ಕನ್ನಡಪ್ರಭ ಸುದ್ದಿಮನೆಯ ಸಹಚರ್ಯಕ್ಕೆ 18 ವರ್ಷ ಪೂರ್ಣ...

 

ಪತ್ರಿಕೋದ್ಯಮ ವೃತ್ತಿ ಬದುಕು, ಹಾಗೂ ಕನ್ನಡಪ್ರಭ ಸುದ್ದಿಮನೆಯ ಒಡನಾಟಕ್ಕೆ ಇಂದಿಗೆ (ಅ.7, 2020) 18 ವರ್ಷಗಳು ಪೂರ್ಣಗೊಂಡವು. ಕೆಲಸಕ್ಕೆ ಸೇರಿದ್ದು ಹಾಗೂ ಮುಂದುವರಿದದ್ದು ಅಂದಿನ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಆಡಳಿತ ಹಾಗೂ ಇಂದು ಏಷಿಯಾನೆಟ್ ಮೀಡಿಯಾ ನೆಟ್ವರ್ಕ್ ಆಡಳಿತಕ್ಕೊಳಪಟ್ಟಿರುವ ಕನ್ನಡಪ್ರಭ ಪತ್ರಿಕೆಯಲ್ಲಿ.





























ಕಾಲಕ್ಕೆ ತಕ್ಕ ಹಾಗೆ ಜನರ ಬದುಕು ಬದಲಾಗಿದೆ, ಮನಃಸ್ಥಿತಿಗಳೂ ಬದಲಾಗುತ್ತಿವೆ, ಪತ್ರಿಕೆಗಳೂ ಬದಲಾಗುತ್ತಿವೆ, ಮಾಧ್ಯಮ ಲೋಕವೂ ಇವಕ್ಕೆ ಕನ್ನಡಿಯಾಗಿದೆ. ಬದಲಾಗುತ್ತಿರುವ ತಂತ್ರಜ್ಞಾನ, ಜನಜೀವನದ ಹಾಗೆ ಮಾಧ್ಯಮ ಮತ್ತು ಪತ್ರಕರ್ತರು ಕೂಡಾ ಸಮಕಾಲೀನರಾಗಿದ್ದಾರೆ, ಆಗಿದ್ದೇವೆ.

ಅರ್ಧಶತಮಾನ ಪೂರೈಸಿದ ನಾಡಿನ ಹಿರಿಯ ಪತ್ರಿಕೆಯಲ್ಲಿ 18 ವರ್ಷಗಳ ಕಾಲ ನಾನೂ ಕೂಡಾ ಸಹಪಯಣಿಗ ಎಂಬ ಭಾವನೆಯೇ ಖುಷಿಕೊಡುವಂಥದ್ದು. ಕೆಲಸಕ್ಕೆ ನೇಮಿಸಿಕೊಂಡ ಅಂದಿನ ಸಂಪಾದಕ ಶ್ರೀ ವೆಂಕಟನಾರಾಯಣ ಅವರಿಂದ ಇಂದಿನ ನಮ್ಮ ನೆಚ್ಚಿನ ಪ್ರಧಾನ ಸಂಪಾದಕರಾದ ಶ್ರೀ ರವಿ ಹೆಗಡೆ ಸರ್ ಅವರ ತನಕ ಒಟ್ಟೂ ತಂಡದ ಎಲ್ಲ ಹಿರಿ, ಕಿರಿಯರು, ಸಹೋದ್ಯೋಗಿಗಳು ನೀಡಿದ ಅವಕಾಶಗಳಿಂದಾಗಿ ಬದುಕಲು ಮತ್ತು ಜೊತೆ ಜೊತೆಗೇ ಬರೆಯಲೂ ಸಾಧ್ಯವಾಯಿತು. ಕೊರೋನಾದಂತಹ ಈ ಸಂಕಷ್ಟದ ದಿನಗಳಲ್ಲು ಕಳೆದ ಏಳು ತಿಂಗಳುಗಳಿಂದ ನಮ್ಮ ಎಲ್ಲ ಸಹೋದ್ಯೋಗಿ ಮಿತ್ರರಿಗೆ ನಮ್ಮ ಪ್ರಧಾನ ಸಂಪಾದಕರು, ಸಂಪಾದಕೀಯ ವಿಭಾಗ ಹಾಗೂ ಆಡಳಿತ ಮಂಡಳಿ ನೀಡಿದ ಧೈರ್ಯ, ಉತ್ತೇಜನ ಹಾಗೂ ಅವಕಾಶಕ್ಕಾಗಿ ಅತ್ಯಂತ ಆಭಾರಿ.

ಅನೇಕ ಹಿರಿಯರು ಕಟ್ಟಿ ಬೆಳೆಸಿದ ಹಾಗೂ ಪ್ರಸ್ತುತ ಹಿರಿಯರಾದ ರವಿ ಹೆಗಡೆ ಸರ್, ಜೋಗಿ ಸರ್, ಶ್ಯಾಮಸುಂದರ್ ಸರ್ ಸಹಿತ ಅತ್ಯಂತ ಸಮರ್ಥ ಸಂಪಾದಕೀಯ ತಂಡವನ್ನು ಒಳಗೊಂಡಿರುವ ಕನ್ನಡಪ್ರಭ, ಏಷಿಯಾನೆಟ್ ಬಳಗದ ಸದಸ್ಯರಲ್ಲಿ ನಾನೂ ಒಬ್ಬ ಎನ್ನುವುದಕ್ಕೆ ತುಂಬ ಖುಷಿ ಇದೆ. ನನ್ನ ಕನ್ನಡಪ್ರಭ ನನಗೆ ಹೆಮ್ಮೆ...

ನೇರ ದಿಟ್ಟ ನಿರಂತರ...

-ಕೃಷ್ಣಮೋಹನ ತಲೆಂಗಳ.

 

 

1 comment:

Smitha Ballal said...

ಅಭಿನಂದನೆಗಳು ಸರ್������ ಶುಭವಾಗಲಿ��