ಸೋಜಿಗದ ಸಂಜೆ ಮಲ್ಲಿಗೆ...!

ಇದು ಸಂಜೆ ಮಲ್ಲಿಗೆ, ವಿಧ ವಿಧದ ಬಣ್ಣಗಳು, ಬಣ್ಣಗಳ ಮಿಶ್ರಣ, ಉದ್ದುದ ನಾಮ, ಅವಳಿ ಬಣ್ಣ, ಉದ್ದದ ಕುಸುಮ ಶಲಾಖೆ ಉದ್ದದ ತೊಟ್ಟು ಇದರ ವಿಶೇಷ ಸೂರ್ಯಾಸ್ತದ ವೇಳೆ ಸಂಜೆ ಮಲ್ಲಿಗೆ ಅಥವಾ ಅಸ್ತಾನ ಅರಳತ್ತದೆ. ಬೆಳಗ್ಗೆ ಸೂರ್ಯೋದಯ ಹೊತ್ತಿಗೆ ಆಯುಷ್ಯ ಕಳೆದುಕೊಂಡು ಬಾಡಿರುತ್ತವೆ. ಇದೊಂಥರ ರಾತ್ರಿ ರಾಣಿಯ ಹಾಗೆ ಸೂರ್ಯ ತೆರಳಿದ ಬಳಿಕ ಅರಳುವ ಪುಷ್ಪ ಜಾತಿ.












 


ಬಿಳಿ, ಹಳದಿ, ಕೆಂಪು, ಗುಲಾಬಿ, ನಸು ಗುಲಾಬಿ, ಪಿಂಕ್, ಗಾಢ ಹಳದಿ, ಬಿಳಿ-ಕೆಂಪಿನ ದ್ವಂದ್ವ ಮಿಶ್ರಣ ಹೀಗೆ... ಹಲವು ಬಣ್ಣಗಳಲ್ಲಿ ಅರಳುತ್ತವೆ. ಮಳೆಗಾಲದಲ್ಲಿ ಸುಪುಷ್ಟವಾಗಿ ಬೆಳೆಯುವ ಈ ಗಿಡಗಳನ್ನು ನೀರು ಹಾಕಿ ಬೇಸಿಗೆಯಲ್ಲೂ ಬೆಳೆಸಬಹುದು. ಸುಲಿದ ಶೇಂಗಾ ಕಡ್ಲೆಯ ಗಾತ್ರದ ಕಪ್ಪು ಚುಕ್ಕಿ ಚುಕ್ಕಿಯಿರುವ ಬೀಜಗಳಿಂದ ಗಿಡಗಳನ್ನು ಪಡೆಯಬಹುದು. ಗಾಢ ಪರಿಮಳ ಇರುವುದಿಲ್ಲ. ಆದರೆ, ನಸು ಪರಿಮಳ ಇರುತ್ತದೆ. ಹೆಚ್ಚಿನ ಆರೈಕೆ ಇಲ್ಲದೆ ನೀರು ಹಾಕುತ್ತಾ ಬಂದರೆ ಬೆಳೆಯುತ್ತದೆ. ಇದರ ಉದ್ದದ ತೊಟ್ಟಿನಿಂದಲೇ ಯಾವುದೇ ಹಗ್ಗದ ಸಹಾಯವಿಲ್ಲದೆ ಸಂಜೆ ಮಲ್ಲಿಗೆಯ ಮಾಲೆ ಮಾಡಬಹುದು. ಒಂದಕ್ಕೊಂದು ಜಡೆಯ ಮಾದರಿಯಲ್ಲಿ ಹೂಗಳನ್ನು ನೇಯುತ್ತಾ ಹೋದರೆ ಚೆಂದದ ಮಲೆ ಸಿದ್ಧವಾಗುತ್ತದೆ.

-ಕೃಷ್ಣಮೋಹನ ತಲೆಂಗಳ.
............

ಸಂಜೆ ಮಲ್ಲಿಗೆ ಕುರಿತ ವೈಜ್ನಾನಿಕ ಮಾಹಿತಿ (ಕೃಪೆ: ವಿಕಿಪೀಡಿಯಾ)


ಸಂಜೆ ಮಲ್ಲಿಗೆ ಅಥವ ಮಿರಾಬಿಲಿಸ್ ಜಲಪ ಅಥವ ನಾಲ್ಕು ಗಂಟೆ ಹೂವು ಎಂದು ಕರೆಯಲಾಗುತ್ತದೆ.ಇದು ವಿವಿದ ಬಣ್ಣಗಳಲ್ಲಿ ದೊರೆಯುತ್ತದೆ.ಲಾಟಿನ್ನಲ್ಲಿ ಮಿರಾಬಿಲಿಸ್ ಎಂದರೆ ಅದ್ಬುತ ಎಂದಥ೯.ಉತ್ತರ ಅಮೇರಿಕಾದಲ್ಲಿ 'ಜಲಪ' ಊರಿನ ಹೆಸರು.ಸಂಜೆ ಮಲ್ಲಿಗೆಯನ್ನು ಅಲಂಕಾರಕ್ಕಾಗಿ ಬೆಳದದ್ದು. ಇದನ್ನು ಪೆರುವಿಯನ್ ಅನ್ಡಸ್ ನಿಂದ 1500 ರಲ್ಲಿ ರಫ್ತು ಮಾಡಲಾಗಿದೆ.

ಸಂಜೆ ಮಲ್ಲಿಗೆಯ ಕುತೂಹಲಕರ ಅಂಶವೆಂದರೆ ವಿವಿಧ ಬಣ್ಣಗಳ ಹೂವುಗಳು ಒಂದೇ ಗಡದಲ್ಲಿ ಏಕಕಾಲದಲ್ಲಿ ಬೆಳೆಯುವದಾಗಿದೆ. ಇದರೊಂದಿಗೆ ಒಂದೇ ಹೂ ಬೇರೆ ಬೇರೆ ರೀತಿಯ ಬಣ್ಣಗಳಲ್ಲಿ ಚಿಗುರೊಡಿಯುತ್ತದೆ. ಮಿರಾಬಿಲಿಸ್ ಜಲಪದ ಹೂವಿನ ಮತ್ತೊಂದು ಕುತೂಹಲಕಾರಿ ಅಂಶವೆಂದರೆ ಬಣ್ಣ ಬದಲಿಸುವ ವಿದ್ಯಮಾನ ಹೊಂದಿದೆ.ಉದಾಹರಣೆಗೆ ಹರಿಶಿನ ಬಣ್ಣದ ಹೂವಿನ ಮಿರಾಬಿಲಿಸ್ ಗಿಡ ಪಕ್ವತೆಯ ನಂತರ ಆ ಹೂವು ಅದರ ಬಣ್ಣವನ್ನು ಕಪ್ಪು ಗುಲಾಬಿ ಬಣ್ಣಕ್ಕೆ ಬದಲಾವಣೆಗೊಳ್ಳುತದೆ.ಅದೇ ರೀತಿ ಬಿಳಿ ಬಣ್ಣದ ಹೂಗಳು ತಿಳಿ ನೇರಳೆ ಬಣ್ಣಕ್ಕೆ ಬದಲಾವಣೆಗೊಳ್ಳುತ್ತದೆ. ಮುಸ್ಸಂಜೆ ವೇಳೆಯಲ್ಲಿ ಈ ಹೂವು ಅರಳುತ್ತದೆ.ಆದ್ದರಿಂದ ಈ ಹೂವಿಗೆ ನಾಲ್ಕು ಗಂಟೆ ಹೂವು ಎಂದು ನಾಮಪದ ಪಡೆದುಕೊಂಡಿದೆ.

ಸಂಜೆ ಮಲ್ಲಿಗೆ ದಕ್ಷಿಣ ಅಮೆರಿಕಾದಿಂದ ಬಂದಿದೆ. ಆದರೆ ಉಷ್ಣವಲಯದ ಬೆಚ್ಚಗಿನ ಸಮಶೀತೋಷ್ಣದ ಪ್ರದೇಶಗಳಲ್ಲಿ ದೇಶೀಕರಿಸಿದ ಮಾರ್ಪಟ್ಟಿದೆ. ತಂಪಾದ ಸಮಶೀತೋಷ್ಣ ಪ್ರದೇಶಗಳಲ್ಲಿ, ಮತ್ತೆ ಮೊದಲ ಮಂಜಿನಿಂದ, ಗಡ್ಡೆಯ ಮೂಲಗಳಿಂದ ಕೆಳಗಿನ ವಸಂತಕಾಲದಲ್ಲಿ ಸಾಯುತ್ತವೆ.ಸಸ್ಯ ಸೂರ್ಯನ ಬೆಳಕಿನಲ್ಲಿ ಅತ್ಯುತ್ತಮ ಬೆಳೆಯುತ್ತದೆ. ಇದು ಸುಮಾರು 0.9 ಮೀ ಎತ್ತರ ಬೆಳೆಯುತ್ತದೆ.  ಉತ್ತರ ಅಮೆರಿಕಾದಲ್ಲಿ, ಸಸ್ಯ ಬೆಚ್ಚಗಿನ, ಕರಾವಳಿಯ ಪರಿಸರದಲ್ಲಿ ವರುಷವಿಡಿ ಬೆಳೆಯುತ್ತದೆ.ಬೆಳಗ್ಗಿನ ಜಾವ ಇದರ ಸುವಾಸನೆಯನ್ನು ನೋಡಬಹುದು.ಸಾಮಾನ್ಯವಾಗಿ ಈ ಹೂ ಹರಿಶಿನ,ಗುಲಾಬಿ ಹಾಗು ಬಿಳಿ ಬಣ್ಣದಲ್ಲಿ ಇರುತ್ತದೆ.
ಹೂಗಳನ್ನು ಆಹಾರದ ಬಣ್ಣ ಬದಲಿಸಲು ಬಳಸಲಾಗುತ್ತದೆ. ಎಲೆಗಳನ್ನು ಬೇಯಿಸಿ ಅಥವಾ ಹಾಗೆ ಸೇವಿಸಬಹುದು, ಆದರೆ ತುರ್ತು ಆಹಾರವಾಗಿ ಮಾತ್ರ. ತಿನ್ನಲು ಯೋಗ್ಯವಾದ ಕಡುಗೆಂಪು ಬಣ್ಣದ ಡೈಯನ್ನು ಕೇಕ್ ಮತ್ತು ಜೆಲ್ಲಿ ಗಳ ಬಣ್ಣ ಬದಲಿಸಲು ಬಳಸಬಹುದು. ಇದನ್ನು ಡಾಪ್ಸಿ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಇದರ ಎಲೆಗಳು ಊತ ಕಡಿಮೆ ಮಾಡಲು ಬಳಸಲಾಗುತ್ತದೆ. ಎಲೆಗಳಿಂದ ಮಾಡಿದ ಕಷಾಯ ಹುಣ್ಣುಗಳ ಚಿಕಿತ್ಸೆಗಾಗಿ ಬಳಸಲಾಗುತ್ತದೆ ಹಾಗೆ ಎಲೆಯ ರಸ ಗಾಯಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.ಬೀಜಗಳನ್ನು ವಿಷಕಾರಿಯಾಗಿ ಪರಿಗಣಿಸಲಾಗುತ್ತದೆ.ಪುಡಿಮಾಡಿದ ಕೆಲವು ವಿಧಧ ಬೀಜಗಳನ್ನು ಕಾಸ್ಮೆಟಿಕ್ ಮತ್ತು ಡೈಯಾಗಿ ಬಳಸಲಾಗುತ್ತದೆ.

ಬಾಂಗ್ಲಾದೇಶಿನಲ್ಲಿ ಇದನ್ನು ಸಂಧ್ಯಮಲತಿ ಎನ್ನುತ್ತಾರೆ. ಪಾಕಿಸ್ತಾನದಲ್ಲಿ ಇದನ್ನು ಹಂಡ್ರಿರಿಕಾ ಎನ್ನುತ್ತಾರೆ. ತಮಿಳುನಾಡಿನಲ್ಲಿ ಇದನ್ನು ಅಂದಿ ಮಂದಾರೈ ಎನ್ನುತ್ತಾರೆ. ಆಂಧ್ರಪ್ರದೇಶಿನಲ್ಲಿ ಇದನ್ನು ಚಂದ್ರಕಾಂತ ಇಂದ್ರಗಾಂತಿ ಎನ್ನುತ್ತಾರೆ. ಬುಲೇರಿಯಾದಲ್ಲಿ ಇದನ್ನು ನಶ್ಟನ ಕ್ರಾಶ್ರಾವಿಕಾ ಎನ್ನುತ್ತಾರೆ. ಕೇರಳಲ್ಲಿ ನಾಲುಮನಿ ಮಾವು ಎನ್ನುತ್ತಾರೆ. ಮಹಾರಾಷ್ಟ್ರದಲ್ಲಿ ಇದನ್ನು ಗುಲಾಬಕ್ಷೀ ಎನ್ನುತ್ತಾರೆ. ಅಸ್ಸಾಮಿನಲ್ಲಿ ಇದನ್ನು ಗೋದುಲಿ ಗೋಪಾಲ್ ಎನ್ನುತ್ತಾರೆ. ಒರಿಯಾದಲ್ಲಿ ಇದನ್ನು ರಂಗಾನಿ ಎನ್ನುತ್ತಾರೆ. ಮೆಕ್ಸಿಕೊನಲ್ಲಿ ಇದನ್ನು ಮರವಲ್ಲ ಎನ್ನುತ್ತಾರೆ.

(ಇದು ವಿಕೀಪೀಡಿಯಾದಿಂದ ಎರವಲು ಪಡೆದ ಮಾಹಿತಿ).

No comments: