ಜಿಡ ಅವು ಅರೆಬರೆ ಆಪುಂಡು... ಅಪಗಾಂಡ ಪೂರೆರೆಗ್ಲ ಎಡ್ಡೆ ಆವಡ್...

ಹಮೇಶನ ಮಾತಿಗೆ ಎಲ್ಲರೂ ತಲೆದೂಗಿದರು...

ಕಳೆದ 41 ವರ್ಷಗಳಿಂದ ಕಾಣದ ವಿಶಿಷ್ಟ ಜನ್ಮದಿನಾಚರಣೆ ನಳಿನಾಕ್ಷಿ ಪಾಲಿಗೆ ಸಿಕ್ಕಿತ್ತು... ಎಲ್ಲರಿಗೂ ವಿದಾಯ ಹೇಳಿ ಮಗಳ ಜೊತೆ ಕೂಳೂರಿಗೆ ಹೊರಟಾಗ ನಳಿನಾಕ್ಷಿಯ ಮನಸ್ಸಿನಲ್ಲಿ ಅನಿಸ್ತಾ ಇತ್ತು... ನಾವಾಗಿ ಹಂಬಲಿಸಿ ಪಡೆಯುವುದಕ್ಕಿಂತಲೂ, ತಾನಾಗಿ ಅಚ್ಚರಿಯಾಗಿ ಸಿಗುವ ಖುಷಿಗೆ ಖಂಡಿತಾ ಬೆಲೆ ಕಟ್ಟಲಾಗುವುದಿಲ್ಲ. ಅಂತಹ ಅಚ್ಚರಿಗಳು ಶಾಶ್ವತ ನೆನಪುಗಳಾಗಿ ಉಳಿಯುತ್ತವೆ ಅಂತ... ಅಷ್ಟೊತ್ತಿಗೆ ಧಾರಾಕಾರ ಗಾಳಿ, ಮಳೆ ಶುರುವಾಯ್ತು!

 

………..

 

ಕಥೆ ಭಾರಿ ಸೋಕುಂಡು!

ಕೈರಂಗಳದ ತನ್ನ ಮನೆಯಲ್ಲಿ ಕುಳಿತು ತಾನು ಓದುತ್ತಿದ್ದ ಕಥೆಯನ್ನು ಮುಗಿಸಿ ಮಂಗಳಾವನ್ನು ಮುಚ್ಚಿಡುತ್ತಾ ಮನಸ್ಸಿನಲ್ಲೇ ಜಗದೀಶ ಅಂದುಕೊಂಡ... ಅವನಿಗೆ ತನ್ನ ಕ್ಲಾಸ್ಮೇಟ್ ಹರಿಣಾಕ್ಷಿಯ ಬರ್ತ್ ಡೇ ಇವತ್ತೇ ಅಂತ ನೆನಪಾಯ್ತು... ಛೆ ನಾವು ಕೂಡಾ ಹೀಗೆಯೇ ಬರ್ತ್ ಡೇ ಆಚರಿಸಬಹುದಿತ್ತಲ್ಲ ಅಂತ ತುಂಟ ಯೋಚನೆ ಮೂಡಿಬಂತು... ತಲೆಕೊಡವಿ ಆಫೀಸಿನತ್ತ ಹೊರಟ...

 

ಈ ಪ್ರಕರಣವೂ ಕನಸೇ ಇರಬಹುದು ಅಂದುಕೊಂಡವರಿಗೆ ಇದೊಂದು ಕಥೆ ಅಂತ ತಿಳಿದು ನಿರಾಸೆ ಆಯಿತು!

-ಕೃಷ್ಣಮೋಹನ ತಲೆಂಗಳ.

 

No comments: